ಸಾರಾಂಶ
ಭದ್ರಾವತಿ ತಾಲೂಕು ದಿಗ್ಗೇನಹಳ್ಳಿಯ ಸಮೀಪ ಭದ್ರಾ ಮುಖ್ಯ ನಾಲೆಯ ಆನವೇರಿ ಶಾಖಾ ನಾಲೆ ಅಕ್ವಾಡಕ್ ಒಡೆದುಹೋದ ಸ್ಥಳಕ್ಕೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೊನ್ನಾಳಿ ತಾಲೂಕಿನ ಸಾವಿರಾರು ರೈತರೊಂದಿಗೆ ಶನಿವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- ದಿಗ್ಗೇನಹಳ್ಳಿ ಬಳಿ ಭದ್ರಾ ಮುಖ್ಯ ನಾಲೆಯ ಆನವೇರಿ ಶಾಖಾ ನಾಲೆಗೆ ಹಾನಿ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭದ್ರಾವತಿ ತಾಲೂಕು ದಿಗ್ಗೇನಹಳ್ಳಿಯ ಸಮೀಪ ಭದ್ರಾ ಮುಖ್ಯ ನಾಲೆಯ ಆನವೇರಿ ಶಾಖಾ ನಾಲೆ ಅಕ್ವಾಡಕ್ ಒಡೆದುಹೋದ ಸ್ಥಳಕ್ಕೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೊನ್ನಾಳಿ ತಾಲೂಕಿನ ಸಾವಿರಾರು ರೈತರೊಂದಿಗೆ ಶನಿವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಈ ಸಂದರ್ಭ ಮಾತನಾಡಿ, ಅಕ್ವಾಡಕ್ ಒಡೆದು ಹೋದ ಸ್ಥಳದಲ್ಲಿ ತುರ್ತಾಗಿ ನಾಲೆಯಲ್ಲಿ ನೀರು ಹರಿಸುವ ಉದ್ದೇಶದಿಂದ ತಾತ್ಕಾಲಿಕ ಪೈಪ್ ಜೋಡಣೆ ಕಾಮಗಾರಿ ನಡೆಯುತ್ತಿದೆ. ಶೀಘ್ರ ಗುಣಮಟ್ಟದ ಕಾಮಗಾರಿ ನಡೆಸಿ, ನಾಲೆಯಲ್ಲಿ ನೀರು ಹರಿಸಬೇಕು. ಹಂತ ಹಂತವಾಗಿ ನೀರುಹರಿಸಿ, ನೀರಿನ ಪ್ರಮಾಣ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಸ್ಥಳದಲ್ಲಿದ್ದ ನೀರಾವರಿ ಇಲಾಖೆ ಅಧಿಕಾರಿ ಎಇಇ ಈಗಾಗಲೇ ನಾಲೆಗೆ 150 ಕ್ಯುಸೆಕ್ ನೀರು ಹರಿಸಿರುವುದಾಗಿ ಹೇಳಿದರು. ಮಾಹಿತಿ ಮೇರೆಗೆ ನಾಲೆಯ ನೀರಿನ ಹರಿವು ವೀಕ್ಷಿಸಲೆಂದು ಭದ್ರಾವತಿ ತಾಲೂಕು ಹಂಚಿನ ಸಿದ್ದಾಪುರ ಗ್ರಾಮಕ್ಕೆ (ನಾಲಾ ಗೇಟ್ ಇರುವ ಸ್ಥಳಕ್ಕೆ) ಮಾಜಿ ಸಚಿವರು ರೈತರೊಂದಿಗೆ ಹೊರಟು. ಆಗ ನಾಲೆಗೆ ನೀರು ಬಿಡದೇ ಅಧಿಕಾರಿಗಳು ಸುಳ್ಳು ಹೇಳಿರುವುದು ಗೊತ್ತಾಯಿತು.ಅನಂತರ ಶಿವಮೊಗ್ಗದ ನೀರಾವರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ರವಿಚಂದ್ರ ಹಾಗೂ ಡಿಸಿಇ ಲೋಹಿತಾಶ್ವ ಅವರಿಗೆ ಫೋನ್ ಕರೆ ಮಾಡಿ, ಹೊನ್ನಾಳಿ ತಾಲೂಕಿನ ರೈತರ ಪರಿಸ್ಥಿತಿ ವಿವರಿಸಿದರು. ಪ್ರಸ್ತುತ ಬೇಸಿಗೆಯ ಕಾಲವಾಗಿದೆ. ಬೆಳೆಗಳಿಗೆ ತುರ್ತು ನೀರಿನ ಅಗತ್ಯವಿದೆ. ಈ ಕ್ಷಣವೇ 150 ಕ್ಯುಸೆಕ್ ನೀರನ್ನು ನಾಲೆಗೆ ಬಿಡುವಂತೆ ಸೂಚಿಸಿದರು.
ಆಗ ಮೇಲಧಿಕಾರಿಗಳು ಸ್ಥಳದಲ್ಲಿದ್ದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ನಾಲೆಗೆ 150 ಕ್ಯುಸೆಕ್ ನೀರು ಹರಿಸಿದರು. ಅಕ್ಯಾಡಕ್ ಒಡೆದು ಹೋದ ಸ್ಥಳದ ಕಾಮಗಾರಿ ವೀಕ್ಷಿಸಿ, ಹಂತ ಹಂತವಾಗಿ ನಾಲೆಗೆ ನೀರಿನ ಪ್ರಮಾಣ ಹೆಚ್ಚಿಸಲು ರೇಣುಕಾಚಾರ್ಯ ಸೂಚಿಸಿದರು.- - - -29ಎಚ್.ಎಲ್.ಐ2.ಜೆಪಿಜಿ:
ಭದ್ರಾವತಿ ತಾಲೂಕು ದಿಗ್ಗೇನಹಳ್ಳಿ ಸಮೀಪ ಹೊನ್ನಾಳಿ ತಾಲೂಕು ಭದ್ರಾ ನಾಲಾ ಅಚ್ಚುಕಟ್ಟು ಪ್ರದೇಶಕ್ಕೆ ಸಂಬಂಧಪಟ್ಟ ಅಕ್ಯಾಡಕ್ ಒಡೆದ ಸ್ಥಳಕ್ಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ರೈತರೊಂದಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.