ಸಾರಾಂಶ
ಮಕ್ಕಳಿಗೆ ಮೌಲ್ಯ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ನೀಡಬೇಕಾಗಿದೆ. ಪಾಲಕರು ಕೃಷಿ ಚಟುವಟಿಕೆ, ಮನೆಗೆಲಸಕ್ಕೆ ಮಕ್ಕಳನ್ನು ಹಚ್ಚದೆ ತಪ್ಪದೆ ಶಾಲೆಗೆ ಕಳಸಬೇಕು.
ಹನುಮಸಾಗರ:
ಮಕ್ಕಳು ಕಡ್ಡಾಯವಾಗಿ ಶಾಲೆ ಬಂದಾಗ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ಮುಖ್ಯ ಶಿಕ್ಷಕ ಖಾಜಾಹುಸೇನ ಒಂಟೆಳಿ ಹೇಳಿದರು.ಸಮೀದ ಮಿಯ್ಯಾಪೂರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲಿಕೆ ಟ್ರಸ್ಟ್ ಸಹಯೋಗದಲ್ಲಿ ನಡೆದ ಶಾಲಾ ದಾಖಲಾತಿ ಮತ್ತು ಹಾಜರಾತಿ ಆಂದೋಲನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ಮೌಲ್ಯ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ನೀಡಬೇಕಾಗಿದೆ. ಪಾಲಕರು ಕೃಷಿ ಚಟುವಟಿಕೆ, ಮನೆಗೆಲಸಕ್ಕೆ ಮಕ್ಕಳನ್ನು ಹಚ್ಚದೆ ತಪ್ಪದೆ ಶಾಲೆಗೆ ಕಳಸಬೇಕೆಂದು ಮನವಿ ಮಾಡಿದರು.ಟಾಟಾ ಟಸ್ಟ್‌ನ ಸಂಯೋಜಕ ರಾಜಕುಮಾರ ಕುಂಬಾರ ಮಾತನಾಡಿ, ಮಕ್ಕಳ ಕಲಿಕೆಯಲ್ಲಿ ಪೋಷಕರ ಜವಾಬ್ದಾರಿ ಪ್ರಮುಖವಾಗಿದೆ. ಅಂದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದರು.ಇದೇ ವೇಳೆ ಬಾಲಕಿಯರು ಜಾಥಾದಲ್ಲಿ ಕುಂಭ ಹೊತ್ತು, ಇಳಕಲ್ ಸೀರೆ ತೊಟ್ಟಿದ್ದರೆ, ಬಾಲಕರು ಸ್ವಾತಂತ್ರ್ಯ ಹೋರಾಟಗಾರ ವೇಷ ಹಾಕಿದ್ದರು. ಟ್ರ್ಯಾಕ್ಟರ್ ಮುಖಾಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾ ದಾಖಲಾತಿಯ ಘೋಷಣೆ ಕೂಗುತ್ತಾ ಕೋಲಾಟ ಹಾಗೂ ದಾಖಲಾತಿಗೆ ಸಂಬಂಧಿಸಿದ ವಿಶೇಷ ಹಾಡು ಹಾಡಲಾಯಿತು.
ಅಡವಿಭಾವಿ ಗ್ರಾಪಂ ಅಧ್ಯಕ್ಷ ಶರಣಪ್ಪ ಮದ್ಲೂರ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ನಾಗಪ್ಪ ಎಂ. ಅಧ್ಯಕ್ಷತೆ ವಹಿಸಿದ್ದರು. ಶರಣಗೌಡ ಮ್ಯಾಗೇರಿ, ಗ್ರಾಪಂ ಸದಸ್ಯರಾದ ಗವಿಸಿದ್ದಪ್ಪ ಕುದುರಿ, ಶೋಭಾ ನಾಯಕ, ಬಸವರಾಜ ಹಿರೇಮನಿ, ಹನುಮಗೌಡ ಪೊಲೀಸ್‌ಪಾಟೀಲ, ಶರಣಪ್ಪ ಕಲಭಾವಿ, ಶರಣಪ್ಪ ಬಲಕುಂದಿ, ಯಲ್ಲಪ್ಪ ಕುದುರಿ, ರಾಮಣ್ಣ ಉಪ್ಪೇರಿ, ಶೇಖಪ್ಪ ಬಡಿಗೇರ, ಶಿಕ್ಷಕರಾದ ನಾಗನಗೌಡ ಪೊಲೀಸ್‌ಪಾಟೀಲ್, ಶಾಂತಾಬಾಯಿ ಪಟ್ಟಣಶೆಟ್ಟಿ, ಪರಶುರಾಮಪ್ಪ ನಾಗಣ್ಣನವರ ಸೇರಿದಂತೆ ಇತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))