ದೇವರು ನಮಗೆ ಮನುಷ್ಯ ಜನ್ಮ ನೀಡಿ ಸೇವೆ ಮಾಡಲು ಸುವರ್ಣ ಅವಕಾಶ ಕಲ್ಪಿಸಿದ್ದಾನೆ, ನೂತನ ದೇವಸ್ಥಾನ ನಿರ್ಮಾಣ ಮಾಡುವ ಕಾರ್ಯಗಳಿಗೆ ತಾವು ಸಹ ಅಲ್ಪಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು.

ಕೆಕೆ ಪಾಳ್ಯದಲ್ಲಿ ಆದಿಶಕ್ತಿ ಶ್ರೀದೇವಿ, ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಡಾ. ಹನುಮಂತನಾಥ ಸ್ವಾಮೀಜಿ ಅಭಿಮತ

ಕನ್ನಡಪ್ರಭ ವಾರ್ತೆ ಶಿರಾಸ್ವಾರ್ಥ ಬಿಟ್ಟು, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಿದರೆ ಮನುಷ್ಯ ಜನ್ಮ ಸಾರ್ಥಕತೆ ಕಾಣಲಿದೆ. ಪರಸ್ಪರ ಪ್ರೀತಿ ವಿಶ್ವಾಸದಿಂದ ಸಂಬಂಧಗಳನ್ನು ಗಟ್ಟಿಗೊಳಿಸಲು ಸಾಧ್ಯ. ಕುಂಚಿಟಿಗ ಸಮುದಾಯ ಎಲ್ಲರನ್ನು ಗೌರವಿಸಿ, ಪ್ರೀತಿಸುವಂತಹ ಸಂಸ್ಕಾರ ಹೊಂದಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಹುಲಿಕುಂಟೆ ಹೋಬಳಿಯ ಕೆಕೆ ಪಾಳ್ಯ ಗ್ರಾಮದಲ್ಲಿ ನಡೆದ ಆದಿಶಕ್ತಿ ಶ್ರೀದೇವಿ, ಮಹಾಗಣಪತಿ, ಭಕ್ತ ಆಂಜನೇಯ ಸ್ವಾಮಿ ದೇವತಾ ಶಿಲಾಮೂರ್ತಿಗಳ ಸ್ಥಿರ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ವಿಹಿಸಿ ಮಾತನಾಡಿದರು. ದೇವರು ನಮಗೆ ಮನುಷ್ಯ ಜನ್ಮ ನೀಡಿ ಸೇವೆ ಮಾಡಲು ಸುವರ್ಣ ಅವಕಾಶ ಕಲ್ಪಿಸಿದ್ದಾನೆ, ನೂತನ ದೇವಸ್ಥಾನ ನಿರ್ಮಾಣ ಮಾಡುವ ಕಾರ್ಯಗಳಿಗೆ ತಾವು ಸಹ ಅಲ್ಪಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಸಮಾಜದಲ್ಲಿ ಮೌಲ್ಯಯುತ ಜೀವನ ನಡೆಸಿ ಬದುಕಿನ ಮೌಲ್ಯವನ್ನು ಅರ್ಥ ಮಾಡಿಕೊಂಡು ಜ್ಞಾನ ಮಾರ್ಗದಲ್ಲಿ ನಡೆಯಬೇಕು . ದೇವರಿಗೆ ಪೂಜೆ ಮಾಡುವುದರಿಂದ ಮುಕ್ತಿ ಸಿಗುವುದಿಲ್ಲ, ನಿಷ್ಕಲ್ಮಶ ಮುಗ್ಧ ಮನಸ್ಸಿನ ಆರಾಧನೆ ದೇವರಿಗೆ ಹೆಚ್ಚು ಸಂತೋಷ ನೀಡಲಿದೆ ಎಂದರು.

ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠ ನೂತನ ದೇವಸ್ಥಾನಗಳ ನಿರ್ಮಾಣ ಹಾಗೂ ಜೀರ್ಣೋದ್ಧಾರಕ್ಕೆ ಇದುವರೆಗೂ ೫೮ ಲಕ್ಷ ರುಪಾಯಿಗಳನ್ನು ವಿವಿಧ ದೇವಸ್ಥಾನಗಳಿಗೆ ದೇಣಿಗೆಯಾಗಿ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿದೆ. ನಮ್ಮ ಸಮುದಾಯವನ್ನು ಗೌರವಿಸಿ ಪ್ರೀತಿಸುವಂತಹ ಕೆಲಸವನ್ನು ಪ್ರತಿಯೊಬ್ಬ ಕುಂಚಿಟಿಗ ಬಂಧುಗಳು ಮಾಡಬೇಕು ಎಂದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯ ಪ್ರಕಾಶ್ ಮಾತನಾಡಿ, ಕೆಕೆ ಪಾಳ್ಯ ಗ್ರಾಮದಲ್ಲಿ ನೂತನ ದೇವಸ್ಥಾನ ನಿರ್ಮಾಣ ಮಾಡಲೇಬೇಕೆಂಬ ಎಂಟು ವರ್ಷಗಳ ಪ್ರಯತ್ನ ಫಲ ನೀಡಿದ್ದು, ಭವ್ಯ ದೇಗುಲ ನಿರ್ಮಾಣ ಮಾಡಿದ ಈ ಗ್ರಾಮದ ಯುವಕರ ಒಗ್ಗಟ್ಟು ಮೆಚ್ಚುವಂತದ್ದು ಎಂದರು.ಈ ಸಂದರ್ಭದಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ಬೇವಿನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಮುಖಂಡರಾದ ತಿಪ್ಪೇಶ್ ಗೌಡ, ರಾಕೇಶ್ ಬಾಬು, ಗುತ್ತಿಗೆದಾರ ಪ್ರಕಾಶ್, ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಚಿಕ್ಕಸಿದ್ದಪ್ಪ, ಶಾರದಮ್ಮ ರಂಗಸ್ವಾಮಿ, ಕೆ.ಸಿ.ಶಿವಣ್ಣ, ಕೆ.ಆರ್. ಸತೀಶ್, ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಡಿ.ರಂಗಸ್ವಾಮಿ, ಎಂಎಲ್ಎ ರಾಮಣ್ಣ, ಶ್ರೀ ಆದಿಶಕ್ತಿ ಶ್ರೀದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್ .ಚಂದ್ರಪ್ಪ, ಉಪಾಧ್ಯಕ್ಷ ಕೆ.ಆರ್.ರಂಗಸ್ವಾಮಿ, ಕಾರ್ಯದರ್ಶಿ ಕೆ.ರಾಮಣ್ಣ, ಖಜಾಂಚಿ ಕೆ. ಜೆ.ಕೆಂಚೇಗೌಡ, ಸದಸ್ಯರಾದ ಡಿ. ಮಹಾಲಿಂಗಪ್ಪ, ಕೆ.ಬಿ. ತಿಪ್ಪೇಸ್ವಾಮಿ, ಗಿರಿಯಪ್ಪ, ಕೆ. ಬಿ.ನಾರಾಯಣಪ್ಪ, ಕೆಂಚಪ್ಪ, ಲಕ್ಷ್ಮಿ ಚಿರಂಜೀವಿ ಸೇರಿದಂತೆ ಹಲವಾರು ಮುಖಂಡರು ಸಾವಿರಾರು ಭಕ್ತರು ಹಾಜರಿದ್ದರು.೩೦ಶಿರಾ೧: ಕೆಕೆ ಪಾಳ್ಯ ಗ್ರಾಮದಲ್ಲಿ ನಡೆದ ಆದಿಶಕ್ತಿ ಶ್ರೀದೇವಿ, ಮಹಾಗಣಪತಿ, ಭಕ್ತ ಆಂಜನೇಯ ಸ್ವಾಮಿ ದೇವತಾ ಶಿಲಾಮೂರ್ತಿಗಳ ಸ್ಥಿರ ಪ್ರತಿಷ್ಠಾಪನಾ ಮಹೋತ್ಸವದ ಕಾರ್ಯಕ್ರಮವನ್ನು ಶ್ರೀ ಡಾ. ಹನುಮಂತನಾಥ ಸ್ವಾಮಿಜಿ ಉದ್ಘಾಟಿಸಿದರು.