ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ಹೇಳಿಕೆ

| Published : Sep 10 2024, 01:31 AM IST

ಸಾರಾಂಶ

ಕಳೆದ 10 ವರ್ಷಗಳಿಂದ ಪವಿತ್ರಾಗೌಡಳ ಜತೆ ಲಿವ್ ಇನ್‌ ರಿಲೇಷನ್‌ನಲ್ಲಿದ್ದು, ಆರ್‌.ಆರ್‌.ನಗರದ ನನ್ನ ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿ ಆಕೆ ನೆಲೆಸಿದ್ದಾಳೆ. ನನ್ನ ಹಾಗೂ ಪವಿತ್ರಾ ಮನೆಯಲ್ಲಿ ಪವನ್ ಕೆಲಸ ಮಾಡುತ್ತಿದ್ದ.

10 ವರ್ಷದಿಂದ ಪವಿತ್ರಾ ಜತೆ ಲಿವ್‌ ಇನ್‌ ಸಂಬಂಧ

ಕಳೆದ 10 ವರ್ಷಗಳಿಂದ ಪವಿತ್ರಾಗೌಡಳ ಜತೆ ಲಿವ್ ಇನ್‌ ರಿಲೇಷನ್‌ನಲ್ಲಿದ್ದು, ಆರ್‌.ಆರ್‌.ನಗರದ ನನ್ನ ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿ ಆಕೆ ನೆಲೆಸಿದ್ದಾಳೆ. ನನ್ನ ಹಾಗೂ ಪವಿತ್ರಾ ಮನೆಯಲ್ಲಿ ಪವನ್ ಕೆಲಸ ಮಾಡುತ್ತಿದ್ದ.

--

ಮೊಬೈಲ್‌ ನನಗೆ ಗಿಫ್ಟಾಗಿ ಬಂದಿದ್ದು

ನಾನು ಬಳಸುತ್ತಿರುವ ಐ-ಫೋನ್ ಪ್ರೋಮ್ಯಾಕ್ಸ್ 15 ಮೊಬೈಲನ್ನು ಸುಮಾರು 7-9 ತಿಂಗಳ ಹಿಂದೆ ಬೆಂಗಳೂರಿನಲ್ಲಿ ಯಾರೋ ಸ್ನೇಹಿತರು ಗಿಫ್ಟ್ ನೀಡಿದ್ದರು. ಯಾರು ಎಂದು ನನಗೆ ಸರಿಯಾಗಿ ನೆನಪಿಲ್ಲ.

--

ಶೆಡ್‌ಗೆ ಈ ಹಿಂದೆ 2 ಬಾರಿಯಷ್ಟೇ ಹೋಗಿದ್ದೆ

ನಾನು ಈ ಹಿಂದೆ ಪಟ್ಟಣಗೆರೆಯಲ್ಲಿರುವ ಜಯಣ್ಣ ಅವರ ಶೆಡ್‌ಗೆ ಎರಡು ಬಾರಿ ತೆರಳಿದ್ದೆ. ಒಮ್ಮೆ ಕ್ರಾಂತಿ ಸಿನಿಮಾದ ಶೂಟಿಂಗ್‌ಗಾಗಿ ಹಾಗೂ ಅದೇ ಚಿತ್ರದ ರಿಹರ್ಸಲ್‌ ಟೈಮ್‌ನಲ್ಲಿ ಇಂಟ‌ರ್‌ವ್ಯೂ ವೇಳೆ ಹೋಗಿದ್ದೆ.

--

ಕಾರಿನಿಂದಲೇ ದೇವರಿಗೆ ನಿತ್ಯ ನಮಸ್ಕರಿಸುತ್ತೇನೆ

ನಾನು ದಿನನಿತ್ಯ ಮನೆಯಿಂದ ಹೊರಗೆ ಹೋಗಬೇಕಾದರೆ, ನಮ್ಮ ಮನೆಯ ಹತ್ತಿರದ ಬಿಬಿಎಂಪಿ ಆಫೀಸ್ ಹಿಂದೆ ಇರುವ ವೆಂಕಟೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಾರ್ ನಿಲ್ಲಿಸಿ ಕಾರ್‌ನಲ್ಲಿ ಕುಳಿತುಕೊಂಡೇ ನಮಸ್ಕಾರ ಮಾಡಿ ಹೊರಡುತ್ತೇನೆ.

