ಗ್ರಾಹಕರು ಹಾಗೂ ರಿಯಲ್ ಎಸ್ಟೇಟ್, ಕಟ್ಟಡ ನಿರ್ಮಾಣ ಸಂಸ್ಥೆಗಳ ಮಧ್ಯೆ ಸೇತುವೆಯಾಗಿ ಜನರ ಆಕಾಂಕ್ಷಿಗಳನ್ನು ಸಾಕಾರಗೊಳಿಸಲು ಗೋಕುಲ ರಸ್ತೆಯ ಏರ್ಪೋರ್ಟ್ ಬಳಿಯ ದೇಶಪಾಂಡೆ ಸ್ಟಾರ್ಟ್ ಅಪ್ಸ್ ಬಾಕ್ಸ್‌ ಎದುರಿನ ವಿಶಾಲ ಮೈದಾನದಲ್ಲಿ ಹಮ್ಮಿಕೊಂಡಿರುವ ‘ರಿಕಾನ್ ಎಕ್ಸ್‌ಪೋ-2026’ಕ್ಕೆ ಮಾಜಿ ಸಿಎಂ ಸಂಸದ ಜಗದೀಶ ಶೆಟ್ಟರ್‌ ಹಾಗೂ ನಟಿ ರಚಿತಾ ರಾಮ್ ಚಾಲನೆ ನೀಡಿದರು.

ಹುಬ್ಬಳ್ಳಿ:ಹುಬ್ಬಳ್ಳಿ ಮತ್ತು ಧಾರವಾಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿವೇಶನ, ಮನೆ ಹಾಗೂ ಫಾರ್ಮ್‌ಹೌಸ್ ಹೊಂದಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ನಾಗರಿಕರಿಗಾಗಿ ಕ್ರೆಡಾಯ್‌ ಹುಬ್ಬಳ್ಳಿ-ಧಾರವಾಡ ಘಟಕ ಆಯೋಜಿಸಿರುವ ಮೂರು ದಿನಗಳ "ರಿಕಾನ್ ಎಕ್ಸ್‌ಪೋ-2026’ಕ್ಕೆ ಶುಕ್ರವಾರ ಅದ್ಧೂರಿ ಚಾಲನೆ ದೊರೆಯಿತು.

ಗ್ರಾಹಕರು ಹಾಗೂ ರಿಯಲ್ ಎಸ್ಟೇಟ್, ಕಟ್ಟಡ ನಿರ್ಮಾಣ ಸಂಸ್ಥೆಗಳ ಮಧ್ಯೆ ಸೇತುವೆಯಾಗಿ ಜನರ ಆಕಾಂಕ್ಷಿಗಳನ್ನು ಸಾಕಾರಗೊಳಿಸಲು ಗೋಕುಲ ರಸ್ತೆಯ ಏರ್ಪೋರ್ಟ್ ಬಳಿಯ ದೇಶಪಾಂಡೆ ಸ್ಟಾರ್ಟ್ ಅಪ್ಸ್ ಬಾಕ್ಸ್‌ ಎದುರಿನ ವಿಶಾಲ ಮೈದಾನದಲ್ಲಿ ಹಮ್ಮಿಕೊಂಡಿರುವ ‘ರಿಕಾನ್ ಎಕ್ಸ್‌ಪೋ-2026’ಕ್ಕೆ ಮಾಜಿ ಸಿಎಂ ಸಂಸದ ಜಗದೀಶ ಶೆಟ್ಟರ್‌ ಹಾಗೂ ನಟಿ ರಚಿತಾ ರಾಮ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶೆಟ್ಟರ್‌, ಕ್ರೆಡಾಯ್‌ ಈ ಹೊಸ ಪ್ರಯತ್ನ ಶ್ಲಾಘನೀಯ. ಎಲ್ಲೆಡೆ ಅನಧಿಕೃತ ಬಡಾವಣೆಗಳು ತಲೆ ಎತ್ತುತ್ತಿವೆ. ಈ ಹಿಂದೆ ಬುಲ್ಡೋಜರ್‌ ಬಳಸಿ ಅಕ್ರಮ ಬಡಾವಣೆಗಳ ತೆರವುಗೊಳಿಸಲಾಗಿತ್ತು. ತದನಂತರದಲ್ಲಿ ಆ ಪ್ರಕ್ರಿಯೆ ನಿಂತಿದೆ. ಅಕ್ರಮ ಬಡಾವಣೆಗಳು ನಿರ್ಮಾಣವಾಗದಂತೆ ಕ್ರೆಡಾಯ್‌ ನೋಡಿಕೊಳ್ಳಬೇಕಿದೆ ಸಲಹೆ ನೀಡಿದರು.

