ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಶಿಕ್ಷಣಕ್ಕೆ ಎಲ್ಲಾ ಸರ್ಕಾರಗಳು ಬಹಳಷ್ಟು ಆದ್ಯತೆ ನೀಡಿದ್ದು, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ವಿದ್ಯಾರ್ಥಿ ಯಾವ ವಿಷಯದಲ್ಲಿ ಪ್ರತಿಭೆ ಹೊಂದಿದ್ದಾನೆ ಎಂದು ತಿಳಿದು ಅಂತಹ ವಿದ್ಯಾರ್ಥಿಗಳನ್ನು ಅವರು ಪ್ರತಿಭೆಗೆ ತಕ್ಕಂತೆ ಮುಖ್ಯವಾಹಿನಿಗೆ ತರುವ ಕೆಲಸ ಶಿಕ್ಷಕರ ಮೇಲಿದೆ ಎಂದು ಶಾಸಕ ಜೆ.ಟಿ. ಪಾಟೀಲ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೀಳಗಿ
ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಶಿಕ್ಷಣಕ್ಕೆ ಎಲ್ಲಾ ಸರ್ಕಾರಗಳು ಬಹಳಷ್ಟು ಆದ್ಯತೆ ನೀಡಿದ್ದು, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ವಿದ್ಯಾರ್ಥಿ ಯಾವ ವಿಷಯದಲ್ಲಿ ಪ್ರತಿಭೆ ಹೊಂದಿದ್ದಾನೆ ಎಂದು ತಿಳಿದು ಅಂತಹ ವಿದ್ಯಾರ್ಥಿಗಳನ್ನು ಅವರು ಪ್ರತಿಭೆಗೆ ತಕ್ಕಂತೆ ಮುಖ್ಯವಾಹಿನಿಗೆ ತರುವ ಕೆಲಸ ಶಿಕ್ಷಕರ ಮೇಲಿದೆ ಎಂದು ಶಾಸಕ ಜೆ.ಟಿ. ಪಾಟೀಲ ತಿಳಿಸಿದರು.ತಾಲೂಕಿನ ಕೊರ್ತಿ ಪುಕೆಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಪಂ ಹಾಗೂ ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಬೀಳಗಿ ಅವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೨೦೨೫-೨೬ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿ ಭಾರತೀಯ ವಿದ್ಯಾರ್ಥಿಗಳೇ ಇದ್ದಾರೆ. ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ ಮತ್ತು ಖೋ ಖೋ ರಾಷ್ಟ್ರ ಮಟ್ಟದ ಕ್ರೀಡೆಗಳಾಗಿವೆ. ಉತ್ತಮ ಕ್ರೀಡಾ ಪ್ರತಿಭೆಗಳಿಗೆ ಸಾಕಷ್ಟು ಸೌಲಭ್ಯ ನೀಡಲಾಗುತ್ತಿದೆ. ಮಕ್ಕಳ ಯಾವುದೇ ಚಟುವಟಿಕೆ ಇದ್ದರೂ ಅದನ್ನು ಗುರುತಿಸಿ ಆ ಮಕ್ಕಳನ್ನು ಅದೇ ದಾರಿಯಲ್ಲಿ ಸಾಗಿಸಬೇಕು. ಉತ್ತಮ ಸಮಾಜ ನಿರ್ಮಾಣ, ಮುಂದಿನ ಉತ್ತಮ ಪ್ರಜೆ ಸಿಕ್ಕರೆ ಅಂತಹ ದೇಶ ಸದೃಢವಾಗುತ್ತದೆ ಎಂದ ಅವರು, ಮಕ್ಕಳು ತಾಲೂಕು ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಜಿಲ್ಲೆ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಕಲಿತ ಶಾಲೆ, ಶಿಕ್ಷಕರ ಹೆಸರು ಬರುವಂತೆ ಮಾಡಬೇಕು. ಸಂಸ್ಕಾರ ಭರಿತ ಶಿಕ್ಷಣ ಪಡೆದ ವ್ಯಕ್ತಿಯಾಗಿದ್ದರೂ ಅವರು ಉತ್ತಮ ಪ್ರಜೆಗಳಾಗಿ ಜೀವನ ಸಾಗಿಸುತ್ತಾರೆ ಎಂದು ಹೇಳಿದರು.ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎಸ್. ಆದಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊರ್ತಿ ಗ್ರಾಪಂ ಅಧ್ಯಕ್ಷೆ ಪ್ರೇಮಾ ಮಾದರ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸಪ್ಪ ಜಿರಾಳಿ, ಶಿಕ್ಷಣ ಇಲಾಖೆ ಅಧಿಕಾರಿ ಶಿವಾಜಿ ಕಾಂಬಳೆ, ಎಸ್.ಜಿ. ತಿಪ್ಪಾರೆಡ್ಡಿ, ಎಸ್.ಎ. ಎತ್ತಿನಮನಿ, ಪರಶುರಾಮ ಮಾದರ, ಶಂಕರಗೌಡ ಪಾಟೀಲ, ಜಿ.ಎಲ್. ಮುಲ್ಲಾ, ರಮೇಶ ಜಿಂಜೂರ, ಜಗದೀಶ ಖೋತ, ವಿ.ಆರ್. ಹಿರೇನಿಂಗಪ್ಪನವರ ಸೇರಿದಂತೆ ಇತರರು ಇದ್ದರು.ಪಠ್ಯದೊಂದಿಗೆ ಪಠ್ಯೇತರ ವಿಷಯಗಳಿಗೂ ಇವತ್ತಿನ ದಿನಗಳಲ್ಲಿ ಆದ್ಯತೆ ನೀಡಬೇಕು. ಅಕ್ಷರ ಜ್ಞಾನಕ್ಕೆ ಸಿಮಿತವಾಗಬಾರದು. ಮಕ್ಕಳ ಪ್ರತಿಭೆ ಗುರುತಿಸಿ ಆ ವೇದಿಕೆಯಂದಲೇ ಮಕ್ಕಳು ಉನ್ನತ ಸ್ಥಾನಕ್ಕೆ ಬರುವಂತೆ ಮಾಡಬೇಕು. ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ. ಶಿಕ್ಷಕರು ಪಾಠ ಹಾಗೂ ಆಟದಲ್ಲಿ ತಪ್ಪು ಮಾಡಿದರೆ ಮಕ್ಕಳು ಭವಿಷ್ಯದಲ್ಲಿ ಭಾರೀ ಪರಿಣಾಮ ಬೀರಲಿದೆ, ಮಕ್ಕಳ ಕಲಿಕೆಗೆ ಪಾಲಕರು, ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಬೇಕು. ಪಠ್ಯದಲ್ಲಿ ಮಗು ಹೆಚ್ಚಿನ ಅಂಕ ಪಡೆದರೆ ಪಠ್ಯೇತರ ವಿಷಯದಲ್ಲೂ ಹೆಚ್ಚಿನ ಸಾಧನೆ ಮಾಡಬಲ್ಲದು.
- ಜೆ.ಟಿ. ಪಾಟೀಲ ಶಾಸಕರು ಬೀಳಗಿ