------

ಸೌಂದರ್ಯ ಜಗದೀಶ್‌ ಬಳಿ ಪವಿತ್ರಾಗೆ ₹1.75 ಕೋಟಿ ಸಾಲ ಕೊಡಿಸಿದ್ದೆ

ನನಗೆ 10 ವರ್ಷಗಳಿಂದ ಜೆಟ್ ಲ್ಯಾಗ್‌ ಪಬ್‌ ಮಾಲಿಕ ಸೌಂದರ್ಯ ಜಗದೀಶ್ ಪರಿಚಿತರು. ಈ ಸ್ನೇಹದಲ್ಲೇ 2018ರಲ್ಲಿ ಮನೆ ಖರೀದಿಸುವ ಸಲುವಾಗಿ ಪವಿತ್ರಾಗೌಡಳಿಗೆ ಜಗದೀಶ್ ಅವರಿಂದ 1.75 ಕೋಟಿ ರು. ಸಾಲ ಕೊಡಿಸಿದ್ದೆ. ಈ ಹಣಕಾಸು ವ್ಯವಹಾರ ಬ್ಯಾಂಕ್ ಮೂಲಕವೇ ನಡೆದಿತ್ತು. ಎರಡು ವರ್ಷಗಳ ಹಿಂದೆ ಜಗದೀಶ್ ಅವರಿಗೆ ನಾನು ಸಿನಿಮಾದಲ್ಲಿ ಸಂಪಾದಿಸಿದ್ದ ಹಣದಲ್ಲಿ ಸಾಲ ತೀರಿಸಿದ್ದೆ.-----ಸಾಕ್ಷ್ಯನಾಶಕ್ಕೆ 38 ಲಕ್ಷ ರು. ಸಾಲ ಮಾಡಿದ್ದೆ

ನಾನು ಭಾನುವಾರ (ಜೂ.9) ಸಂಜೆ 4 ಗಂಟೆಗೆ ಚಿತ್ರೀಕರಣ ಸಲುವಾಗಿ ಮೈಸೂರಿಗೆ ತೆರಳಿದ್ದೆ. ಆ ವೇಳೆ ಸಾಕ್ಷ್ಯ ನಾಶ ಸಲುವಾಗಿ ಮನೆಯಲ್ಲಿದ್ದ 3 ಲಕ್ಷ ರು.ಗಳನ್ನು ಬ್ಯಾಗ್‌ನಲ್ಲಿಟ್ಟು ತೆಗೆದುಕೊಂಡು ಹೋಗಿದ್ದೆ. ನನ್ನ ಬಂಧನದ ಬಳಿಕ ಆ ಹಣವನ್ನು ನನ್ನ ಪತ್ನಿಗೆ ಕಾಸ್ಟ್ಯೂಮ್ಸ್ ಅಸಿಸ್ಟೆಂಟ್ ರಾಜು ತಲುಪಿಸಿದ್ದ. ಇನ್ನು ಸಾಕ್ಷ್ಯನಾಶ ಸಲುವಾಗಿ ನನಗೆ ಪರಿಚಯವಿರುವ ಮೋಹನ್ ಅವರಿಂದ 38 ಲಕ್ಷ ರು. ಸಾಲ ಪಡೆದಿದ್ದೆ ಎಂದು ದರ್ಶನ್‌ ಹೇಳಿದ್ದಾರೆ.

