ಕೆರೆಗಳ ಪುನಶ್ಚೇತನ ಭವಿಷ್ಯದ ಬದುಕಿಗೆ ಜೀವದಾನ-ಶಿವರಾಯ ಪ್ರಭು

| Published : Jul 15 2024, 01:53 AM IST

ಕೆರೆಗಳ ಪುನಶ್ಚೇತನ ಭವಿಷ್ಯದ ಬದುಕಿಗೆ ಜೀವದಾನ-ಶಿವರಾಯ ಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಕೆರೆಗಳ ಪುನಶ್ಚೇತನ ಪರಿಸರದ ಉಳಿವು ನಮ್ಮ ಭವಿಷ್ಯದ ಬದುಕಿಗೆ ಜೀವ ದಾನಗಳಾಗಿದ್ದು, ನಾಳೆಗಳು ಸುಂದರವಾಗಲು ಈಗಲೇ ಸಕಾರಾತ್ಮಕವಾಗಿ ಪರಿಸರಕ್ಕೆ ಸ್ಪಂದಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ತಿಳಿಸಿದರು.

ಹಾನಗಲ್ಲ: ಕೆರೆಗಳ ಪುನಶ್ಚೇತನ ಪರಿಸರದ ಉಳಿವು ನಮ್ಮ ಭವಿಷ್ಯದ ಬದುಕಿಗೆ ಜೀವ ದಾನಗಳಾಗಿದ್ದು, ನಾಳೆಗಳು ಸುಂದರವಾಗಲು ಈಗಲೇ ಸಕಾರಾತ್ಮಕವಾಗಿ ಪರಿಸರಕ್ಕೆ ಸ್ಪಂದಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ತಿಳಿಸಿದರು.ಹಾನಗಲ್ಲ ತಾಲೂಕಿನ ಮಾರನಬೀಡದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ರಾಜ್ಯದ ೭೦೧ನೇ ಪುನಶ್ಚೇತನಗೊಳಿಸಿದ ಕೆರೆ ಹಸ್ತಾಂತರದ ಅಂಗವಾಗಿ ಕೆರೆಯ ಬಳಿ ಸಸಿ ನೆಡುವ ಮೂಲಕ ಚಾಲನೆ ನೀಡಿದ ಅವರು, ಈ ಕೆರೆಯ ಅಭಿವೃದ್ಧಿ ನಮ್ಮ ಸಂಘ ೫.೪ ಲಕ್ಷ ರು.ಗಳನ್ನು ವೆಚ್ಚ ಮಾಡಿದೆ. ಅಂತರ್ಜಲ ವೃದ್ಧಿಗೆ ಇದು ಸಹಕಾರಿ. ನಾಳೆಗಾಗಿ ನಾವು ಯೋಚಿಸದಿದ್ದರೆ ಇಂದೇ ನಮ್ಮನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಗ್ರಾಮಾಭಿವೃದ್ಧಿಯ ಕನಸು ನನಸಾಗಬೇಕಾಗಿದೆ. ಇದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ನೂತನ ಅಭಿವೃದ್ಧಿ ಯೋಜನೆಗಳು ಹಾಗೂ ದುರ್ಬಲರಿಗೆ ಸಹಾಯ ಧನ ನೀಡುವ ಯೋಜನೆಯೊಂದಿಗೆ, ಶಾಲಾ ಮಕ್ಕಳ ಹಿತಕ್ಕಾಗಿ ಸ್ಕಾಲರ್‌ಶಿಪ್ ಯೋಜನೆಗಳನ್ನು ರೂಪಿಸಿದೆ. ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಯೋಜನೆ ರೂಪಿಸಿ ಕೆಲಸ ಮಾಡಲಾಗುತ್ತಿದೆ ಎಂದರು.ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಿಕೊಡುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಕಾರ್ಯಗಳು ಗ್ರಾಮಗಳ ಸಬಲೀಕರಣಕ್ಕೆ ಸಹಕಾರಿಯಾಗಿವೆ. ಕೃಷಿ ಸಮುದಾಯಕ್ಕೆ ಮಾರ್ಗದರ್ಶನ ಶಿಬಿರಗಳು ಹಾಗೂ ತರಬೇತಿ ಪ್ರವಾಸಗಳನ್ನು ಕೈಗೊಂಡು ರೈತರ ಕನಸು ನನಸು ಮಾಡುವ ಕಾರ್ಯದಲ್ಲಿ ಯಶಸ್ವಿಯಾಗಿವೆ. ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿರುವ ಈ ಸಂಸ್ಥೆ ರಾಜ್ಯಾದ್ಯಂತ ಹೆಸರು ಮಾಡಿದೆ. ಒಂದು ಸರಕಾರ ಮಾಡಬೇಕಾದ ಕೆಲಸ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯ ಸಾಧನೆ ಅತ್ಯಂತ ಹಿರಿಮೆಯದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕೆರೆ ಸಮಿತಿ ಅಧ್ಯಕ್ಷ ಮಲ್ಲೇಶಪ್ಪ ನೆರ್ಕಿಮನಿ, ಪಿಡಿಓ ರಾಮಣ್ಣ ಹನಕನಹಳ್ಳಿ, ಒಕ್ಕೂಟದ ಅಧ್ಯಕ್ಷೆ ಸರೋಜಮ್ಮ ಜಂಗಳಮ್ಮನವರ, ಮಲೆ ಮಲ್ಲೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಗುತ್ಯೆಪ್ಪ ಕರೆಪ್ಪನವರ, ಗದಿಗೆಪ್ಪ ಚಂಗಳಮ್ಮನವರ, ಬಸಪ್ಪ ಸಂಸಿ, ಅಶೋಕ ಸಂಸಿ, ಪ್ರಕಾಶ ಕೋಳೂರ, ಬಸಪ್ಪ ಒಡೆಯರ್, ಸರೋಜವ್ವ ಭಜಂತ್ರಿ, ಪ್ರೇಮಾ ನರೇಗಲ್, ಖಾಜಾಬಿ ಭಾವನವರ, ರತ್ನಮ್ಮ ಗುಡಗೇರಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.