ಹತ್ತು ದಿನಗಳೊಳಗೆ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೆ ರಸ್ತೆ ತಡೆ ನಡೆಸಿ ಉಗ್ರಹೋರಾಟ ಮಾಡಲಾಗುವುದು ಎಂದು ಬಲ್ಲಮಾವಟಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷಕರವಂಡ ಲವ ನಾಣಯ್ಯ ಎಚ್ಚರಿಸಿದ್ದಾರೆ.

ನಾಪೋಕ್ಲು: ಹತ್ತು ದಿನಗಳೊಳಗೆ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೆ ರಸ್ತೆ ತಡೆ ನಡೆಸಿ ಉಗ್ರ

ಹೋರಾಟ ಮಾಡಲಾಗುವುದು ಎಂದು ಬಲ್ಲಮಾವಟಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ

ಕರವಂಡ ಲವ ನಾಣಯ್ಯ ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವತಿಯಿಂದ ನಾಡಿನ

ಎಲ್ಲ ಸಂಘ, ಸಂಸ್ಥೆಗಳ ಮತ್ತು ರೈತರ, ಸಾರ್ವಜನಿಕರ ಸಹಯೋಗದಲ್ಲಿ ರಸ್ತೆ ತಡೆ ನಡೆಸಿ

ಉಗ್ರ ಹೋರಾಟ ಮಾಡಲಾಗುವುದು ಎಂದರು.ನಾಪೋಕ್ಲುವಿನಿಂದ ಬಲ್ಲಮಾವಟಿವರೆಗಿನ ಮುಖ್ಯ ರಸ್ತೆಯನ್ನು ದುರಸ್ತಿ ಮಾಡದೆ ಅಥವಾ ಮರು ಡಾಂಬರೀಕರಣ ಮಾಡದೆ

ಹಾಗೆಯೇ ಬಿಡಲಾಗಿದೆ. ಎಲ್ಲ ಕಡೆ ಕಳಪೆಯಾಗಿಯಾದರೂ ಗುಂಡಿ ಮುಚ್ಚುವ ಕೆಲಸ ಮಾಡಲಾಗಿದೆ. ಆದರೆ ಇಲ್ಲಿ ಏಕೆ ರಸ್ತೆ

ಕಾಮಗಾರಿ ಮಾಡುತ್ತಿಲ್ಲ?. ಈ ಭಾಗದ ಜನರ ಗೋಳು ಹೇಳತೀರದಾಗಿದೆ. ವಾಹನಗಳಿಗೆ ತೆರಳಲಿಕ್ಕೂ ಸಾಧ್ಯವಾಗದ ಸ್ಥಿತಿಗೆ ತಲುಪಿದೆ ಎಂದರು. ಎರಡು ತಿಂಗಳ ಹಿಂದೆ ಬಿಜೆಪಿ ವತಿಯಿಂದ ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ರಸ್ತೆ ತಡೆ ಮಾಡಿ

ಲೋಕೋಪಯೋಗಿ ಇಲಾಖೆ, ಜೆಲ್ಲಾಡಳಿತ ಮತ್ತು ಸರ್ಕಾರಕ್ಕೆ ಮನವರಿಕೆ ಮಾಡಲಾಗಿತ್ತು.

ಇಲ್ಲಿಯ ರಸ್ತೆ ಕಾಮಗಾರಿಯನ್ನು ತಡೆಹಿಡಿಯಲಾಗಿದೆ ಎಂಬ ಮಾಹಿತಿ ದೊರೆಯುತ್ತಿದೆ.

ಯಾವ ಕಾರಣಕ್ಕೆ ತಡೆಹಿಡಿಯಲಾಗಿದೆ? ಇನ್ನು 10 ದಿನಗಳೊಳಗೆ ರಸ್ತೆ ಕಾಮಗಾರಿ ನಡೆಸದಿದ್ದರೆ ಮತ್ತೊಮ್ಮೆ

ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬಲ್ಲಮಾವಟಿ ಶಕ್ತಿ ಕೇಂದ್ರದ ಉಪಾಧ್ಯಕ್ಷ ಮನವಟ್ಟಿದ ದೀಪಕ್ ಪೊನ್ನಪ್ಪ, ಬಲ್ಲಮಾವಟಿ

ಬಿಜೆಪಿ ಬೂತ್ ಅಧ್ಯಕ್ಷ ಚೀಯoಡಿ ದಿನೇಶ್ ಗಣಪತಿ,

ಪೇರೂರು ಬಿಜೆಪಿ ಬೂತ್ ಅಧ್ಯಕ್ಷ ಮಚ್ಚುರ

ಶರೀನ್‌ ಬೋಪಣ್ಣ, ಬಲ್ಲಮಾವಟಿ ಗ್ರಾಪಂ ಮಾಜಿ ಅಧ್ಯಕ್ಷ ಮುಕ್ಕಾಟಿರ

ಸುತನ್ ಸುಬ್ಬಯ್ಯ ಉಪಸ್ಥಿತರಿದ್ದರು.