ಸಾರಾಂಶ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ಚಿತ್ರನಟ ದರ್ಶನ್ ಸೇರಿದಂತೆ ಇತರರನ್ನು ಶೀಘ್ರವಾಗಿ ಗಲ್ಲಿಗೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ) ವತಿಯಿಂದ ಶುಕ್ರವಾರ ಹರಿಹರದಲ್ಲಿ ಗ್ರೇಡ್-೨ ತಹಸೀಲ್ದಾರ್ ಶಶಿಧರಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಹರಿಹರ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ಚಿತ್ರನಟ ದರ್ಶನ್ ಸೇರಿದಂತೆ ಇತರರನ್ನು ಶೀಘ್ರವಾಗಿ ಗಲ್ಲಿಗೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ) ವತಿಯಿಂದ ಶುಕ್ರವಾರ ಗ್ರೇಡ್-೨ ತಹಸೀಲ್ದಾರ್ ಶಶಿಧರಯ್ಯ ಅವರಿಗೆ ಮನವಿ ಸಲ್ಲಿಸಿದರು.
ನಗರದ ಶಿವಮೊಗ್ಗ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಶಿವಮೊಗ್ಗ ರಸ್ತೆ, ಗಾಂಧಿ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿ ಬಳಿ ಅಂತ್ಯಗೊಂಡಿತು. ಮೆರವಣಿಗೆಯುದ್ದಕ್ಕೂ ಕೊಲೆ ಆರೋಪಿಗಳಿಗೆ ಧಿಕ್ಕಾರ ಕೂಗಿದರು.ಕರವೇ ಪದಾಧಿಕಾರಿಗಳು ಮಾತನಾಡಿ, ಕನ್ನಡ ಚಿತ್ರರಂಗದ ಹೆಸರಾಂತ ನಾಯಕ ನಟ ದರ್ಶನ್ ಹಾಗೂ ಅವರ ಸಹಚರರು ಅಮಾಯಕ ರೇಣುಕಾಸ್ವಾಮಿ ಅವರಿಗೆ ಚಿತ್ರಹಿಂಸೆ ಕೊಟ್ಟು ಅಮಾನುಶವಾಗಿ ಹತ್ಯೆ ಮಾಡಿದ್ದಾರೆ. ಈ ಕೃತ್ಯವನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದರು.
ಪೊಲೀಸ್ ಇಲಾಖೆಯ ಮೇಲೆ ಎಷ್ಟೇ ಒತ್ತಡ ಬಂದರೂ ಗಣನೆಗೆ ತೆಗೆದುಕೊಳ್ಳದೇ, ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಬೇಕು. ಅರ್ಹ ಆರೋಪಿಗಳನ್ನು ಗಲ್ಲುಶಿಕ್ಷೆಗೆ ಗುರಿಪಡಿಸಬೇಕು. ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ₹೧ ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ತಾಲೂಕು ಅಧ್ಯಕ್ಷ ವೈ.ರಮೇಶ್ ಮಾನೆ, ನಗರಾಧ್ಯಕ್ಷ ಪ್ರೀತಮ್ ಬಾಬು, ಕಾರ್ಯದರ್ಶಿ ವಿನಾಯಕ, ಉಳ್ಳಾಗಡ್ಡಿ ಚನ್ನಬಸಪ್ಪ, ಚಂದ್ರಶೇಖರಪ್ಪ, ಎ.ಇ. ಸುರೇಶ್ ಸ್ವಾಮಿ, ಆಲಿ ಆಕ್ಬರ್, ಸಿದ್ದಣ್ಣ, ಶಂಕರ್, ಗಣೆಶ್ ಮಾನೆ, ವೀರಭದ್ರಯ್ಯ, ರಮೇಶ್, ಸುರೇಶ್ ಹಾಗೂ ಇತರರಿದ್ದರು.
- - --೧೪ಎಚ್‌ಆರ್‌ಆರ್೨: