ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕಾಂಗ್ರೆಸ್ ಹಾಗೂ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ತಿರಸ್ಕರಿಸಿ ಸಾಮಾಜಿಕ ಕಳಕಳಿ ಹೋರಾಟದ ಹಿನ್ನೆಲೆ ಹೊಂದಿರುವ ನನ್ನನ್ನು ಗೆಲ್ಲಿಸುವಂತೆ ಬಿಎಸ್ಪಿ ಅಭ್ಯರ್ಥಿ ಶಿವಶಂಕರ್ ಮತದಾರರಲ್ಲಿ ಮನವಿ ಮಾಡಿದರು.ನಗರದ ವಿವಿಧ ವಾರ್ಡ್ , ಕಕೀಲರ ಸಂಘದಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಪ್ರಚಾರ ನಡೆಸಿ ಮಾತನಾಡಿ, ಸ್ವಾತಂತ್ರ‍್ಯ ಬಂದು75 ವರ್ಷಗಳು ಕಳೆದಿವೆ. ಕಾಂಗ್ರೆಸ್ ಹಾಗೂ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳಿಗೆ ಯಾವುದೇ ಚಳವಳಿ ಹೋರಾಟದ ಹಿನ್ನೆಲೆ ಇಲ್ಲದೇ ದುರ್ಬಲವಾಗಿದ್ದಾರೆ ಎಂದು ದೂರಿದರು.
ಜನ ಪರ, ಸಮಾಜ ಪರ ಗಟ್ಟಿ ದ್ವನಿಯಾಗಿ ಬಿಎಸ್ಪಿ ಕೆಲಸ ಮಾಡುತ್ತಿದೆ. ಬಿಜೆಪಿ, ಕಾಂಗ್ರೆಸ್ ನ ಯಾವುದೇ ಅಭ್ಯರ್ಥಿ ಗೆದ್ದರೂ ಕರ್ನಾಟಕಕ್ಕೆ ಪ್ರಯೋಜನವಿಲ್ಲ. ಇವರು ಗೆದ್ದ ನಂತರ ರಾಜ್ಯ ಹಾಗೂ ಜನರ ಅಭಿವೃದ್ಧಿ ಪರ ಕೇಂದ್ರದಲ್ಲಿ ಮಾತನಾಡುವುದಿಲ್ಲ ಎಂದು ಟೀಕಿಸಿದರು.ಕರ್ನಾಟಕದ ಸಂಸದರು ಪ್ರವಾಹ , ಬರಗಾಲ ಬಂದಾಗ ಮಾತನಾಡಲಿಲ್ಲ. ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನಿಲ್ಲಿಸಿದಾಗ ದ್ವನಿ ಎತ್ತಲಿಲ್ಲ. ಬಿಜೆಪಿ ಸಂವಿಧಾನ ವಿರೋಧಿ. ಹೀಗಾಗಿ ಕಾಂಗ್ರೆಸ್ ನಮನಗೆ ವೋಟು ಹಾಕಿ ಸಂವಿಧಾನ ಉಳಿಸುತ್ತೇವೆ ಎನ್ನುತ್ತಿದ್ದಾರೆ. ಇಲ್ಲಿನ ಅಭ್ಯರ್ಥಿಗಳಿಗೆ ಸಂವಿಧಾನ ಅರವಿದೆಯೇ ಎಂದು ಪ್ರಶ್ನಿಸಿದರು. ಪ್ರಚಾರಸಭೆಯಲ್ಲಿ ಗೋವಿಂದರಾಜು, ಬಸವರಾಜು, ಶ್ರೀಕಾಂತ್, ರವಿ, ಕುಮಾರ್, ವಿನಯ್, ಅನಿಲ್‌ಕುಮಾರ್ ಮತ್ತಿತರರಿದ್ದರು.ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ಕೆ.ಆರ್.ಚಂದ್ರಶೇಖರ ಬಿರುಸಿನ ಪ್ರಚಾರ
