ಹಬ್ಬಗಳ ಆಚರಣೆಯಿಂದ ಸಂಬಂಧಗಳು ಗಟ್ಟಿ: ಡಾ. ಮಹಾಂತಪ್ರಭು

| Published : Mar 25 2024, 12:56 AM IST

ಸಾರಾಂಶ

ತೇರದಾಳ (ರ-ಬ): ದೇಶದಲ್ಲಿ ನಡೆಯುವ ಪ್ರತಿ ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಹಬ್ಬಗಳ ಆಚರಣೆಯಿಂದ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುತ್ತವೆ ಎಂದು ಬೆಳಗಾವಿ ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಹೇಳಿದರು.

ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)

ದೇಶದಲ್ಲಿ ನಡೆಯುವ ಪ್ರತಿ ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಹಬ್ಬಗಳ ಆಚರಣೆಯಿಂದ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುತ್ತವೆ ಎಂದು ಬೆಳಗಾವಿ ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಹೇಳಿದರು.

ಇಲ್ಲಿನ ಗುಮ್ಮಟ ಗಲ್ಲಿಯಲ್ಲಿ ಹೋಳಿ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಹಲಗೆ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬೇರೆ ಬೇರೆ ಭಾಷೆ ಜಾತಿ ಸಮುದಾಯಗಳಿವೆ. ಆದರೂ ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸುವುದು ನಮ್ಮ ಹೆಮ್ಮೆ ಆಗಿದೆ. ಎಲ್ಲರೂ ಒಗ್ಗಟ್ಟಿನಿಂದ ಎಲ್ಲ ಹಬ್ಬಗಳನ್ನು ಆಚರಿಸಬೇಕು ಎಂದು ಹೇಳಿದರು.

ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಪ್ರವೀಣ ನಾಡಗೌಡ ಹಲಗೆ ಬಾರಿಸುವ ಮೂಲಕ ಹಲಗೆ ಹಬ್ಬಕ್ಕೆ ಚಾಲನೆ ನೀಡಿದರು. ಗುಮ್ಮಟ ಗಲ್ಲಿಯಿಂದ ಪ್ರಾರಂಭಗೊಂಡ ಮೇಳ, ಐಸಿಐಸಿಐ ಬ್ಯಾಂಕ್, ಕಾಳಿನ ಬಜಾರ, ಜವಳಿ ಬಜಾರ, ಸಿದ್ದೇಶ್ವರ ಗಲ್ಲಿ, ಪ್ರಭುದೇವರ ದೇವಸ್ಥಾನ, ದ್ವಾರ ಬಾಗಿಲು, ಕನ್ನಡ ಶಾಲೆ, ಚಾವಡಿ ವೃತ್ತ, ವಿಶೇಷ ತಹಸೀಲ್ದಾರ್ ಕಚೇರಿ, ತರಕಾರಿ ಮಾರುಕಟ್ಟೆ ಮುಖಾಂತರ ಗುಮ್ಮಟ ಗಲ್ಲಿಗೆ ತೆರಳಿ ಮುಕ್ತಾಯಗೊಂಡಿತು. ಜಮಖಂಡಿಯ ನಾಸಿಕ್ ಡೋಲ್ ಹಲಗೆ ಹಬ್ಬದ ಆಕರ್ಷಣೆ ಆಗಿತ್ತು. ಬನಹಟ್ಟಿ ಸಿಪಿಐ ಸಂಜಯ ಬಳಗಾರ, ತೇರದಳ ಪಿಎಸ್‌ಐ ಅಪ್ಪು ಐಗಳಿ ಮುಂಜಾಗ್ರತವಾಗಿ ಬಂದೋಬಸ್ತ್ ಕೈಗೊಂಡಿದ್ದರು.