ಕುಕ್ಕೆ ಸುಬ್ರಹ್ಮಣ್ಯ: ಇಂದಿನಿಂದ ಕಿರುಷಷ್ಠಿ ಮಹೋತ್ಸವ

| Published : Jan 12 2024, 01:45 AM IST

ಸಾರಾಂಶ

ನಾಡಿನ ಪ್ರಮುಖ ನಾಗಾರಾಧನೆ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶುಕ್ರವಾರದಿಂದ ಕಿರುಷಷ್ಠಿ ಉತ್ಸವ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.೧೨ರಿಂದ ಜ.೧೬ರ ವರೆಗೆ ಕಿರುಷಷ್ಠಿ ಮಹೋತ್ಸವ ಸಾಂಸ್ಕೃತಿಕ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಶುಕ್ರವಾರ ಸಂಜೆ 5ಕ್ಕೆ ಶ್ರೀ ಕಾರ್ತಿಕ ವೇದಿಕೆಯಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಮ ಎಸ್.ಸುಳ್ಳಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ೫.೪೫ರಿಂದ ಬೆಂಗಳೂರಿನ ವೈಷ್ಣವಿ ಕಿಶೋರ್ ಅವರಿಂದ ‘ಭರತನ್ಯಾಟ’ ಕಾರ್ಯಕ್ರಮ, ೭ರಿಂದ ಪ್ರಕಾಶ್ ಮಲ್ಪೆ ಸಾರಥ್ಯದಲ್ಲಿ ‘ಉತ್ತಿಷ್ಠ ಭಾರತ’ ಗೀತ-ಕಥನ ಕಾರ್ಯಕ್ರಮ, ೯ರಿಂದ ಪುತ್ತೂರು ವೈಷ್ಣವಿ ನಾಟ್ಯಾಲಯದ ನಿರ್ದೇಶಿಕಿ ಯೋಗೀಶ್ವರಿ ಜಯಪ್ರಕಾಶ್ ಶಿಷ್ಯವೃಂದದಿಂದ ‘ನೃತ್ಯಾರ್ಪಣಂ’ ಭರತನ್ಯಾಟ ಕಾರ್ಯಕ್ರಮ ನಡೆಯಲಿದೆ.

13ರಂದು ಸಂಜೆ ೫.೪೫ರಿಂದ ಪುತ್ತೂರು ನೃತ್ಯೋಪಾಸನಾ ಕಲಾಕೇಂದ್ರ ಪ್ರಸ್ತುತ ಪಡಿಸುವ ಗುರು ವಿದುಷಿ ಶಾಲಿನಿ ಆತ್ಮಭೂಷಣ್ ನೃತ್ಯ ನಿರ್ದೇಶನದಲ್ಲಿ ‘ನೃತ್ಯೋಹಂ’ ೭ರಿಂದ ಧರ್ಮಸ್ಥಳ ಶ್ರೀದೇವಿ ಸಚಿನ್ ಬಳಗದವರಿಂದ ‘ನಿನಾದ ಗಾನ ಸಂಭ್ರಮ’, ೮.೧೫ ರಿಂದ ಮಂಗಳೂರು ವಿದ್ಯಾಶ್ರೀ ರಾಧಾಕೃಷ್ಣ ಯಜ್ಞ ತಂಡದವರಿಂದ ‘ನೃತ್ಯಸಂಗಮ ಹಾಗೂ ನೃತ್ಯರೂಪಕ’ ನಡೆಯಲಿದೆ.

ಜ.೧೪ರಂದು ಸಂಜೆ ಗಂಟೆ ೪.೩೦ರಿಂದ ಕರ್ನಾಟಕ ಸರಕಾರದ ಪೊಲೀಸ್ ವಾದ್ಯ ವೃಂದದಿಂದ ಮೈಸೂರು ಅರಮನೆ ವಾದ್ಯ ವೃಂದ ಇವರಿಂದ ‘ವಿಶೇಷ ವಾದ್ಯಗೋಷ್ಠಿ’, ೬ರಿಂದ ನಿಧಿಶ್ರೀ ಕೆ.ಎನ್. ಹಾಗೂ ಸ್ನೇಹಾ.ಕೆ.ಸಿ. ಚನ್ನರಾಯಪಟ್ಟಣ ಇವರಿಂದ ಭರತನಾಟ್ಯ, ೭.೧೫ರಿಂದ ಬೆಂಗಳೂರು ನಾಟ್ಯಭೈರವಿ ನೃತ್ಯಶಾಲೆಯ ಡಾ.ಶ್ರುತಿ ಯನ್.ಮೂರ್ತಿ ಹಾಗೂ ಶಿಷ್ಯವೃಂದದಿಂದ ‘ಭರತನಾಟ್ಯ ನೃತ್ಯರೂಪಕ-ಶ್ರೀ ಸುಬ್ರಹ್ಮಣ್ಯ ವೈಭವ’ ನಡೆಯಲಿದೆ.

15ರಂದು ಸಂಜೆ ಗಂಟೆ ೫.೩೦ರಿಂದ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ‘ಕುಮಾರ ವೈಭವ’, ೭ರಿಂದ ಕು.ಗಂಗಾ ಶಶಿಧರನ್ ಗುರುವಾಯೂರು ಇವರಿಂದ ‘ವಯಾಲಿನ್ ವಾದನ’, ೯.೩೦ರಿಂದ ಸಸಿಹಿತ್ಲು ಶ್ರೀ ಭಗವತೀ ಮೇಳದವರಿಂದ ತುಳು ಯಕ್ಷಗಾನ ‘ಮುಗುರುಮಲ್ಲಿಗೆ’ ನಡೆಯಲಿದೆ.

ಧಾರ್ಮಿಕ ಸಭೆ; ೧೬ರಂದು ಪೂರ್ವಾಹ್ನ ದೇವಾಲಯ ಆಡಳಿತ ದರ್ಮದರ್ಶಿಗಳ ಚಿಂತನಾ ಸಭೆ ‘ಗುಡಿ-ಜನರ ಜೀವನಾಡಿ’ ಶ್ರೀ ಕಾರ್ತಿಕ ವೇದಿಕೆಯಲ್ಲಿ ನಡೆಯಲಿದೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ದೇವಾಲಯ ಸಂವರ್ಧನಾ ಸಮಿತಿ ಸಂಯೋಜಕ ಮನೋಹರ್ ಮಠದ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಲಾ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿರುವರು.

ಸಂಜೆ ಗಂಟೆ ೬ರಿಂದ ಶ್ರೀ ಸುಬ್ರಹ್ಮಣ್ಯ ದೇವರ ರಥೋತ್ಸವ ನಡೆದು, ರಾತ್ರಿ ೯ರಿಂದ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ, ಕೊಂಡದಕುಳಿ ಕುಂಭಾಶಿ ಇವರಿಂದ ಪೌರಾಣಿಕ ಯಕ್ಷಗಾನ ‘ಜಾಂಬವತಿ ಕಲ್ಯಾಣ’ ನಡೆಯಲಿದೆ.