ಸಾರಾಂಶ
ಮಾಲೂರು ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅ. 31 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲು ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಕೆಲವು ರಾಜಕೀಯ ವಿದ್ಯಾಮಾನದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿದೆ. ಆದರೂ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ನಿಲ್ಲಬರದೆಂಬ ಉದ್ದೇಶದಿಂದ ಸಂಕೇತಿಕವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ.
ಕನ್ನಡ ಪ್ರಭ ವಾರ್ತೆ ಮಾಲೂರು
ಮರು ಮತ ಏಣಿಕೆ ನವೆಂಬರ್ 5 ಅಥವಾ 6 ರಂದು ನಡೆಯಲಿದೆ. ಅಂದಿನ ಫಲಿತಾಂಶ ಮಾಜಿ ಶಾಸಕರ ಪಾಲಿಗೆ ತಿರುಕನ ಕನಸಾಗಲಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಅವರು ಪಟ್ಟಣದ 19 ನೇ ವಾರ್ಡ್ ನಲ್ಲಿರುವ ಶ್ರೀ ಪಟಾಲಮ್ಮ ದೇವಾಲಯದ ಸಮೀಪ ಅಮೃತ್ 2.0 ಯೋಜನೆಯಲ್ಲಿ ಮಾಲೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿ, ಯರಗೋಳ್ ನೀರನ್ನು ಈ ಯೋಜನೆಯಡಿ ನಗರದ 31 ವಾರ್ಡ್ ಗಳಿಗೆ ನೀರು ವಿತರಿಸುವ ಕಾರ್ಯಕ್ರಮ ಇದಾಗಿದೆ ಎಂದರು.ಸಿಎಂ ಕಾರ್ಯಕ್ರಮ ರದ್ದು
ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅ. 31 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲು ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಕೆಲವು ರಾಜಕೀಯ ವಿದ್ಯಾಮಾನದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿದೆ. ಆದರೂ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ನಿಲ್ಲಬರದೆಂಬ ಉದ್ದೇಶದಿಂದ ಸಂಕೇತಿಕವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ನನ್ನ ಬಗ್ಗೆ ಟೀಕೆ ಮಾಡುವರಿಗೆ ಅಭಿವೃದ್ಧಿ ಕಾಮಗಾರಿ ಮೂಲಕ ಉತ್ತರ ನೀಡುತ್ತೇನೆ ಎಂದರು.ರಸ್ತೆ ಗುಂಡಿ ಮುಚ್ಚಲು ₹15 ಕೋಟಿ
ತಾಂತ್ರಿಕ ದೋಷದಿಂದ ಚತುಷ್ಪದ ರಸ್ತೆ ಕಾಮಗಾರಿ ತಡವಾಗುತ್ತಿದೆ. ಮುಖ್ಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು 15 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮರು ಮತ ಏಣಿಕೆ ನಡೆಯಲಿದೆ. ಆದರೆ ಫಲಿತಾಂಶ ಕನ್ನಡಿಯಂತಿದ್ದು, ಗೆಲ್ಲುವ ಭ್ರಮೆಯಲ್ಲಿರುವ ಮಾಜಿ ಶಾಸಕರ ಕನಸು ಕನಸಾಗೇ ಉಳಿಯಲಿದೆ ಎಂದರು.ನಗರಸಭೆ ಅಧ್ಯಕ್ಷೆ ವಿಜಯಲಕ್ಷ್ಮಿ ,ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ ,ಸದಸ್ಯರಾದ ಭಾರತಿ ಶಂಕರಪ್ಪ,ಮುನಿರಾಜು ಕುಟ್ಟಿ ,ಮುರಳಿಧರ್ ,ಇಮ್ತಿಯಾಜ್ ,ಪರಮೇಶ್ ,ಸುರೇಶ್,ರಂಗಪ್ಪ ,ಆಯುಕ್ತ ಪ್ರದೀಪ್ ,ಕಾಂಗ್ರೆಸ್ ಮುಖಂಡರಾದ ವಿಜಯನಾರಸಿಂಹ ,ಶೈಲಜಾ ಕೃಷ್ಣಪ್ಪ ,ಶಬ್ಬೀರ್,ಲಕ್ಷ್ಮಮ್ಮ,ಎಂ.ಪಿ.ವಿ.ಮಂಜು ಇನ್ನಿತರರು ಇದ್ದರು.)
)
;Resize=(128,128))
;Resize=(128,128))