ಪಾಪನಾಶ ಮಂದಿರಕ್ಕೆ ₹22ಕೋಟಿ ಬಿಡುಗಡೆಗೆ ಮಾಡಿ

| Published : Aug 14 2024, 12:47 AM IST

ಸಾರಾಂಶ

ಕೇಂದ್ರ ಪ್ರವಾಸೋದ್ಯಮ ಸಚವರಿಗೆ ಸಂಸದ ಸಾಗರ ಖಂಡ್ರೆ ಮನವಿ

ಬೀದರ್‌: ಕೇಂದ್ರ ಸರ್ಕಾರದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್‌ ಶೇಖಾವತ್‌ ಅವರನ್ನು ನವದೆಹಲಿಯಲ್ಲಿ ಸಂಸದ ಸಾಗರ ಖಂಡ್ರೆ ಭೇಟಿಯಾಗಿ ಬೀದರ್‌ ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು.

ಕೇಂದ್ರದ ಪ್ರಸಾದ ಯೋಜನೆಯಡಿ ಇಲ್ಲಿನ ಐತಿಹಾಸಿಕ ಶ್ರೀಕ್ಷೇತ್ರ ಪಾಪನಾಶ ಮಂದಿರ ಆಯ್ಕೆಯಾಗಿ ಮಂದಿರದ ಜೀರ್ಣೋದ್ಧಾರಕ್ಕೆ ಸುಮಾರು ₹22 ಕೋಟಿ ಅನುದಾನ ಘೋಷಣೆಯಾಗಿತ್ತು. ಈ ಹಿಂದೆ ಘೋಷಿಸಿದಂತೆ ಐತಿಹಾಸಿಕ ಪಾಪನಾಶ ಮಂದಿರದ ಸಂಪೂರ್ಣ ಅಭಿವೃದ್ಧಿಗಾಗಿ ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡುವಂತೆ ಸಂಸದ ಸಾಗರ ಖಂಡ್ರೆ ಮನವಿ ಸಲ್ಲಿಸಿದರು.