ಸಾರಾಂಶ
ಹಿಂದೂ ಸಂಪ್ರದಾಯದ ಧಾರ್ಮಿಕ ಪೂಜಾ ಕೈಂಕರ್ಯಗಳು ಸೌಹಾರ್ದತೆಯ ಪ್ರತೀಕ. ದೇವಾಲಯಗಳು ಗ್ರಾಮಸ್ಥರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತವೆ ಎಂದು ಆಹಾರ ನಾಗರಿಕ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಕುಂದಾಣ ಹೋಬಳಿಯ ದೊಡ್ಡಚೀಮನಹಳ್ಳಿ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಂಜನೇಯಸ್ವಾಮಿ ದೇವಾಲಯದ ನೂತನ ವಿಮಾನಗೋಪುರ ಕಳಶ, ಪ್ರಾಣ ಪ್ರತಿಷ್ಠಾಪನೆ ಕನ್ನಡಪ್ರಭ ವಾರ್ತೆ ಕುಂದಾಣ
ಹಿಂದೂ ಸಂಪ್ರದಾಯದ ಧಾರ್ಮಿಕ ಪೂಜಾ ಕೈಂಕರ್ಯಗಳು ಸೌಹಾರ್ದತೆಯ ಪ್ರತೀಕ. ದೇವಾಲಯಗಳು ಗ್ರಾಮಸ್ಥರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತವೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.ಹೋಬಳಿಯ ದೊಡ್ಡಚೀಮನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ನೂತನ ವಿಮಾನಗೋಪುರ ಕಳಶ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕುಂಬಾಭಿಷೇಕ ಕಾರ್ಯಕ್ರಮದಲ್ಲಿ ದೇವರ ದರ್ಶನ ಪಡೆದು ಸಚಿವರು ಮಾತನಾಡಿದರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ಅಧ್ಯಕ್ಷ ಶಾಂತಕುಮಾರ್ ಮಾತನಾಡಿ, ಗ್ರಾಮಸ್ಥರೆಲ್ಲರೂ ಒಗ್ಗೂಡಿ ದೇವರ ಕಾರ್ಯವನ್ನು ಅದ್ಧೂರಿಯಾಗಿ ಮಾಡುತ್ತಿದ್ದು ಸರ್ವರಿಗೂ ಒಳಿತಾಗುವ ಉದ್ದೇಶದೊಂದಿಗೆ ಶ್ರೀ ಅಂಜನೇಯಸ್ವಾಮಿ ಮತ್ತು ನವಗ್ರಹ ವಿಮಾನ ಗೋಪುರ ಕಳಶ ಸ್ಥಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಾಡಲಾಗಿದೆ. ದೇವರ ಆಶೀರ್ವಾದದಿಂದ ಗ್ರಾಮದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.ಕಾಂಗ್ರೆಸ್ ಮುಖಂಡ ದೊಡ್ಡ ಚೀಮನಹಳ್ಳಿ ಡಿ.ಎಂ.ದೇವರಾಜ್ ಮಾತನಾಡಿ, ಗ್ರಾಮದಲ್ಲಿ ೩ ದಿನಗಳ ಕಾಲ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಪ್ರತಿಷ್ಠಾಪನಾ ಕಾರ್ಯ ಅದ್ಧೂರಿಯಾಗಿ ನೆರವೇರಿದೆ. ಆನೆಯ ಜಂಬೂ ಸವಾರಿ ಮೂಲಕ ಮೆರವಣಿಗೆ ಮಾಡಿ ಪ್ರತಿಷ್ಠಾಪಿಸಲಾಗಿದೆ. ನವಗ್ರಹ ಪೀಠ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ. ಎಲ್ಲರಿಗೂ ಆ ದೇವರ ಕೃಪೆ ಇರಲಿ, ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಹಲವಾರು ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಎಸ್.ಎಲ್.ವಿ ಕನ್‌ಸ್ಟ್ರಕ್ಷನ್ ಸುನಿಲ್ ಗೌಡ, ಕೋದಂಡರಾಮಯ್ಯ ರಾಜಣ್ಣ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ, ಕುಂದಾಣ ಗ್ರಾಪಂ ಸದಸ್ಯೆ ಮಾಲಾದೇವರಾಜ್, ಜಿಲ್ಲಾ ಧಾರ್ಮಿಕ ದತ್ತಿ ತಹಸೀಲ್ದಾರ್ ಜಿ.ಜೆ.ಹೇಮಾವತಿ, ಪುರೋಹಿತ ಎನ್.ಆನಂದಶಾಸ್ತ್ರಿ ಮತ್ತು ತಂಡ, ಸುಬ್ರಮಣಿ, ದೊಡ್ಡಗೌಡರ ಕುಟುಂಬ, ಗೌಡರ ಆಂಜನಪ್ಪನವರ ಕುಟುಂಬ, ಯಲ್ಲಿಮುನಿಯಪ್ಪನವರ ಕುಟುಂಬ, ಬುಡ್ಡಯ್ಯನವರ ಕುಟುಂಬ, ಮತ್ತಿಕೆರೆ ಹಾಗೂ ದೊಡ್ಡಚೀಮನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))