ಪಡೆದ ಸಾಲ ಸಕಾಲಕ್ಕೆ ಮರುಪಾವತಿಸಿ: ಸುಲಧಾಳ

| Published : Oct 02 2024, 01:06 AM IST

ಸಾರಾಂಶ

ಜಿಲ್ಲಾ ಹಿರಿಯ ರಾಜಕಾರಣಿ ನಮ್ಮ ಸಂಘದ ಸಂಸ್ಥಾಪಕ ಬಸವರಾಜ ಮಟಗಾರ ಅವರ ಮಾರ್ಗದರ್ಶನದಲ್ಲಿ ಬೆಳಗಾವಿ ಶ್ರೀ ಸಂಗಮ ಸಹಕಾರಿ ಪತ್ತಿನ ಸಂಘ ಪ್ರಗತಿಯತ್ತ ಮುನ್ನಡೆದಿದೆ ಎಂದು ಬೆಳಗಾವಿ ಶ್ರೀ ಸಂಗಮ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಸಿದ್ದಪ್ಪ ಎಸ್. ಸುಲಧಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಜಿಲ್ಲಾ ಹಿರಿಯ ರಾಜಕಾರಣಿ ನಮ್ಮ ಸಂಘದ ಸಂಸ್ಥಾಪಕ ಬಸವರಾಜ ಮಟಗಾರ ಅವರ ಮಾರ್ಗದರ್ಶನದಲ್ಲಿ ಬೆಳಗಾವಿ ಶ್ರೀ ಸಂಗಮ ಸಹಕಾರಿ ಪತ್ತಿನ ಸಂಘ ಪ್ರಗತಿಯತ್ತ ಮುನ್ನಡೆದಿದೆ ಎಂದು ಬೆಳಗಾವಿ ಶ್ರೀ ಸಂಗಮ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಸಿದ್ದಪ್ಪ ಎಸ್. ಸುಲಧಾಳ ಹೇಳಿದರು.

ಹಿಡಕಲ್ ಡ್ಯಾಮಿನಲ್ಲಿ ಬೆಳಗಾವಿ ಜಿಲ್ಲಾ ಶ್ರೀ ಸಂಗಮ ಪತ್ತಿನ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ನಡೆಯಿತು. ನಿವೃತ್ತ ಮುಖ್ಯ ಶಿಕ್ಷಕ ದತ್ತಾತ್ರೇಯ ಎಂ.ಹಜ್ಜೆ ಮಾತನಾಡಿ, ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ ಆರ್ಥಿಕ ಪೂರಕ ಕಾರ್ಯಚಟುವಟಿಕೆ ನಡೆಯಬೇಕು. ಸಹಕಾರಿ ಸಂಘಗಳಿಗೆ ಸದಸ್ಯರೇ ಜೀವಾಳವಾಗಿದ್ದು, ಪಡೆದ ಸಾಲ ಸಕಾಲಕ್ಕೆ ಮರುಪಾವತಿ ಮಾಡಬೇಕೆಂದರು.

ಮುಖ್ಯ ಕಾರ್ಯನಿರ್ವಾಹಕ ಎ.ಎಸ್. ಮಾಹುಲಿ ಮಾತನಾಡಿ, ವರ್ಷದ ಒಟ್ಟು ವಹಿವಾಟು ₹5 ಕೋಟಿಗಿಂತ ಹೆಚ್ಚು ದುಡಿಯುವ ಬಂಡವಾಳ ₹2,27,96,376 ಇದೆ. ಷೇರು ಬಂಡವಾಳ ₹15,75,625 ಇದೆ. ಒಟ್ಟು ಠೇವು ₹1,68,87,357 ಇದೆ. ಒಟ್ಟು ಸಾಲ ₹1,70,71,757 ಇದೆ. ₹5,02,582 ಲಾಭ ಗಳಿಸಿದೆ. ಶೇ.10ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಹೊಸಮನಿ, ನಿರ್ದೇಶಕರಾದ ಶಿವಕುಮಾರ ಮಟಗಾರ, ಕಾಡಪ್ಪಾ ಹುಕ್ಕೇರಿ, ಅಡಿವೆಪ್ಪ ನಿರ್ವಾಣಿ, ಅಪ್ಪಾಸಾಹೇಬ ಸಾರಾಪುರೆ, ಶಂಕರ ಅಮ್ಮಣಗಿ, ಗಣೇಶ ಚಿಂಚಿ, ಸದಾಶಿವ ಮಡಿವಾಳ, ಮಹ್ಮದರಸೂಲ ಕಿಲ್ಲೆದಾರ, ರಾಜು ಹೆಬ್ಬಾಳ, ಸದಾಶಿವ ಹಂಚಿನಾಳ, ಯಲ್ಲಪ್ಪ ನಾಯಿಕ, ಶಿವಲೀಲಾ ಕಬಾಡಗಿ, ಸತ್ಯಬಾಳವ್ವ ಮಗದುಮ್ಮ ಇದ್ದರು.