------ನನ್ನ ಪ್ರತಿ ತಿಂಗಳ ಖರ್ಚು ₹15.5 ಲಕ್ಷ

ನನ್ನ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ನಾನೇ ನೋಡಿಕೊಳ್ಳುತ್ತೇನೆ. ಪ್ರತಿ ತಿಂಗಳು ಮೈಸೂರಿನಲ್ಲಿರುವ ಫಾರ್ಮ್ ಹೌಸ್ ನಿರ್ವಹಣೆಗೆ ಸುಮಾರು 10-12 ಲಕ್ಷ ರು. ಹಾಗೂ ರಾಜರಾಜೇಶ್ವರಿ ನಗರದಲ್ಲಿರುವ ಮನೆಯ ನಿರ್ವಹಣೆಗೆ ಸುಮಾರು 3.5 ಲಕ್ಷ ರು. ಖರ್ಚಾಗುತ್ತದೆ ಎಂದು ದರ್ಶನ್ ತಿಳಿಸಿದ್ದಾರೆ.

==

ಪವಿತ್ರಾಗೌಡ ತಪ್ಪೊಪ್ಪಿಗೆಚಪ್ಪಲಿಯಲ್ಲಿ ಹೊಡೆದೆ, ಸಾಯಿಸಿಬಿಡಿ ಎಂದೆ

ರೇಣುಕಾಸ್ವಾಮಿಯ ತಲೆ, ಎದೆಯ ಮೇಲೆ ದರ್ಶನ್‌, ನಾಗರಾಜ, ಪವನ್‌, ನಂದೀಶ್ ಮನಸೋ ಇಚ್ಛೆ ಹೊಡೆದರು. ನಾನು ಆತನಿಗೆ ಚಪ್ಪಲಿಯಿಂದ ಕಪಾಳಕ್ಕೆ ಹೊಡೆದು, ಬಿಡಬೇಡಿ ಸಾಯಿಸಿ ಎಂದು ಅಲ್ಲಿದ್ದವರಿಗೆ ಹೇಳಿದಾಗ ಎಲ್ಲರೂ ಸೇರಿ ಆತನಿಗೆ ಹಲ್ಲೆ ಮಾಡಲು ಶುರು ಮಾಡಿದರು. ಆ ವೇಳೆ ನನ್ನನ್ನು ದರ್ಶನ್ ಮನೆಗೆ ಕಳುಹಿಸಿದರು.

--ಪತ್ನಿ ಜತೆ ದರ್ಶನ್‌ ದುಬೈಗೆ ಹೋಗಿದ್ದಕ್ಕೆ ನಾನು ಜಗಳವಾಡಿದ್ದೆ

ಕಳೆದ ಮೇನಲ್ಲಿ ನನಗೆ ತಿಳಿಸದೆ ವಿಜಯಲಕ್ಷ್ಮೀ ಜತೆ ದುಬೈಗೆ ತೆರಳಿ ವಿವಾಹ ವಾರ್ಷಿಕೋತ್ಸವನ್ನು ದರ್ಶನ್ ಆಚರಿಸಿಕೊಂಡಿದ್ದರು. ಈ ವಿಚಾರ ತಿಳಿದ ನಂತರ ಅವರೊಂದಿಗೆ ಜಗಳ ಮಾಡಿಕೊಂಡು ಮಾತು ನಿಲ್ಲಿಸಿದ್ದೆ.--

₹1.5 ಕೋಟಿ ಮೌಲ್ಯದ ಬಂಗಲೆಯನ್ನು ದರ್ಶನ್‌ ನನಗೆ ಕೊಡಿಸಿದ್ದರು

ಹತ್ತು ವರ್ಷಗಳ ಹಿಂದೆ ಬುಲ್‌ ಬುಲ್‌ ಸಿನಿಮಾ ಆಡಿಷನ್‌ಗೆ ಹೋದಾಗ ನನಗೆ ದರ್ಶನ್ ಪರಿಚಯವಾಗಿ ಬಳಿಕ ಆತ್ಮೀಯತೆ ಮೂಡಿತು. 2018ರಲ್ಲಿ ನನಗೆ 1.5 ಕೋಟಿ ರು. ಮೌಲ್ಯದ ಮನೆಯನ್ನು ದರ್ಶನ್ ಕೊಡಿಸಿದ್ದರು. ಅಂದಿನಿಂದ ಒಟ್ಟಿಗೆ ಸಂಸಾರ ಮಾಡುತ್ತಿದ್ದೇವೆ. 13 ವರ್ಷದ ಮಗಳು ಹಾಗೂ ದರ್ಶನ್‌ ಜತೆ ವಾಸವಾಗಿದ್ದೇನೆ.

