ಶ್ರಾವಣ ಶ್ರೇಷ್ಟ ಮಾಸ, ಪೂಜೆ ಪುನಸ್ಕಾರ ಮಾಡುತ್ತಾ ದೇವರ ಧ್ಯಾನದಲ್ಲಿ ತಲ್ಲೀನರಾಗುವ ಮಾಸ ಇದಾಗಿದೆ
ಹರಪನಹಳ್ಳಿ: ಧಾರ್ಮಿಕ ಕಾರ್ಯಕ್ರಮ ಜನರನ್ನು ಮಾನಸಿಕವಾಗಿ ಸದೃಢಗೊಳಿಸುತ್ತೇವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರನಾಯ್ಕ ತಿಳಿಸಿದ್ದಾರೆ.
ಅವರು ನಗರದ ತೆಗ್ಗಿನಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಮೌಲ್ಯಗಳು ಕುಸಿದಿರುವ ಮಾನವೀಯತೆ ದೂರವಾಗುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳ ಅವಶ್ಯಕತೆ ಬಹಳಷ್ಟಿದೆ, ಮಾನವೀಯತೆಗಿಂತ ದೊಡ್ಡದು ಇನ್ನೊಂದಿಲ್ಲ ಎಂದು ನುಡಿದರು.
ಶ್ರಾವಣ ಶ್ರೇಷ್ಟ ಮಾಸ, ಪೂಜೆ ಪುನಸ್ಕಾರ ಮಾಡುತ್ತಾ ದೇವರ ಧ್ಯಾನದಲ್ಲಿ ತಲ್ಲೀನರಾಗುವ ಮಾಸ ಇದಾಗಿದೆ ಎಂದ ಅವರು, ಪ್ರಕೃತಿ ವಿರುದ್ಧ ಇಂದು ನಾವಿದ್ದೇವೆ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ತೆಗ್ಗಿನಮಠ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯನವರು, ಮಾನವನ ವಿಕಾಸಕ್ಕೆ, ಅಭಿದ್ಯೋಯಕ್ಕೆ ಬೆಳಕು ಚೆಲ್ಲಲು ವಿಶಿಷ್ಟವಾದ ವಿಚಾರಗಳ ಕುರಿತು ಕಳೆದ 9 ದಿನಗಳಿಂದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಉಪನ್ಯಾಸ ಕೊಡಿಸಲಾಯಿತು ಎಂದ ಅವರು ಕಾರ್ಯಕ್ರಮ ಯಶಸ್ವಿಯಾಗಿದ್ದಕ್ಕೆ ಸರ್ವರಿಗೂ ಧನ್ಯವಾದ ಸಲ್ಲಿಸಿದರು.
ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ಕೂಡ್ಲಿಗಿ ಹಿರೇಮಠದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮನೋದೈಹಿಕ ರೋಗಗಳಿಗೆ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕುರಿತು ಜನನಿ ಯೋಗ ಮತ್ತು ನ್ಯಾಚುರೋಪತಿ ಆಸ್ಪತ್ರೆಯ ಪ್ರಾಂಶುಪಾಲ ಡಾ. ರಾಜೇಶ ಪಾಡೇಕಲ್ ಉಪನ್ಯಾಸ ನೀಡಿದರು.ಮುಖಂಡರಾದ ಶಶಿದರ ಪೂಜಾರ, ಪಿ.ಎಲ್. ಪೋಮ್ಯನಾಯ್ಕ, ಪಿ.ಕೆ. ಎಂ.ನಾಗಲಿಂಗಯ್ಯ, ಬಿ.ಆರ್. ಪ್ರಭಾಕರ, ರವಿಶಂಕರ, ಪೆಂಡಕೂರು ಶ್ರೀಧರ, ಟಿ.ಎಂ. ಗುರುಬಸವರಾಜ, ಚಿಂದಿ ಗಿರೀಶ, ಟಿ.ಎಂ. ಕೊಟ್ರೇಶ, ಎಸ್.ಎಲ್. ಗುರುನಾಥ, ಗೌಳಿ ಪಾರ್ವತಮ್ಮ, ಹುಳ್ಳಿ ಕೊಟ್ರೇಶಪ್ಪ, ಶಿವಹಾದಿಮನಿ, ಕೊಟ್ಗಿ ವಿಶ್ವನಾಥ ಉಪಸ್ಥಿತರಿದ್ದರು. ಸಿ.ಎಂ. ವಿರೇಶ ಸ್ವಾಗತಿಸಿದರೆ, ಸಿ.ಎಂ. ಕೊಟ್ರಯ್ಯ, ಡಿಎಚ್ ಎಂ ಮಡಿವಾಳಸ್ವಾಮಿ ನಿರೂಪಿಸಿದರು.