ಷಷ್ಠಿ ಪ್ರಯುಕ್ತ ಡಿ.7ರಂದು ಧಾರ್ಮಿಕ ಕಾರ್ಯಕ್ರಮ

| Published : Dec 04 2024, 12:34 AM IST

ಸಾರಾಂಶ

ದೇಗುಲಕ್ಕೆ ಆಗಮಿಸುವ ಸಹಸ್ರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಷಷ್ಠ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾತ್ತಿದೆ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಅಸಂಖ್ಯಾತ ಭಕ್ತಾದಿಗಳು ಆಗಮಿಸಿ ಆಗಮಿಸಿ ದೇವರ ಕೃಪೆಗೆ ಒಳಗಾಗಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ರಾಂಪುರ ಗ್ರಾಮದ ಪುರಾಣ ಪ್ರಸಿದ್ಧ ಶ್ರೀಆದಿಷ್ಟ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಡಿ.7ರಂದು ಷಷ್ಠಿ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇಗುಲದ ಪ್ರಧಾನ ಅಚ್ಚಕ ವಿಶ್ವನಾಥ ಶಾಸ್ತ್ರಿ ತಿಳಿಸಿದ್ದಾರೆ.

ಅಂದು ಬೆಳಗ್ಗೆ 7 ಗಂಟೆಗೆ ಮಹಾಗಣಪತಿ ಪೂಜೆ, ಪುಣ್ಯಹ, ಪ್ರಧಾನ ಸುಬ್ರಹ್ಮಣ್ಯ ಸ್ವಾಮಿ ಹೋಮ, ದೇವರಿಗೆ ವಿಶೇಷ ಅಭಿಷೇಕ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಲಾಗಿದೆ ಎಂದು ತಿಳಿಸಿದ್ದಾರೆ.

ದೇಗುಲಕ್ಕೆ ಆಗಮಿಸುವ ಸಹಸ್ರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಷಷ್ಠ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾತ್ತಿದೆ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಅಸಂಖ್ಯಾತ ಭಕ್ತಾದಿಗಳು ಆಗಮಿಸಿ ಆಗಮಿಸಿ ದೇವರ ಕೃಪೆಗೆ ಒಳಗಾಗಬೇಕೆಂದು ಮನವಿ ಮಾಡಿದ್ದಾರೆ.

23ರಂದು ಹನುಮಂತರಾಯಸ್ವಾಮಿ ಬ್ರಹ್ಮ ರಥೋತ್ಸವ

ಕೆ.ಆರ್.ಪೇಟೆ:

ತಾಲೂಕಿನ ಹರಿಹರಪುರ- ಕುರ್‍ನೇನಹಳ್ಳಿ ಗ್ರಾಮದ ಶ್ರೀಹನುಮಂತರಾಯಸ್ವಾಮಿ ಗ್ರಾಮಭಿವೃದ್ಧಿ ಸಂಘದ ನೇತೃತ್ವದಲ್ಲಿ ಡಿ.23ರಂದು ಶ್ರೀಹನುಮಂತರಾಯಸ್ವಾಮಿ ಬ್ರಹ್ಮ ರಥೋತ್ಸವ ನಡೆಯಲಿದೆ.

ಬ್ರಹ್ಮರಥೋತ್ಸವದ ಅಂಗವಾಗಿ ಡಿ.10 ರಿಂದ ಹನುಮಂತರಾಯನ ಆರಾಧನಾ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಡಿ.11 ರಂದು ಹೋವಿನ ತೇರು, ಡಿ.12 ರಂದು ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ನಡೆಯಲಿವೆ. ಡಿ.13 ನಂಧಿಧ್ವಜ, ನಗಾರಿ, ಗಾರುಡಿ ಗೊಂಬೆ, ಡೊಳ್ಳು ಕುಣಿತ, ತಮಟೆ, ಕೊಂಬು ಕಹಳೆ ಮುಂತಾದ ಜನಪದ ಕಲಾ ಪ್ರದರ್ಶನಗಳು ಮತ್ತು ಮಂಗಳವಾದ್ಯಗಳೊಂದಿಗೆ ಹನುಮ ರಥೋತ್ಸವ ನಡೆಯಲಿದೆ.

ಗ್ರಾಮದ ಬೀದಿ ಬೀದಿಗಳಲ್ಲಿ ಹನುಮ ರಥ ಸಂಚರಿಸಲಿದೆ. ಕನ್ನೆ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಹರಿಹರಪುರ-ಕುರ್‍ನೇನಹಳ್ಳಿ ಗ್ರಾಮದ ಶ್ರೀಹನುಮಂತರಾಯಸ್ವಾಮಿ ಗ್ರಾಮಭಿವೃದ್ಧಿ ಸಂಘದ ಪ್ರಕಟಣೆ ತಿಳಿಸಿದೆ.