ರಾಜ್ಯದಲ್ಲೇ ಚಾಮರಾಜನಗರದ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಏಕೈಕ ಮಹಿಳೆ ಜಿಲ್ಲಾಧ್ಯಕ್ಷೆಯಾಗಿ ರೇಣುಕಾ ಆಯ್ಕೆ

| Published : Dec 05 2024, 12:30 AM IST

ರಾಜ್ಯದಲ್ಲೇ ಚಾಮರಾಜನಗರದ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಏಕೈಕ ಮಹಿಳೆ ಜಿಲ್ಲಾಧ್ಯಕ್ಷೆಯಾಗಿ ರೇಣುಕಾ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ರಾಜ್ಯದಲ್ಲಿಯೇ ಪ್ರಥಮ ಮಹಿಳಾ ಜಿಲ್ಲಾಧ್ಯಕ್ಷರಾಗಿ ಡಾ.ರೇಣುಕಾದೇವಿ ಆಯ್ಕೆಯಾದರು. ಚಾಮರಾಜನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಮ್ಮ ತಂಡವರನ್ನು ಗೆಲ್ಲಿಸಿಕೊಳ್ಳುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಮಹಿಳಾ ಜಿಲ್ಲಾಧ್ಯಕ್ಷೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ರಾಜ್ಯದಲ್ಲಿಯೇ ಪ್ರಥಮ ಮಹಿಳಾ ಜಿಲ್ಲಾಧ್ಯಕ್ಷರಾಗಿ ಡಾ.ರೇಣುಕಾದೇವಿ ಆಯ್ಕೆಯಾದರು.

ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಮ್ಮ ತಂಡವರನ್ನು ಗೆಲ್ಲಿಸಿಕೊಳ್ಳುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಮಹಿಳಾ ಜಿಲ್ಲಾಧ್ಯಕ್ಷೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಬಹಳ ಜಿದ್ದಾಜಿದ್ದಿನಿಂದ ನಡೆಯಿತು. ನಿರ್ದೇಶಕ ಅಯ್ಕೆಯಲ್ಲಿಯೂ ಸಹ ಬಹಳ ಸ್ಪರ್ಧೆ ಏರ್ಪಟ್ಟಿತ್ತು. ಅಧ್ಯಕ್ಷ ಸ್ಥಾನವನ್ನು ಹಿಡಿಯಲೇಬೇಕೆಂಬ ಸಂಕಲ್ಪದೊಂದಿಗೆ ಪ್ರಥಮ ಬಾರಿಗೆ ಸಂಘದ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಅಧ್ಯಕ್ಷರಾಗುವಲ್ಲಿ ರೇಣುಕಾದೇವಿ ಮತ್ತು ತಂಡ ಯಶಸ್ವಿಯಾಗಿದೆ.

ಪ್ರಥಮ ಮಹಿಳಾ ಅಧ್ಯಕ್ಷ ರೇಣುಕಾ:

ಡಾ.ರೇಣುಕಾದೇವಿ ೩೭ ಮತ ಪಡೆದು ಪ್ರತಿ ಸ್ಪರ್ಧಿ ಸಂಘದ ಹಾಲಿ ಅಧ್ಯಕ್ಷ ಚಂದ್ರಶೇಖರ್ (೨೮ ಮತಗಳು) ಅವರನ್ನು ಸೋಲಿಸಿದರು. ರಾಜ್ಯ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಿದ್ದ ನಟರಾಜು ೩೬ ಮತಗಳನ್ನು ಪಡೆದು ಬಸವರಾಜು ಅವರನ್ನು (೨೯ ಮತಗಳು) ಸೋಲಿಸಿದರು. ಖಜಾಂಚಿ ಸ್ಥಾನಕ್ಕೆ ಶಿವಕುಮಾರಯ್ಯ ಅವರು ೩೭ ಮತಗಳನ್ನು ಪಡೆದು ರಕ್ಷೀತ್‌ಕುಮಾರ್ ಅವರನ್ನು (೨೮ ಮತಗಳು) ಪರಭಾವಗೊಳಿಸಿದರು. ಚುನಾವಣಾಧಿಕಾರಿಯಾಗಿ ಸಿದ್ದಪ್ಪ ಹಾಗೂ ಸಹಾಯಕ ಚುನಾವಣಾಧಿಕಾರಿ ಬಸವಣ್ಣ ಅಧಿಕೃತವಾಗಿ ಘೋಷಣೆ ಮಾಡಿದರು.

ಸರ್ಕಾರಿ ನೌಕರರ ಹಿತರಕ್ಷಣೆಗೆ ಬದ್ಧ:

ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ರೇಣುಕಾದೇವಿ ಮಾತನಾಡಿ, ಸಂಘದ ಸದಸ್ಯರು, ಸರ್ಕಾರಿ ನೌಕರರ ಹಿತರಕ್ಷಣೆಗೆ ಬದ್ಧಳಾಗಿದ್ದು, ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸುವ ಜತೆಗೆ ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಭವನ, ಎನ್‌ಪಿಎಸ್ ನೌಕರರ ಸಮಸ್ಯೆ, ಆ ನೌಕರರಿಗೆ ಓಪಿಎಸ್ ಕೊಡಿಸಲು ನಿರಂತರ ಹೋರಾಟ ಮಾಡುತ್ತೇನೆ, ನೌಕರರ ಕುಂದುಕೊರತೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ರಾಜ್ಯದಲ್ಲಿಯೇ ಪ್ರಥಮ ಮಹಿಳೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ. ನಮ್ಮ ತಂಡವನ್ನು ಗೆಲ್ಲಿಸಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.

ವಿಜಯೋತ್ಸವ:

ಗೆಲುವು ಸಾಧಿಸುತ್ತಿದ್ದಂತೆ ಡಾ.ರೇಣುಕಾದೇವಿ ಮತ್ತು ತಂಡವರು ನ್ಯಾಯಾಲಯದ ರಸ್ತೆಯಲ್ಲಿರುವ ಸಂಘದ ಕಚೇರಿಯಿಂದ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿ, ಸಂಭ್ರಮಾಚರಣೆ ಮಾಡಿದರು. ಡೋಲು ಕುಣಿತದೊದಿಗೆ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದರು. ಬಳಿಕ ಜಿಲ್ಲಾಡಳಿತ ಭವನದಲ್ಲಿ ಅವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಸಂಘದ ನಿರ್ದೇಶಕರಾದ ಮಹದೇವಸ್ವಾಮಿ, ಮಹದೇವಯ್ಯ, ಮಧುಕುಮಾರ್, ಮಹದೇವಯ್ಯ, ನಂಜುಂಡ, ರವಿ, ಮಹೇಂದ್ರ, ಭರತ್‌ಭೂಷನ್, ಎಚ್.ಡಿ. ಮಹೇಶ್, ಬಾಲಸುಬ್ರಮಣ್ಯ, ನಾಗರಾಜು, ವೇಲುಕುಮಾರ್, ರಾಹುಲ್, ಯೋಗಪ್ರಕಾಶ್, ಸಿ.ಕೆ.ರಾಮಸ್ವಾಮಿ, ಮಹದೇವಸ್ವಾಮಿ, ನೇತ್ರಾವತಿ, ಮೊದಲಾದವರು ಇದ್ದರು.