ಪುನರ್ವಸತಿ ಸರ್ವೇ ಕಾರ್ಯಕ್ಕೆ ಬುಡಕಟ್ಟು ಸಮುದಾಯದವರ ನೇಮಿಸಿ

| Published : May 28 2024, 01:00 AM IST

ಪುನರ್ವಸತಿ ಸರ್ವೇ ಕಾರ್ಯಕ್ಕೆ ಬುಡಕಟ್ಟು ಸಮುದಾಯದವರ ನೇಮಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮೆಂದಾರೆ ಬುಡಕಟ್ಟು ಗಿರಿಜನರ ಪುನರ್ವಸತಿ ಸರ್ವೇ ಕಾರ್ಯಕ್ಕೆ ಸಮುದಾಯದ ಮೂವರು ಮುಖಂಡರನ್ನು ನೇಮಿಸಬೇಕೆಂದು ಆದಿವಾಸಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ.ಮಾದೇಗೌಡ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ಮೆಂದರೆ ಬುಡಕಟ್ಟು ಗಿರಿಜನರ ಪುನರ್ವಸತಿ ಸರ್ವೇ ಕಾರ್ಯಕ್ಕೆ ಸಮುದಾಯದ ಮೂವರು ಮುಖಂಡರನ್ನು ನೇಮಿಸಬೇಕೆಂದು ಆದಿವಾಸಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ.ಮಾದೇಗೌಡ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಪಟ್ಟಣದ ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣದ ಸಂತ್ರಸ್ತರ ಹಾಗೂ ಸಮುದಾಯ ಸಂಬಂಧ ಸಮಸ್ಯೆಗಳ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಮೆಂದರೆ ಗ್ರಾಮದಲ್ಲಿ ಮೇ 27, 28 ರ ವರೆಗೆ ಎರಡು ದಿನಗಳು ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಪುನರ್ವಸತಿ ಸಮಿತಿಯಲ್ಲಿ ಮೆಂದರೆ ಗ್ರಾಮದ ಪ್ರಮುಖ ಮುಖಂಡರ ಪ್ರತಿನಿಧಿಗಳನ್ನು ನೇಮಿಸಬೇಕೆಂದು ಕಾರ್ಯಕ್ರಮದಲ್ಲಿ ತಿಳಿಸಿದರು.

ಆದಿವಾಸಿ ಸೋಲಿಗರ ಪುನರ್ವಸತಿ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ವರದಿ ಸಲ್ಲಿಸಿ ನಿವಾಸಿಗಳ ಇಚ್ಛೆಗೆ ಅನುಗುಣವಾಗಿ ಇಲಾಖೆಗಳ ಸಮನ್ವಯತೆಯಿಂದ ಕಾರ್ಯಗತಗೊಳಿಸಬೇಕು ಸರ್ಕಾರ ಅಗತ್ಯ ಅನುದಾನವನ್ನು ನೀಡಬೇಕು ಈ ಘಟನೆಯಿಂದ ನೊಂದಿರುವ ಮೆಂದರೆ ಆದಿವಾಸಿ ಬುಡಕಟ್ಟು ಸೋಲಿಗರಿಗೆ ತಕ್ಷಣ ಸೂಕ್ತ ಪರಿಹಾರ ವಿತರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಮೂಲ ನಿವಾಸಿ ಬುಡಕಟ್ಟು ಜನರ ವೇದಿಕೆ ಕಾರ್ಯದರ್ಶಿ ಮುತ್ತಯ್ಯ ಮಾತನಾಡಿ, ತಾಲೂಕಿನಲ್ಲಿ ಇರುವ ಬುಡಕಟ್ಟು ಸಮುದಾಯದ ಜನರ ಹೇಳಿಕೆಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ನೀಡಿದೆ. ಜೊತೆಗೆ ಮೆಂದಾರೆ ಗ್ರಾಮದ ಸರ್ವ ಕಾರ್ಯ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಜಿಲ್ಲಾಡಳಿತ ಆದಿವಾಸಿ ಜನರ ಬೇಡಿಕೆಯಂತೆ ತುರ್ತಾಗಿ ಸರ್ವ ಕಾರ್ಯ ಮುಗಿಸಿ ಪುನರ್ವಸತಿ ಯೋಜನೆಗೆ ಕಾಯಕಲ್ಪ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ದೊಡ್ಡ ಸಿದ್ದಯ್ಯ, ತಾಲೂಕು ಕಾರ್ಯದರ್ಶಿ ರಂಗೇಗೌಡ, ಖಜಾಂಜಿ ಶಿವಣ್ಣ, ಕ್ಷೇತ್ರ ಮಟ್ಟದ ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಹಾಗೂ ವಿವಿಧ ಗ್ರಾಮಗಳಿಂದ ಬಂದಿದ್ದ ಬುಡಕಟ್ಟು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.