ಚಿಕ್ಕಮಗಳೂರು, ಗೋ ಹತ್ಯೆ ತಡೆಯಲು ತಂದಿದ್ದ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್‌ ಸರ್ಕಾರ ಪುನರ್‌ ಪರಿಶೀಲಿಸಿ ಕಡುಕರಿಗೆ ಸಹಾಯ ಮಾಡಲು ಮುಂದಾಗಿರುವುದನ್ನು ಖಂಡಿಸಿ ಮಂಗಳವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ನಗರದ ಆಜಾದ್‌ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

- ರಾಜ್ಯ ಸರ್ಕಾರದ ವಿರುದ್ಧ ವಿಎಚ್‌ಪಿ, ಭಜರಂಗದಳ ಪ್ರತಿಭಟನೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಗೋ ಹತ್ಯೆ ತಡೆಯಲು ತಂದಿದ್ದ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್‌ ಸರ್ಕಾರ ಪುನರ್‌ ಪರಿಶೀಲಿಸಿ ಕಡುಕರಿಗೆ ಸಹಾಯ ಮಾಡಲು ಮುಂದಾಗಿರುವುದನ್ನು ಖಂಡಿಸಿ ಮಂಗಳವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ನಗರದ ಆಜಾದ್‌ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ರಂಗನಾಥ್ ಮಾತನಾಡಿ, ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿರುವ ಸಿದ್ದರಾಮಯ್ಯ ಅವರು ಹಿಂದುತ್ವದ ಉಳಿವಿಗಾಗಿ ಯಾವುದೇ ಕೊಡುಗೆ ನೀಡಿಲ್ಲ. ಕೇವಲ ಮುಸ್ಲೀಂ ಮರ ಓಲೈಕೆ ಹಾಗೂ ಅಭಿವೃದ್ಧಿಗೆ ಮಾತ್ರ ಯೋಜನೆಗಳನ್ನು ರೂಪಿಸಿ ಹಿಂದೂ ವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಗೋಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಹಿಂದಿನ ಸರ್ಕಾರದಲ್ಲಿ ಕಟ್ಟುನಿಟ್ಟಿನ ಕಾಯ್ದೆ ರೂಪಿಸಿ ಹಸುಗಳನ್ನು ಸಂರಕ್ಷಿಸುವ ಕಾರ್ಯ ವಾಗಿತ್ತು. ಆದರೆ, ಈಗ ಕಾಂಗ್ರೆಸ್ ಸರ್ಕಾರ ಪುನರ್ ಪರಿಶೀಲಿಸಿ ಕಡುಕರಿಗೆ ಸಹಾಯ ಮಾಡಲು ಹಾಲುಣಿಸುವ ಹಸು ಗಳನ್ನು ಕಸಾಯಿ ಖಾನೆಗೆ ತಳ್ಳಲು ಕಾಯ್ದೆ ಸಡಿಲಗೊಳಿಸುತ್ತಿರುವುದು ಖಂಡನೀಯ ಎಂದರು.ಹಲವಾರು ದಶಕಗಳಿಂದ ದೇಶವನ್ನಾಳಿದ ಕಾಂಗ್ರೆಸ್ ರಾಜಕಾರಣಿಗಳು ಹಿಂದೂ ರಾಷ್ಟ್ರ ಸಮಾಜದ ಏಳಿಗೆಗೆ ಯಾವುದೇ ಕೊಡುಗೆ ನೀಡಿಲ್ಲ. ಕೇವಲ ಮಾತಿಗೆ ಸಂವಿಧಾನ ರಕ್ಷಣೆ ನಮ್ಮಿಂದಲೇ ಎಂಬ ಹೇಳಿಕೆ ನೀಡುತ್ತಿವೆ. ನೈಜವಾಗಿ ಅಂಬೇಡ್ಕರ್ ಸಂವಿಧಾನವನ್ನು ಇಂದಿರಾಗಾಂಧಿ ತಿದ್ದುಪಡಿಗೊಳಿಸಿ, ಜಾತ್ಯಾತೀತ ಸೇರಿಸಿದ ಸಂವಿಧಾನವನ್ನು ಕಾಂಗ್ರೆಸ್ ರಕ್ಷಣೆ ಮಾಡುತ್ತಿವೆ ಎಂದು ದೂರಿದರು.