--

ನನಗೆ ದರ್ಶನ್‌ ಆ್ಯಪಲ್‌ ಐಫೋನ್‌ ಕೊಡಿಸಿದ್ದರು

2013ರಿಂದ ನಾನು ಇನ್‌ಸ್ಟಾಗ್ರಾಂನಲ್ಲಿ ಖಾತೆಗಳನ್ನು ಹೊಂದಿದ್ದು, ಅವುಗಳನ್ನು ನಾನೇ ಮೊಬೈಲ್‌ನಿಂದ ನಿರ್ವಹಿಸುತ್ತೇನೆ. ನನಗೆ ದರ್ಶನ್‌ ಐಫೋನ್‌ ಮ್ಯಾಕ್ಸ್‌-14 ಕೊಡಿಸಿದ್ದರು. ನನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಹಲವಾರು ಹಿಂಬಾಲಿಸುತ್ತಿರುತ್ತಾರೆ. ಕೆಲವರು ಮೆಸೇಜ್‌ (ಡಿಎಂ) ಮಾಡಿದ್ದರು. ಕೆಲವು ಅಸಹ್ಯವಾದ ಮೆಸೇಜ್ ಮಾಡಿದಾಗ ಬ್ಲಾಕ್ ಮಾಡಿದ್ದೆ. ಆ ಅಸಹ್ಯಕರ ಮೆಸೇಜ್‌ಗಳನ್ನು ಸ್ಕ್ರೀನ್‌ ಶಾಟ್‌ ತೆಗೆದು ದರ್ಶನ್‌ಗೆ ತೋರಿಸಿದ್ದೆ.--

ಕಿಡ್ನಾಪ್‌ಗೆ ಅಭಿಮಾನಿ ಬಳಕೆ ದರ್ಶನ್ ಸಲಹೆ

ನನಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದವನನ್ನು ಪತ್ತೆಹಚ್ಚಿ ತರಲು ತಮ್ಮ ಅಭಿಮಾನಿಗಳ ಸಂಘವನ್ನು ಬಳಸಿಕೊಳ್ಳುವಂತೆ ದರ್ಶನ್ ಹೇಳಿದ್ದರು. ಕೊನೆಗೆ ಪಟ್ಟಣಗೆರೆ ಶೆಡ್‌ಗೆ ಅಭಿಮಾನಿಗಳ ಸಂಘದ ಮೂಲಕವೇ ರೇಣುಕಾಸ್ವಾಮಿಯನ್ನು ಅಪಹರಿಸಿ ಕರೆತಂದಿದ್ದರು.--ಚೆನ್ನಾಗಿ ಬಾರಿಸಿ ಗತಿ ಕಾಣಿಸುವೆ ಆಸೆ ಇತ್ತು

ರೇಣುಕಾಸ್ವಾಮಿ ನನಗೆ ಕರೆ ಮಾಡಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ. ಈ ವಿಷಯವನ್ನು ವಿನಯ್‌ಗೆ ನಾನು ಮತ್ತು ಪವನ್‌ ತಿಳಿಸಿದೆವು. ವಿನಯ್‌ ಮೂಲಕ ದರ್ಶನ್‌ಗೆ ಗೊತ್ತಾಯಿತು. ಆತನನ್ನು ಕರೆತಂದು ಚೆನ್ನಾಗಿ ಬಾರಿಸಿ ಒಂದು ಗತಿ ಕಾಣಿಸೋಣ ಅಂದುಕೊಂಡಿದ್ದೆವು.

