ಹಣ ನೀಡಲು ನಿರಾಕರಣೆ: ಮೂವರ ಮೇಲೆ ಚಾಕುವಿನಿಂದ ಹಲ್ಲೆ

| Published : Nov 15 2024, 12:31 AM IST

ಹಣ ನೀಡಲು ನಿರಾಕರಣೆ: ಮೂವರ ಮೇಲೆ ಚಾಕುವಿನಿಂದ ಹಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

Refusal to pay: Three attacked with a knife

-ಹಣ ನೀಡಲು ನಿರಾಕರಣೆ: ಮೂವರ ಮೇಲೆ ಚಾಕುವಿನಿಂದ ಹಲ್ಲೆ

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ನಗರದ ಬಳ್ಳಾರಿ ರಸ್ತೆಯ ಎಸ್.ಆರ್.ವೇ ಬ್ರಿಡ್ಜ್‌ ನ ಇಂಜಿನಿಯರಿಂಗ್ ಕಾಲೇಜು ಕಮಾನ್‌ ಮುಂಭಾಗ ಮದ್ಯ ಸೇವನೆಗೆ ಹಣ ನೀಡಲು ನಿರಾಕರಿಸಿದ ಮೂವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಪ್ರಾಣಭಯ ಉಂಟು ಮಾಡಿದ ಪ್ರಕರಣ ನಡೆದಿದೆ.

ವೃತ್ತಿಯಲ್ಲಿ ಲಾರಿ ಚಾಲಕ ಕಾಟಪ್ಪನಹಟ್ಟಿಯ ರವಿ, ಗಾಂಧಿನಗರದ ಶ್ರೀನಿವಾಸ್, ವೀರೇಶ್ ಮತ್ತು ಚಿತ್ತಯ್ಯ ಬುಧವಾರ ಸಂಜೆ ಮಾತನಾಡುತ್ತಾ ಕುಳಿತಾಗ ಅಲ್ಲಿಗೆ ಬಂದ ಚಕ್ರವರ್ತಿ ಎಂಬ ಯುವಕ ನನಗೆ ಕುಡಿಯಲು ಹಣಕೊಡಿ ಎಂದು ಕೇಳಿದ್ದಾನೆ. ನಮ್ಮಲ್ಲಿ ಹಣವಿಲ್ಲವೆಂದು ಹೇಳಿದ ಕೂಡಲೇ ಕೆರಳಿದ ಚಕ್ರವರ್ತಿ ಶ್ರೀನಿವಾಸ, ವೀರೇಶ್ ಮತ್ತು ಚಿತ್ತಯ್ಯ ಅವರ ಮೇಲೆ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ರವಿ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಶ್ರೀನಿವಾಸ್‌ನನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರ ಮೇಲೆ ಹಲ್ಲೆ ನಡೆಸಿದ ಚಕ್ರವರ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಡಿವೈಎಸ್ಪಿ ಟಿ.ಬಿ.ರಾಜಣ್ಣ, ಠಾಣಾ ಇನ್ಸ್‌ ಪೆಕ್ಟರ್‌ ರಾಜಫಕೃದ್ದೀನ್‌ ದೇಸಾಯಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಪಿಎಸ್‌ಐ ಕೆ.ಸತೀಶ್‌ ನಾಯ್ಕ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ಧಾರೆ.

-----

ಪೋಟೋ: ಚಳ್ಳಕೆರೆ ನಗರದ ಹೊರವಲಯದಲ್ಲಿ ಚಾಕುವಿನಿಂದ ಹಲ್ಲೆಗೊಳಗಾದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.

೧೪ಸಿಎಲ್‌ಕೆ೩