ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ: ವಚನಕಾರ ದೇವರ ದಾಸಿಮಯ್ಯ ಸಮಾನತೆ, ಸಮಾಜದ ಜಾಗೃತಿಗಾಗಿ ವಚನಗಳ ಮೂಲಕ ನೀಡಿದ ಸಂದೇಶಗಳು ಇಂದಿಗೂ ಸ್ಮರಣೀಯ ಎಂದು ನಗರದ ನಿವೃತ್ತ ಪ್ರೌಢಶಾಲಾ ಶಿಕ್ಷಕರ ಸಂಗನಬಸಪ್ಪ ಕಸ್ತೂರಿ ಸ್ಮರಿಸಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ: ವಚನಕಾರ ದೇವರ ದಾಸಿಮಯ್ಯ ಸಮಾನತೆ, ಸಮಾಜದ ಜಾಗೃತಿಗಾಗಿ ವಚನಗಳ ಮೂಲಕ ನೀಡಿದ ಸಂದೇಶಗಳು ಇಂದಿಗೂ ಸ್ಮರಣೀಯ ಎಂದು ನಗರದ ನಿವೃತ್ತ ಪ್ರೌಢಶಾಲಾ ಶಿಕ್ಷಕರ ಸಂಗನಬಸಪ್ಪ ಕಸ್ತೂರಿ ಸ್ಮರಿಸಿದರು.
ನಗರದ ದಾಸಿಮಯ್ಯ ವೃತ್ತದಲ್ಲಿ ಇಳಕಲ್ಲ ನೇಕಾರ ಸಮುದಾಯಗಳ ಒಕ್ಕೂಟ ಹಾಗೂ ದೇವರ ದಾಸೀಮಯ್ಯ ಸಂರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ವಚನಕಾರ ದೇವರ ದಾಸಿಮಯ್ಯ ಜಯಂತಿಯನ್ನು ದಾಸಿಮಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ದಾಸಿಮಯ್ಯನವರ ವಚನಗಳನ್ನು ಅತ್ಯಂತ ಸರಳ ಹಾಗೂ ಅರ್ಥಗರ್ಭೀತವಾಗಿ ರಚಿಸಿದ್ದು, ಅವರ ಒಂದು ವಚನದಲ್ಲಿ ಮರದಲ್ಲಿ ಬೆಂಕಿ ಇದೆ ಆದರೆ ಕಾಣಿಸುವದಿಲ್ಲ, ಹಾಲಿನಲ್ಲಿ ತುಪ್ಪವಿದೆ ಅದೂ ಕಾಣಿಸುವದಿಲ್ಲ ಅದರಂತೆ ಮನುಷ್ಯನ ದೇಹದಲ್ಲಿ ಆತ್ಮವಿದೆ, ಅದು ಯಾರಿಗೂ ಕಾಣುವದಿಲ್ಲ ಕಾರಣ ಯಾವ ವ್ಯಕ್ತಿಯಲ್ಲಿ ದಾಸಿಮಯ್ಯನವರು ವಚನಗಳ ಮೂಲಕ ನೀಡಿದ ಸಂದೇಶಗಳು ಇಂದಿಗೂ ಸ್ಮರಣೀಯ ಎಂದರು.ದಾಸಿಮಯ್ಯನವರ ಜಯಂತಿಯನ್ನು ನಗರದಲ್ಲಿ ಪ್ರತಿವರ್ಷ ಎಲ್ಲ ನೇಕಾರ ಸಮುದಾಯಗಳು ಒಟ್ಟುಗೂಡಿ ಅದ್ದೂರಿಯಾಗಿ ಆಚರಿಸುತ್ತಿದ್ದೇವು. ಈ ವರ್ಷ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಅತ್ಯಂತ ಸರಳವಾಗಿ ಆಚರಿಸಲಾಯಿತು ಎಂದು ಹೇಳಿದರು. ಇಳಕಲ್ಲ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಲಕ್ಷ್ಮಣ ಗುರಂ ಮಾತನಾಡಿ, ದೇವರ ದಾಸಿಮಯ್ಯನವರು ನೇಕಾರ ಬಾಂಧವರ ಕುಲದೇವರು ಎಂದು ಹೇಳಿಕೊಳ್ಳುವುದೇ ನಮಗೆ ಒಂದು ಹೆಮ್ಮೆ. ದಾಸಿಮಯ್ಯನವರ ವಚನಗಳೇ ನಮಗೆಲ್ಲ ದಾರಿ ದೀಪವಾಗಿದೆ. ಬಹಳ ವರ್ಷಗಳಿಂದ ದಾಸಿಮಯ್ಯನವರ ಭವನ ನಿರ್ಮಿಸುವ ನಮ್ಮೆಲ್ಲರ ಆಸೆ ಇನ್ನೂ ಇಡೇರಿಲ್ಲ. ಶೀಘ್ರದಲ್ಲೇ ಎಲ್ಲರೂ ಸೇರಿ ನಿರ್ಮಿಸೋಣ ಎಂದರು.ವೇದಮೂರ್ತಿ ಮುನಿಸ್ವಾಮಿ ದೇವಾಂಗಮಠ ಅವರ ಸಮ್ಮುಖದಲ್ಲಿ ದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ನೇಕಾರ ಮುಖಂಡರಾದ ಪಂಪಣ್ಣ ಕಾಳಗಿ, ಸತೀಶ ಸಪ್ಪರದ, ವಾಸುದೇವ ಸಿನ್ನೂರ, ಕೇಶಪ್ಪ ಗೋಗಿ, ಅಮೃತ ಬಿಜ್ಜಲ, ನಾಗರಾಜ ಮೆದಿಕೇರಿ, ಅಶೋಕ ಜುಂಜಾ, ಪಂಪಣ್ಣ ಮಾಗನೂರ, ಶಂಕರ ದಟ್ಟಿ, ಪರಶುರಾಮ ಪಿನ್ನಾಪತಿ, ಸಿದ್ದಣ್ಣ ಪಿನ್ನಾಪತಿ, ಬಸವರಾಜ ಕಿರಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.