ಸಾರಾಂಶ
ಬದುಕನ್ನು ಗಂಭೀರವಾಗಿ ಪರಿಗಣಿಸದೇ ತುಂಬಾ ಸರಳವಾಗಿ ಕಾಣಬೇಕು. ಲೌಕಿಕ ಬದುಕು ಬಹಳ ಮುಖ್ಯವೆಂದು ಭಾವಿಸಿರುವುದರಿಂದ ಹೊನ್ನು, ಹಣ, ಹೆಣ್ಣು ಇವುಗಳ ಹಿಂದೆ ಹೋಗುತ್ತಿದ್ದೇವೆ ಎಂದು ಡಿಎನ್ ಕೃಷ್ಣ ಹೇಳಿದ್ದಾರೆ.
ಗೌರಿಬಿದನೂರು:
ರಾಷ್ಟೀಯ ಗ್ರಂಥಾಲಯ ಸಪ್ತಾಹ ಮತ್ತು ಕನ್ನಡ ರಾಜ್ಯೋತ್ಸವ ಅಂಗವಾಗಿ ನಗರದ ಕೇಂದ್ರ ಗ್ರಂಥಾಲಯವು ಪುಸ್ತಕ ಪ್ರದರ್ಶನ ಅಭಿಯಾನವನ್ನು ನ.14 ರಿಂದ ನ.20 ರವರೆಗೆ ಹಮ್ಮಿಕೊಳ್ಳಲಾಗಿತ್ತು.ನಗರದ ವಿನಾಯಕ ನಗರದಲ್ಲಿರುವ ಗ್ರಂಥಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡಾಂಬೆ ಮತ್ತು ಎಸ್.ಆರ್. ರಂಗನಾಥನ್ ಭಾವಚಿತ್ರಕ್ಕೆ ಟಿ.ಎನ್.ಕೃಷ್ಣ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಮಾತನಾಡಿ, ಬದುಕನ್ನು ಗಂಭೀರವಾಗಿ ಪರಿಗಣಿಸದೇ ತುಂಬಾ ಸರಳವಾಗಿ ಕಾಣಬೇಕು. ಲೌಕಿಕ ಬದುಕು ಬಹಳ ಮುಖ್ಯವೆಂದು ಭಾವಿಸಿರುವುದರಿಂದ ಹೊನ್ನು, ಹಣ, ಹೆಣ್ಣು ಇವುಗಳ ಹಿಂದೆ ಹೋಗುತ್ತಿದ್ದೇವೆ ಹೊರತು ಜ್ಷಾನದ ಹಿಂದೆ ಹೋಗುತ್ತಿಲ್ಲವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಚೇತನ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ನಂತರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಸಹಾಯಕ ಟಿ.ಎನ್.ಕೃಷ್ಣ ಬಹುಮಾನ ವಿತರಣೆ ಮಾಡಿದರು.ಈ ಕಾರ್ಯಕ್ರಮದಲ್ಲಿ ಚೇತನ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಲಕ್ಷ್ಮೀಪ್ರಸನ್ನ, ಎನ್.ವಿಜಯಲಕ್ಷ್ಮೀ, ಗ್ರಂಥಾಲಯ ಸಿಬ್ಬಂದಿ ನಂಜಮ್ಮ, ಭುವನೇಶ್ವರಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.ಪೋಟೋ: ರಾಷ್ಟೀಯ ಗ್ರಂಥಾಲಯ ಸಪ್ತಾಹ ಮತ್ತು ಕನ್ನಡ ರಾಜ್ಯೋತ್ಸವ ಅಂಗವಾಗಿ ಗೌರಿಬಿದನೂರಿನ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಅಭಿಯಾನವ ಹಮ್ಮಿಕೊಳ್ಳಲಾಗಿತ್ತು.