--

ರೇಣುಕಾಸ್ವಾಮಿ ಸಾವು ಗೊತ್ತಾಗಿದ್ದು ರಾತ್ರಿ

ರೇಣುಕಾಸ್ವಾಮಿ ಜೂ.8ರ ರಾತ್ರಿ 9.30 ಗಂಟೆಯಲ್ಲಿ ಹಲ್ಲೆಗೊಳಗಾದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಪವನ್ ಹಾಗೂ ದರ್ಶನ್ ಹೇಳಿದರು. ಈ ವಿಷಯವನ್ನು ನಾವು ನೋಡಿಕೊಳ್ಳುತ್ತೇವೆ ಬಿಡು ಎಂದಿದ್ದರು.--ರೇಣುಕಾ ಮೆಸೇಜ್‌ನಿಂದ ನಾನು ದುಃಖಿತಳಾಗಿದ್ದೆ

ಇದೇ ವರ್ಷದ ಫೆಬ್ರವರಿಯಿಂದ ‘ಗೌತಮ್‌ ಕೆ.ಎಸ್‌.1990’ ಎಂಬ ಹೆಸರಿನ ಖಾತೆಯಿಂದ ಒಬ್ಬ ವ್ಯಕ್ತಿ ಅಶ್ಲೀಲ ಸಂದೇಶ, ಫೋಟೋ ಹಾಗೂ ವಿಡಿಯೋಗಳನ್ನು ಕಳುಹಿಸುತ್ತಿದ್ದ. ಇದರಿಂದ ನಾನು ದುಃಖಿತಳಾಗಿದ್ದೆ. ಆ ನೋವನ್ನು ಪವನ್ ಜತೆ ಹಂಚಿಕೊಂಡಿದ್ದೆ. ದೂರು ನೀಡಿರಲಿಲ್ಲ.--ರೇಣುಕಾಗೆ ಮೆಸೇಜ್‌ ಮಾಡಿ ನಂಬರ್‌ ಕೇಳಿದೆ

ರೇಣುಕಾಸ್ವಾಮಿಗೆ ಬುದ್ಧಿ ಕಲಿಸುವ ಸಲುವಾಗಿ ‘ಡ್ರಾಪ್ ಮಿ ಯುವರ್ ನಂಬರ್’ ಎಂದು ಇನ್‌ಸ್ಟಾಗ್ರಾಂನಲ್ಲಿ ಆತನಿಗೆ ಮೆಸೇಜ್ ಕಳುಹಿಸಿದೆ. ಜೂ.5ರಂದು ಪವನ್‌ ಮೊಬೈಲ್ ನಂಬರ್ ಹಾಕಿ ‘ಕಾಲ್ ಮಿ’ ಎಂದು ಮತ್ತೆ ಮೆಸೇಜ್‌ ಮಾಡಿದೆ. ಆ ದಿನ ರಾತ್ರಿ 9 ಗಂಟೆಗೆ ಆತ (ರೇಣುಕಾಸ್ವಾಮಿ) ಕರೆ ಮಾಡಿದಾಗ ನಾನೇ ಸ್ವೀಕರಿಸಿದೆ. ಆಗ ನೀವು ಎಲ್ಲಿರೋದು, ಏನು ಮಾಡುವುದು ಎಂದೆಲ್ಲ ಪ್ರಶ್ನೆ ಕೇಳಿ ನನ್ನೊಂದಿಗೆ 5 ನಿಮಿಷ ಅಶ್ಲೀಲವಾಗಿ ಮಾತನಾಡಿದ್ದ.

--ಜಿಗಣಿಯಲ್ಲಿದ್ದಾನೆ ಎಂದು ಇಬ್ಬರನ್ನು ಕಳಿಸಿದ್ದೆವು

ನನಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದವನು ಜಿಗಣಿಯಲ್ಲಿ ಕೆಲಸ ಮಾಡೋದು ಎಂದು ತಿಳಿದು ಅಲ್ಲಿಗೆ ದರ್ಶನ್‌ ಮನೆಯ ಕೆಲಸದಾಳು ನಂದೀಶ್ ಹಾಗೂ ತೌಸಿಫ್‌ನನ್ನು ಕಳುಹಿಸಲಾಗಿತ್ತು. ಕೊನೆಗೆ ರೇಣುಕಾಸ್ವಾಮಿಯೇ ತಾನು ಕೆಲಸ ಮಾಡುತ್ತಿದ್ದ ಫಾರ್ಮಸಿ ಪೋಟೋ, ವಿಳಾಸ ಹಾಗೂ ಲೊಕೇಷನ್ ಕಳುಹಿಸಿದ.--