ಶ್ರೀರಂಗಪಟ್ಟಣ:ಮಂಡ್ಯ ಲೋಕಸಭಾ ಚುನಾವಣೆ ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ಕೆ.ಆರ್.ಚಂದ್ರಶೇಖರ ಪರ ಪಕ್ಷದ ಪದಾಧಿಕಾರಿಗಳು, ಸದಸ್ಯರು ಬಿರುಸಿನ ಪ್ರಚಾರ ಮಾಡಿದರು.ಕೆ.ಆರ್.ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಅರುಣ ಕುಮಾರ, ಎಚ್ ಮಲ್ಲೇಗೌಡ ಮಾತನಾಡಿ, ಏ.26 ರಂದು ನಡೆಯಲಿರುವ ಲೋಸಕಭಾ ಚುನಾವಣೆಯಲ್ಲಿ ಚಂದ್ರಶೇಖರ ಅವರ 4ನೇ ಕ್ರಮಸಂಖ್ಯೆ ಬ್ಯಾಟರಿ ಟಾರ್ಜ್ ಗುರುತಿಗೆ ಮತ ಹಾಕುವಂತೆ ಮನವಿ ಮಾಡಿದರು.ತಾಲೂಕಿನ ವಿವಿಧ ಗ್ರಾಮಗಳ ಹಳ್ಳಿಕಟ್ಟೆಗಳ ಬಳಿ ನೆರೆದಿದ್ದ ಜನಸಾಮಾನ್ಯರನ್ನು ಗಮನ ಸೆಳೆದು ಕೆಆರ್ ಎಸ್ ಪಕ್ಷದ ಅಭ್ಯರ್ಥಿ ಚಂದ್ರು ಕೀಲಾರ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ಎಸ್.ಎಚ್.ಲಿಂಗೇಗೌಡ ಮಾತನಾಡಿ, ಕೆಆರ್‌ಎಸ್ ಪಕ್ಷದಿಂದ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳಿದ್ದಾರೆ. ರಾಜ್ಯದ ಪ್ರತಿಯೊಂದು ಮತಗಟ್ಟೆ ಪೋಲಿಂಗ್-ಬೂತ್‌ನಲ್ಲಿ ಪಕ್ಷದ ಹೆಸರು ಮತ್ತು ಪಕ್ಷದ ಚಿಹ್ನೆಯಾದ ಟಾರ್ಚ್ ಇರುತ್ತದೆ. ನಮ್ಮ ಕೆಲಸವನ್ನು ನಾವು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಿದ್ದೇವೆ. ದಯವಿಟ್ಟು ಕೆಆರ್ ಎಸ್ ಪಕ್ಷವನ್ನು ಬೆಂಬಲಿಸಿ ಎಂದು ಕೈಮುಗಿದು ಮನವಿ ಮಾಡಿದರು.ಈ ವೇಳೆ ಜಿಲ್ಲಾಧ್ಯಕ್ಷ ರಮೇಶ್ ಗೌಡ, ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ್ ಹೆಬ್ಬಕವಾಡಿ, ಅಭ್ಯರ್ಥಿ ಚಂದ್ರು ಕೀಲಾರ, ಜಿಲ್ಲಾ ಕಾರ್ಯದರ್ಶಿಗಳಾದ ನಾಗರಾಜು, ಡಿ.ಜಿ.ಮಹೇಶ್ ಕೂಳಗೆರೆ, ನಂದೀಶ್ ಕುಮಾರ, ಶಾಂತಿ ಪ್ರಸಾದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಎಚ್.ಇ.ಯೋಗೀಶ್, ಶಶಿಧರ್ ವೈ.ಕೆ.ಅರುಣ ಕುಮಾರ್, ತಾಲೂಕು ಅಧ್ಯಕ್ಷ ರವೀಂದ್ರ ಕೊತ್ತತ್ತಿ ಸೇರಿದಂತೆ ಪದಾಧಿಕಾರಿಗಳು ಪ್ರಚಾರದಲ್ಲಿ ಇದ್ದರು.