ಕಿಕ್ಕೇರಿ ಹೋಬಳಿಯಾದ್ಯಂತ ಶ್ರೀಕೃಷ್ಣ ಸ್ಮರಣೆ

| Published : Aug 28 2024, 12:58 AM IST

ಸಾರಾಂಶ

ಕಿಕ್ಕೇರಿ ಹೋಬಳಿಯಲ್ಲಿನ ನಾಸ್ತಿಕರು ಕೃಷ್ಣನ ದೇವಾಲಯಕ್ಕೆ ತೆರಳಿ ಭಕ್ತಿಯಿಂದ ಪೂಜಿಸಿದರು. ಮನೆ ಮನೆಗಳಲ್ಲಿ ರಾಧಾ, ಕೃಷ್ಣ, ರುಕ್ಮಿಣಿ ಪೋಟೋ, ಗೊಂಬೆಗಳನ್ನು ಕೂರಿಸಿ ಕೃಷ್ಣನ ಪೂಜಿಸಿದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಹೋಬಳಿಯ ವಿವಿಧ ಗ್ರಾಮದ ವಿಷ್ಣು ದೇಗುಲಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಮಮಿಯನ್ನು ವಿಜೃಂಭಣೆಯಿಂದ ಜರುಗಿತು. ಗೋವಿಂದನಹಳ್ಳಿ ಗ್ರಾಮದಲ್ಲಿನ ಶ್ರೀವೇಣುಗೋಪಾಲಸ್ವಾಮಿ ದೇಗುಲದಲ್ಲಿ ವೇಣುಗೋಪಾಲನಿಗೆ ವಿವಿಧ ಅಭಿಷೇಕ ನೆರವೇರಿಸಿ ಪರಿಮಳ ಪುಷ್ಪಗಳಿಂದ ಸರ್ವಾಲಂಕಾರಗೊಳಿಸಲಾಗಿತ್ತು. ಗೋಕುಲನಂದನಿಗೆ ಬೆಣ್ಣೆ, ತುಪ್ಪ, ಚಕ್ಕುಲಿ, ಲಡ್ಡು, ಕೋಡುಬಳೆ, ನಿಪ್ಪಟ್ಟು, ಸಿಹಿ, ಖಾರಪೊಂಗಲು, ಜಿಲೇಬಿಯಂತಹ ವಿವಿಧ ಖಾದ್ಯ ಪದಾರ್ಥ, ಹಣ್ಣು ಹಂಪಲುಗಳನ್ನು ನೈವೇದ್ಯವಾಗಿ ಇಡಲಾಗಿತ್ತು. ರಾತ್ರಿ ಮಾಡಲಾಗಿದ್ದ ವಿಶೇಷ ಅಲಂಕಾರವನ್ನು ಕಣ್ತುಂಬಿಕೊಳ್ಳಲು ಹೋಬಳಿಯ ವಿವಿಧೆಡೆಯ ಗ್ರಾಮಸ್ಥರು ಅಧಿಕವಾಗಿ ಆಗಮಿಸಿದ್ದರು.

ಭಕ್ತರಿಗೆ ಲಡ್ಡು, ತೀರ್ಥ ಪ್ರಸಾದ ವಿತರಿಸಲಾಯಿತು. ಅರ್ಚಕರಾದ ಗೋಪಾಲಸ್ವಾಮಿ, ಗೋಪಾಲಯ್ಯ, ರಮೇಶ್, ರಮಾನಂದ, ನರಸಿಂಹಮೂರ್ತಿ ಗೋಕುಲ ನಂದನಿಗೆ ವಿಶೇಷ ಅಲಂಕಾರ ಮಾಡಿ ಭಕ್ತರಿಗೆ ವಿಶೇಷ ದರ್ಶನಕ್ಕೆ ಅನುವು ಮಾಡಿಕೊಟ್ಟರು.

ಮಕ್ಕಳಿಗೆ ಕೃಷ್ಣ, ರಾಧಾ, ರುಕ್ಮಿಣಿಯ ವೇಷಭೂಷಣವನ್ನು ಪೋಷಕರು ಮನೆಯಲ್ಲಿ ತೊಡಿಸಿ, ಶಾಲೆಗಳಲ್ಲಿ ಭಾಗವಹಿಸಿ ಕೃಷ್ಣ ಜಯಂತಿಗೆ ಮೆರಗು ನೀಡಿದರು. ಹೋಬಳಿಯಲ್ಲಿನ ನಾಸ್ತಿಕರು ಕೃಷ್ಣನ ದೇವಾಲಯಕ್ಕೆ ತೆರಳಿ ಭಕ್ತಿಯಿಂದ ಪೂಜಿಸಿದರು. ಮನೆ ಮನೆಗಳಲ್ಲಿ ರಾಧಾ, ಕೃಷ್ಣ, ರುಕ್ಮಿಣಿ ಪೋಟೋ, ಗೊಂಬೆಗಳನ್ನು ಕೂರಿಸಿ ಕೃಷ್ಣನ ಪೂಜಿಸಿದರು.

ಆಧಾರ್‌ ಜೋಡಣೆಯಾಗದ ಅಂಗವಿಕಲ ಫಲಾನುಭವಿಗಳ ಪಿಂಚಣಿ ಸ್ಥಗಿತ

ಕನ್ನಡಪ್ರಭ ವಾರ್ತೆ ಮಂಡ್ಯಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಒಂದಾದ ಅಂಗವಿಕಲ ವೇತನ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಕೆಲವೊಂದು ಫಲಾನುಭವಿಗಳ ಪಿಂಚಣಿಗೆ ಆಧಾರ್ ಜೋಡಣೆಯಾಗಿರುವುದಿಲ್ಲ. ಅಂತಹ ಫಲಾನುಭವಿಗಳ ವಿವರಗಳನ್ನು ಮಂಡ್ಯ ತಹಸೀಲ್ದಾರ್ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಇನ್ನು 5 ದಿನಳಗಾಗಿ ಸಂಬಂಧಪಟ್ಟ ಫಲಾನುಭವಿ ತಮ್ಮ ವೃತ್ತದ ಗ್ರಾಮ ಆಡಳಿತಾಧಿಕಾರಿ, ನಾಡ ಕಚೇರಿ ಹಾಗೂ ತಾಲೂಕು ಕಚೇರಿಗಳಲ್ಲಿ ತಮ್ಮ ಆಧಾರ್ ಕಾರ್ಡ್, ಪಿಂಚಣಿ ಮಂಜೂರಾತಿ ಆದೇಶ ಪ್ರತಿ, ಬ್ಯಾಂಕ್ ಖಾತೆ ಪುಸ್ತಕ ನಕಲು ಪ್ರತಿಯನ್ನು ನೀಡಲು ಕೋರಿದೆ. ಇಲ್ಲದಿದ್ದರೆ ಪಿಂಚಣಿ ಸ್ಥಗಿತಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.