ದರ್ಶನ್‌ರಿಂದಲೇ ನನಗೆ ನಟರ ಪರಿಚಯವಾಯ್ತು

ದರ್ಶನ್ ಮೂಲಕ ಸೌಂದರ್ಯ ಜಗದೀಶ್ ಕುಟುಂಬ, ನಟರಾದ ದೇವರಾಜ್‌, ಪ್ರಜ್ವಲ್ ದೇವರಾಜ್‌, ಚಿಕ್ಕಣ್ಣ, ಧನವೀರ್, ಅಭಿಷೇಕ್ ಅಂಬರೀಷ್, ಯಶಸ್ ಸೂರ್ಯ, ಪ್ರದೂಷ್, ನಾಗರಾಜು, ವಿನಯ್, ದರ್ಶನ್ ಕಾರು ಚಾಲಕ ಲಕ್ಷ್ಮಣ್, ಗೋವಿಂದರಾಜು, ನಂದೀಶ್, ಮನೆಯಲ್ಲಿ ನಾಯಿ ನೋಡಿಕೊಳ್ಳುವ ಅಮೀರ್ ಬಾಬು ಸೇರಿ ಇತರರು ಪರಿಚಿತರಾಗಿದ್ದರು.------

ಪಿಯುಸಿ ಓದುವಾಗಲೇ ನಾನು ಮದುವೆಯಾದೆ

ಪಿಯುಸಿ ಓದುವಾಗಲೇ ಉತ್ತರಪ್ರದೇಶ ಮೂಲದ ಐಟಿ ಉದ್ಯೋಗಿ ಸಂಜಯ್ ಕುಮಾರ್ ಸಿಂಗ್ ಪರಿಚಯವಾಗಿದ್ದು, 2007ರಲ್ಲಿ ಮದುವೆಯಾಗಿದ್ದೆವು. ಎರಡು ವರ್ಷ ಜೊತೆಯಲ್ಲಿ ವಾಸವಾಗಿದ್ದು, ನಮಗೆ ಹೆಣ್ಣು ಮಗು ಜನಿಸಿತು. ನಂತರ ವಿನಾಕಾರಣ ಜಗಳ ತೆಗೆದು ಪತಿ ಗಲಾಟೆ ಮಾಡುತ್ತಿದ್ದರು. ಕೊನೆಗೆ ಇಬ್ಬರೂ ಪರಸ್ಪರ ಒಪ್ಪಿ ವಿವಾಹ ವಿಚ್ಛೇದನ ಪಡೆದೆವು.

--ಬಿಸಿಎ ಪದವೀಧರೆ, ಫ್ಯಾಷನ್‌ ಡಿಸೈನರ್‌

ನಾನು ಫ್ಯಾಷನ್‌ ಡಿಸೈನರ್ ಆಗಿದ್ದು, ಬೆಂಗಳೂರಿನ ಆರ್.ಆರ್‌.ನಗರದಲ್ಲಿ ರೆಡ್‌ ಕಾರ್ಪೆಟ್‌ ಹೆಸರಿನ ಡಿಸೈನರ್ ಸ್ಟುಡಿಯೋ ಇಟ್ಟಿದ್ದೇನೆ. ತಂದೆ-ತಾಯಿ ಹಾಗೂ ಇಬ್ಬರು ಸೋದರರಿದ್ದು, ಕರೆಸ್ಪಾನ್‌ಡೆನ್ಸ್‌ನಲ್ಲಿ ಬಿಸಿಎ ಪದವಿ ಪಡೆದಿದ್ದೇನೆ.