ತಾರಕ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಶಾಸಕ ಅನಿಲ್ ಚಿಕ್ಕಮಾದು

| Published : Sep 07 2024, 01:33 AM IST

ತಾರಕ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಶಾಸಕ ಅನಿಲ್ ಚಿಕ್ಕಮಾದು
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ಬ್ಯಾಂಕ್ ನೆರವಿನ ಡಿಆರ್.ಐಪಿ 2 ಅಡಿಯಲ್ಲಿ ಕರ್ನಾಟಕ ರಾಜ್ಯ ತಾರಕ ಜಲಾಶಯದ ಪುನಶ್ಚೇತ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆತಾಲೂಕಿನ ತಾರಕಾ ಜಲಾಶಯವೂ ಭರ್ತಿಯಾದ ಹಿನ್ನೆಲೆ ಶುಕ್ರವಾರ ಶಾಸಕ ಅನಿಲ್ ಚಿಕ್ಕಮಾದು ಬಾಗಿನ ಅರ್ಪಿಸಿದರು. ನಂತರ ಅವರು ಸುಮಾರು ಏಳು ಕೋಟಿ ರು. ವೆಚ್ಚದಲ್ಲಿ ತಾರಕ ಜಲಾಶಯದ ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯ ಕಾಮಗಾರಿಗೂ ಸಹ ಭೂಮಿ ಪೂಜೆ ನೆರವೇರಿಸಿದರು. ವಿಶ್ವ ಬ್ಯಾಂಕ್ ನೆರವಿನ ಡಿಆರ್.ಐಪಿ 2 ಅಡಿಯಲ್ಲಿ ಕರ್ನಾಟಕ ರಾಜ್ಯ ತಾರಕ ಜಲಾಶಯದ ಪುನಶ್ಚೇತ ಮತ್ತು ಅಭಿವೃದ್ಧಿ ಕಾಮಗಾರಿ ಪ್ಯಾಕೇಜ್ ಸುಮಾರು ಏಳು ಕೋಟಿ ವೆಚ್ಚದಲ್ಲಿ ಜಲಾಶಯದ ಏರಿಯಾ ಮೇಲಿನ ಹಾಗೂ ಅಪ್ರೋಚ್ ರಸ್ತೆಗಳನ್ನು ನಿರ್ಮಾಣ ಮಾಡುವುದು, ಜಲಾಶಯದ ಪರಿಧಿಯಲ್ಲಿ ಅಳವಡಿಸುವುದು, ಸಿಬ್ಬಂದಿ ಕೊಠಡಿ ಮತ್ತು ಶೌಚಾಲಯಗಳನ್ನು ನಿರ್ಮಾಣ ಮಾಡುವುದು, ಜಲಾಶಯದ ಘಟಕಗಳಿಗೆ ಬಣ್ಣ ಬೆಳೆಯುವುದು, ಸಿಸಿಟಿವಿ ಭದ್ರತಾ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸುವುದು, ವಿದ್ಯುತ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಈ ಕಾಮಗಾರಿಯಲ್ಲಿ ಒಳಪಟ್ಟಿದ್ದು, ಜಲಾಶಯ ಅಭಿವೃದ್ಧಿ ಹೊಂದಲಿದೆ ಎಂದು ಅವರು ತಿಳಿಸಿದರು.ಈ ಜಲಾಶಯವು ತಾಲೂಕಿನ ರೈತರ ಸುಮಾರು 16 ಸಾವಿರಕ್ಕೆ ಜಮೀನುಗಳಿಗೆ ನೀರು ಹರಿಸಬಹುದಾಗಿರುತ್ತದೆ. ಈ ಅಣೆಕಟ್ಟು ಪ್ರದೇಶವನ್ನು ಪ್ರವಾಸಿ ತಾಣವಾಗಿ ನಿರ್ಮಾಣ ಮಾಡಲು ಕ್ರಮ ಕೈಗೊಂಡಿದ್ದು, ಜೆ.ಎಲ್.ಆರ್. ವತಿಯಿಂದ ಪ್ರವಾಸಗಳಿಗೆ ಬೋಟ್ ವ್ಯವಸ್ಥೆ ಕಲ್ಪಿಸಲಾಗುವುದು ಇದಕ್ಕಾಗಿ ಈಗಾಗಲೇ ಅರಣ್ಯ ಇಲಾಖೆಯ ಅನುಮತಿ ಗಾಗಿ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ಅವರು ಹೇಳಿದರು. ತಹಸೀಲ್ದಾರ್ ಶ್ರೀನಿವಾಸ್, ಹಿರೇಹಳ್ಳಿ ಗ್ರಾಪಂ ಅಧ್ಯಕ್ಷ ಮಂಜುನಾಥ್ ಉಪಾಧ್ಯಕ್ಷ ಇಂದ್ರಮ್ಮ, ಜಿಪಂ ಮಾಜಿ ಸದಸ್ಯ ಎಚ್. ಸಿ. ಮಂಜುನಾಥ್, ತಾಪಂ ಮಾಜಿ ಸದಸ್ಯ ಸ್ಟಾನಿ ಬ್ರಿಟೋ, ಮುಖಂಡರಾದ ಸತೀಶ್ ಗೌಡ, ಪರಶಿವಮೂರ್ತಿ, ನಾಗರಾಜು, ಶಂಭುಲಿಂಗ ನಾಯಕ, ಸ್ವಾಮಿ, ಮಹಾದೇವಪ್ಪ, ಹೇಮಂತ ಕುಮಾರ್, ಸಿದ್ದರಾಮಯ್ಯಗೌಡ, ದೇವರಾಜ್, ತಾಲೂಕು ರೈತ ಸಂಘದ ಅಧ್ಯಕ್ಷ ಪಳನಿಸ್ವಾಮಿ, ಜೀವಿಕ ಬಸವರಾಜು, ಜವರಯ್ಯ, ರಾಜೇಗೌಡ, ಅಶೋಕ್ ಭಾಗವಹಿಸಿದ್ದರು.