ಜನನ, ಮರಣವನ್ನು ಗ್ರಾಪಂನಲ್ಲಿ ನೋಂದಾಯಿಸಿ

| Published : May 25 2024, 12:53 AM IST

ಜನನ, ಮರಣವನ್ನು ಗ್ರಾಪಂನಲ್ಲಿ ನೋಂದಾಯಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಜನನ-ಮರಣಗಳ ಮಾಹಿತಿಯನ್ನು ೨೧ ದಿನಗಳೊಳಗೆ ನೀಡಬೇಕು. ಜನನ-ಮರಣದ ಹೆಚ್ಚು ಪ್ರತಿಗಳು ಬೇಕಾದರೆ ೫ ರು.ಗಳನ್ನು ತೆಗೆದುಕೊಳ್ಳಬೇಕು. ವಿಳಂಬ ಶುಲ್ಕ ಎಂದು ೨ ರುಪಾಯಿ ತೆಗೆದುಕೊಂಡು ಮಾಹಿತಿ ನೀಡಬೇಕು

ಕನ್ನಡಪ್ರಭ ವಾರ್ತೆ ಕೋಲಾರಜನನ- ಮರಣ ಪ್ರಮಾಣವನ್ನು ೨೧ ದಿನಗಳಲ್ಲಿ ಆಯಾ ಗ್ರಾಪಂನಲ್ಲಿ ನೋಂದಣಿ ಮಾಡಿಕೊಳ್ಳಬೇಕೆಂದು ಜಿಪಂ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ ತಿಳಿಸಿದರು. ಜಿಪಂ ಸಭಾಂಗಣದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಭೆಯಲ್ಲಿ ಜಿಪಂ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ ಮಾತನಾಡಿ, ಜನನ- ಮರಣ ಮಾಹಿತಿಯನ್ನು ಕುಟುಂಬದ ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆರ ಮೂಲಕ ಮಾಹಿತಿ ಸಂಗ್ರಹಿಸಿ ನಮೂನೆ-೧ಮತ್ತು ೨ ರಲ್ಲಿ ಮಾಹಿತಿ ಭರ್ತಿ ಮಾಡಬೇಕು ಎಂದು ಹೇಳಿದರು.

21 ದಿನದೊಳಗೆ ಮಾಹಿತಿ

ದೇಶ-ವಿದೇಶಗಳಿಗೆ ಹೋಗಲು ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಜನನ-ಮರಣ ಮಾಹಿತಿ ಪರಿಶೀಲಿಸಲು ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಕಾರ್ಯದರ್ಶಿಗಳು ಪ್ರಮುಖ ಪಾತ್ರವಹಿಸುತ್ತಾರೆ. ಜನನ-ಮರಣಗಳ ಮಾಹಿತಿಯನ್ನು ೨೧ ದಿನಗಳೊಳಗೆ ನೀಡಬೇಕು. ಜನನ-ಮರಣದ ಹೆಚ್ಚು ಪ್ರತಿಗಳು ಬೇಕಾದರೆ ೫ ರು.ಗಳನ್ನು ತೆಗೆದುಕೊಳ್ಳಬೇಕು. ವಿಳಂಬ ಶುಲ್ಕ ಎಂದು ೨ ರುಪಾಯಿ ತೆಗೆದುಕೊಂಡು ಮಾಹಿತಿ ನೀಡಬೇಕು ಎಂದರು.

ಒಂದು ತಿಂಗಳ ಆದ ಮೇಲೆ ಗ್ರಾಮ ಲೆಕ್ಕಾಧಿಕಾರಿಯವರಿಗೆ ಸಂಬಂಧಿಸಿರುತ್ತದೆ. ವಿಲೇಜ್ ಅಕೌಂಟ್ ತಹಸೀಲ್ದಾರ್ ಅನುಮತಿ ತೆಗೆದುಕೊಂಡು ಒಂದು ತಿಂಗಳ ಆದ ಘಟನೆಗಳಿಗೆ ಮಾಹಿತಿ ನೀಡಲಾಗುವುದು. ಒಂದು ವರ್ಷ ಆದ ಮೇಲೆ ಪ್ರತಿ ತಿಂಗಳ ಮಾಹಿತಿಯನ್ನು ತಾಲೂಕು ಆಫೀಸ್‌ಗೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣೆ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿ, ಕೃಷ್ಣಮೂರ್ತಿ, ವೀರಣ್ಣ ಜೆ.ಪಾಟೀಲ್ ಇದ್ದರು.