ಅಂಬೇಡ್ಕರ್ ಮೂಲ ಸಂವಿಧಾನದಡಿ ಇಂದಿಗೂ ಹಿಂದೂಪರ ಸಂಘಟನೆಗಳು ನಡೆದುಕೊಳ್ಳುತ್ತಿವೆ. ಅವರ ಹಿಂದೂ ರಾಷ್ಟ್ರದ ಚಿಂತನೆಯಡಿ ಸಂವಿಧಾನ ಉಳಿವಿಗೆ ಸಂಘಟನೆ ಮುಖಂಡರು ಪ್ರಾಣ ಲೆಕ್ಕಿಸದೇ ನಿಷ್ಟೆಯಿಂದ ಕೆಲಸ ಮಾಡು ತ್ತೇವೆ. ಆದರೆ, ಗಾಂಧಿ ಕುಟುಂಬದ ಮೊಮ್ಮಕ್ಕಳು, ಅಜ್ಜಿ ಮಾಡಿದ ತಪ್ಪನ್ನು ಮುಚ್ಚಿ ಹಾಕಿ, ರಕ್ಷಿಸುವ ಕಾರ್ಯದಲ್ಲಿ ನಿರತವಾಗಿವೆ ಎಂದು ಟೀಕಿಸಿದರು.ಅಂಬೇಡ್ಕರ್ ಮೂಲ ಸಂವಿಧಾನದಲ್ಲಿ ಸಂಪೂರ್ಣ ಹಿಂದೂ ರಾಷ್ಟ, ಗೋಹತ್ಯೆ ನಿಷೇಧ, ಯಾವುದೇ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವಂತಿಲ್ಲ, ಹಿಂದೂ ಧರ್ಮದಲ್ಲಿ ದಲಿತರು, ಅಸ್ಪೃಶ್ಯರಿಗೆ ಮೀಸಲಾತಿ ಕೊಡಬೇಕು. ಸರ್ವಸಮಾನ ಬದುಕು, ಅಧಿಕಾರ ಹಂಚಿಕೆಗೊಳಿಸುವುದು ಅಂಬೇಡ್ಕರ್ ಆಶಯವಾಗಿತ್ತು. ಇಸ್ಲಾಂ ಮೀಸಲಾತಿ ಕೊಡಬೇಕು ಎಂಬುದು ಸ್ಪಷ್ಟವಾಗಿ ಇರಲಿಲ್ಲ ಎಂದರು.ರಾಜ್ಯದಲ್ಲಿ ಗುತ್ತಿಗೆಯಲ್ಲಿ ಮುಸ್ಲಿಂಗೆ ಶೇ.4 ಮೀಸಲಾತಿ ನೀಡಿ ಸಂವಿಧಾನ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಮುಖ್ಯ ಮಂತ್ರಿಗಳು ಕೂಡಾ ಹಿಂದೂ ವಿರೋಧೀ ಎಂದೇ ಎಲ್ಲೆಡೆ ಬಿಂಬಿತವಾಗಿದ್ದಾರೆ. ಅವರದೇ ಪಕ್ಷದ ನಾಯಕರು ದ್ವೇಷ ಭಾಷಣ, ಪಾಕಿಸ್ತಾನ ಜಿಂದಾಬಾದ್ ಕೂಗುವವರು ಹಾಗೂ ಲವ್ ಜಿಹಾದ್‌ನಲ್ಲಿ ಅಮಾಯಕ ಹಿಂದೂ ಹೆಣ್ಣು ಮಕ್ಕಳ ಸಾವಿಗೆ ಕಾರಣರಾದವರಿಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.ಆದ್ದರಿಂದ ರಾಜ್ಯದ ಮುಖ್ಯಮಂತ್ರಿ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಸಡಿಲಗೊಳಿಸಲು ಮುಂದಾದರೆ ಇಡೀ ರಾಜ್ಯಾದ್ಯಂತ ವಿಎಚ್‌ಪಿ, ಬಜರಂಗದಳ ಉಗ್ರ ಪ್ರತಿಭಟನೆ ಹಮ್ಮಿಕೊಂಡು ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರ ದಿಂದ ಕೆಳಗಿಳಿಸುವ ತನಕ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ವಿಎಚ್‌ಪಿ ಮುಖಂಡರಾದ ಆಟೋ ಶಿವಣ್ಣ, ಶ್ಯಾಮ್ ವಿ.ಗೌಡ, ಶಶಿ ಆಲ್ದೂರು, ಸಂತೋಷ್ ಕೋಟ್ಯಾನ್, ಜಸಂತಾ ಅನಿಲ್‌ಕುಮಾರ್, ಕುರುವಂಗಿ ವೆಂಕಟೇಶ್, ಗೌತಮ್, ರಂಜಿತ್‌ ಶೆಟ್ಟಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. 9 ಕೆಸಿಕೆಎಂ 1ಗೋ ಹತ್ಯೆ ತಡೆಯಲು ತಂದಿದ್ದ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್‌ ಸರ್ಕಾರ ಪುನರ್‌ ಪರಿಶೀಲಿಸಿ ಕಡುಕರಿಗೆ ಸಹಾಯ ಮಾಡಲು ಮುಂದಾಗಿರುವುದನ್ನು ಖಂಡಿಸಿ ಮಂಗಳವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ಚಿಕ್ಕಮಗಳೂರಿನ ಆಜಾದ್‌ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.