ಹುಡಾ ಅಧ್ಯಕ್ಷ ಶಾಕೀರ ಸನದಿ ಮಾತನಾಡಿ, ಈ ವರೆಗೂ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ರಿಯಲ್ ಎಸ್ಟೇಟ್ ಎಕ್ಸ್‌ಪೋಗಳು ಈಗ ಹುಬ್ಬಳ್ಳಿಯಲ್ಲೂ ಆಯೋಜಿಸಿರುವುದು ಒಳ್ಳೆಯ ಸಂಗತಿ. ಸೈಟ್, ಫ್ಲ್ಯಾಟ್‌, ವಾಣಿಜ್ಯ ಮಳಿಗೆ, ಹೊಸ ಮಾದರಿ ನಿರ್ಮಾಣ ಸಾಮಗ್ರಿ ಹಾಗೂ ಆಧುನಿಕ ಒಳಾಂಗಣ ವಿನ್ಯಾಸಗಳನ್ನು ಒಂದೇ ಸೂರಿನಡಿ ವೀಕ್ಷಿಸಲು, ಖರೀದಿಸಲು ಕ್ರೆಡಾಯ್‌ ಸಂಸ್ಥೆ ಅವಕಾಶ ಕಲ್ಪಿಸಿದೆ. ಹುಬ್ಬಳ್ಳಿ-ಧಾರವಾಡದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಇಂಬು ನೀಡಲಿದೆ. ಇಂತಹ ಒಳ್ಳೆ ಕಲಸಕ್ಕೆ ಹುಡಾ ಸದಾ ಕ್ರೆಡಾಯ್‌ ಜತೆಗೆ ಇರಲಿದೆ ಎಂದರು.

ಕ್ರೆಡಾಯ್‌ ಹುಬ್ಬಳ್ಳಿ-ಧಾರವಾಡ ಘಟಕದ ಅಧ್ಯಕ್ಷ ಗುರುರಾಜ ಅಣ್ಣಿಗೇರಿ ಮಾತನಾಡಿ, ಕ್ರೆಡಾಯ್‌ನಿಂದ ಇದೇ ಮೊದಲ ಬಾರಿ ಒಂದು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ 150ಕ್ಕೂ ಹೆಚ್ಚು ಸ್ಟಾಲ್‌ ನಿರ್ಮಿಸಲಾಗಿದೆ. ಉತ್ತರ ಕರ್ನಾಟಕ ಮಾತ್ರವಲ್ಲದೇ ಬೆಂಗಳೂರು, ಮೈಸೂರು, ದಾವಣಗೆರೆ ಮುಂತಾದ ಜಿಲ್ಲೆಗಳಿಂದಲೂ ಪ್ರಾಪರ್ಟಿ ರಿಯಲ್ ಎಸ್ಟೇಟ್, ಬಿಲ್ಡರ್‌ಗಳು, ಕನ್ಸಲ್ಟಂಟ್‌ಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು ಭಾಗವಹಿಸಿವೆ. ದುಬೈ ಮೂಲದ ಸಂಸ್ಥೆಯೊಂದು ಪಾಲ್ಗೊಂಡಿದ್ದು ವಿಶೇಷ ಎಂದರು. ಕ್ರೆಡಾಯ್‌ ರಾಜ್ಯ ಅಧ್ಯಕ್ಷ ಪ್ರದೀಪ ರಾಯ್ಕರ್, ಕ್ರೆಡಾಯ್‌ ಹು-ಧಾ ಚೇರ್ಮನ್ ಸಂಜಯ್ ಕೊಠಾರಿ, ಪ್ರೆಸಿಡೆಂಟ್ ಎಲೆಕ್ಟ್ ಅಮೃತ್ ಮೆಹರವಾಡೆ, ಕಾರ್ಯದರ್ಶಿ ಸತೀಶ ಮುನವಳ್ಳಿ, ಕ್ರೆಡಾಯ್‌ ಮುಖ್ಯಸ್ಥ ಸೂರಜ ಅಳವಂಡಿ, ಸಂಯೋಜಕ ಇಸ್ಮಾಯಿಲ್ ಸಂಶಿ ಹಾಗೂ ಇತರ ಪದಾಧಿಕಾರಿಗಳು ಇದ್ದರು.ಹೂಡಿಕೆ ಅತ್ಯುತ್ತಮ ಆಯ್ಕೆ...ಸೈಟ್ ಮತ್ತು ಜಮೀನ ಮೇಲೆ ಹೂಡಿಕೆ ಅತ್ಯುತ್ತಮ ಆಯ್ಕೆ. ಎಲ್ಲ ವರ್ಗದವರಿಗೆ ಬೇಕಾದ ಎಲ್ಲ ಮಾಹಿತಿ, ನಿರ್ಮಾಣ ಸಾಮಗ್ರಿ ಹಾಗೂ ಸೂಕ್ತ ಮಾರ್ಗದರ್ಶನದ ವ್ಯವಸ್ಥೆಯನ್ನು ಕ್ರೆಡಾಯ್‌ ಸಂಸ್ಥೆಯವರು ಮಾಡಿದ್ದಾರೆ. ಸ್ವಂತ ಮನೆಯ ಅಭಿಲಾಷೆಯೊಂದಿಗೆ ‘ರೆಕಾನ್ ಎಕ್ಸ್‌ಪೋ-2026’ಕ್ಕೆ ಭೇಟಿ ನೀಡಿದವರ ಕನಸು ಕೆಲವೇ ದಿನಗಳಲ್ಲಿ ನನಸಾಗಲಿದೆ ಎಂದು ನಟಿ ರಚಿತಾರಾಮ್ ಹೇಳಿದರು.ಗ್ರಾಹಕರಿಗೆ ಅತ್ಯಾಕರ್ಷಕ ರಿಯಾಯಿತಿಮೊದಲ ದಿನವೇ ನಿರೀಕ್ಷೆಗೂ ಮೀರಿ ಜನರು ರಿಕಾನ್ ಎಕ್ಸ್‌ಪೋ ಗೆ ಭೇಟಿ ನೀಡಿದ್ದರು. ಡೆವಲಪರ್ಸ್‌, ಬಿಲ್ಡರ್‌, ಕಟ್ಟಡ ಸಾಮಗ್ರಿಗಳ ಸಂಸ್ಥೆ, ಎಲೆಕ್ಟ್ರಿಕ್ ಕಂಪನಿಗಳು ತಮ್ಮ ವೈವಿಧ್ಯಮಯ ಪ್ರಾಜೆಕ್ಟ್‌ಗಳ ಬಗ್ಗೆ ಗ್ರಾಹಕರಿಗೆ ಮನವರಿಕೆ ಮಾಡಿದವು. ಒಂದೇ ಸೂರಿನಲ್ಲಿ 150ಕ್ಕೂ ಹೆಚ್ಚಿನ ಸಂಖ್ಯೆಯ ಹೆಸರಾಂತ ನಿರ್ಮಾಣ ಕ್ಷೇತ್ರದ ಕಂಪನಿಗಳು ಪಾಲ್ಗೊಂಡಿದ್ದರಿದ ಜನರಿಗೆ ಸೂರು ಹೊಂದುವ ಆಯ್ಕೆಗೆ ಹೆಚ್ಚಿನ ಅವಕಾಶ ಒದಗಿತ್ತು. ಅಲ್ಲದೆ, ಅತ್ಯಾಕರ್ಷಕ ರಿಯಾಯಿತಿ ಮತ್ತು ಕೊಡುಗೆಗಳಿಂದ ಗ್ರಾಹಕರನ್ನು ತೃಪ್ತಿ ಪಡಿಸಿದರು.