ಸಾರಾಂಶ
ದೊಡ್ಡಬಳ್ಳಾಪುರ: ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರಿನ ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಷನ್, ಇಂಟಾಸ್ ಅನಿಮಲ್ ಹೆಲ್ತ್ ಮತ್ತು ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಯೋಗದಲ್ಲಿ ಎಸ್‌ಸಿ-ಎಸ್‌ಪಿ ಪ್ರಾಯೋಜನೆಯ ದತ್ತು ಗ್ರಾಮವಾದ ಹೊಸಹಳ್ಳಿಯಲ್ಲಿ ತರಬೇತಿ ಕಾರ್ಯಕ್ರಮ ಮತ್ತು ಜಾನುವಾರುಗಳ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಹನುಮಂತರಾಯ ಮಾತನಾಡಿ, ಹೈನು ರಾಸುಗಳಿಗೆ ನಿಯಮಿತವಾಗಿ ಲಸಿಕೆ ಹಾಕಿಸುವುದರಿಂದ ಅವುಗಳಿಗೆ ತಗಲುವ ರೋಗಗಳನ್ನು ತಡೆಗಟ್ಟಬಹುದು ಹಾಗೂ ಇದರಿಂದ ರೈತರಿಗೆ ಉಂಟಾಗುವ ನಷ್ಟಗಳನ್ನು ತಡೆಯಬಹುದು ಎಂದು ವಿವರಿಸಿದರು.ಕೇಂದ್ರದ ಕೃಷಿ ವಿಸ್ತರಣಾ ವಿಜ್ಞಾನಿ ಡಾ.ವೈ.ಎಂ.ಗೋಪಾಲ್ ಮಾತನಾಡಿ, ರಾಸುಗಳಿಗೆ ಖನಿಜಾಂಶಗಳ ಮಿಶ್ರಣವನ್ನು ನೀಡುವುದರಿಂದ ಕರುಗಳ ಬೆಳವಣಿಗೆಯನ್ನು ಸುಧಾರಿಸುತ್ತದೆ. ಮೇವಿನಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಲಿನ ಉತ್ಪಾದತೆಯನ್ನು ಹೆಚ್ಚಿಸುತ್ತದೆ. ಸಂತಾನೋತ್ಪತ್ತಿಯ ದಕ್ಷತೆಯನ್ನು ಸುಧಾರಿಸುವುದಲ್ಲದೇ
ಈ ಶಿಬಿರದಲ್ಲಿ ಪಶು ವೈದ್ಯರಾದ ಡಾ. ಮಹಮದ್ ಜಿಯಾವುಲ್ಲಾ, ಡಾ.ಬಿ.ಎಂ. ರವೀಂದ್ರನಾಥ, ಡಾ. ವೈಷ್ಣವಿ, ಕೆ.ಆರ್., ಡಾ. ವಿಕ್ರಮ್ ಮತ್ತಿತರರು ಜಾನುವಾರುಗಳಲ್ಲಿ ಪುನಾರವರ್ತಿತ ಸಂತಾನೋತ್ಪತ್ತಿ, ಚರ್ಮದ ಸೋಂಕು, ಗಾಯ, ಕಾಲು-ಬಾಯಿ ಜ್ವರ, ಚರ್ಮ ಗಂಟು ರೋಗ, ಕೆಚ್ಚಲು ಬಾವು, ಜಂತು ಹುಳು ಬಾಧೆ ಇತ್ಯಾದಿ ಸಮಸ್ಯೆಗಳ ಕುರಿತು ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.ಬೆಂಗಳೂರಿನ ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಷನ್‌ನ ಪ್ರತಿನಿಧಿ ರಮೇಶ್, ಇಂಟಾಸ್ ಅನಿಮಲ್ ಹೆಲ್ತ್ ಕಂಪೆನಿಯ ಅಧಿಕಾರಿಗಳು ಹಾಗೂ ಹೊಸಹಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀ ನಾರಾಯಣ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹೆಚ್. ಶಶಿಧರ್, ಕಾರ್ಯದರ್ಶಿ ಮಲ್ಲಣ್ಣ ಮತ್ತು ಮುಖಂಡ ಅಶ್ವತ್ಥನಾರಾಯಣ, ರೈತ ಮಣಿಕಂಠ ಪಶು ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿದ್ದರು. 80ಕ್ಕೂ ಅಧಿಕ ಜಾನುವಾರುಗಳಿಗೆ ಪಶು ವೈದ್ಯಕೀಯ ಸೇವೆ ನೀಡಲಾಯಿತು ಮತ್ತು ಭಾಗವಹಿಸಿದ ಎಲ್ಲಾ ರೈತರಿಗೆ ಖನಿಜ ಮಿಶ್ರಣ ವಿತರಿಸಲಾಯಿತು.
29ಕೆಡಿಬಿಪಿ1- ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ಪಶು ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು.