ಸಾಲ ಮರುಪಾವತಿ ಮಾಡಿ ಮತ್ತೆ ಪಡೆದುಕೊಳ್ಳಿ

| Published : Sep 22 2024, 01:56 AM IST

ಸಾರಾಂಶ

ರಾಮನಾಥಪುರ ಸಂಘದ ಕಚೇರಿ ಆವರಣದಲ್ಲಿ ನಡೆದ ಸಂಘದ 2023- 24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಎಚ್‌ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಎಂ.ಎಸ್. ಬಸವರಾಜು ಸಾಲ ಮರುಪಾವತಿ ಮಾಡಿ ಮತ್ತೆ ಪಡೆದುಕೊಳ್ಳುವಂತೆ ರೈತರಿಗೆ ಮನವಿ ಮಾಡಿದರು. ಪ್ರತಿಷ್ಠಿತ ಸಹಕಾರ ಸಂಘವಾಗಿರುವ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವು 1912ರಲ್ಲಿ ಪ್ರಾರಂಭಗೊಂಡು ಸಹಕಾರ ತತ್ವದ ಮೂಲ ಉದ್ದೇಶಗಳನ್ನು ಮತ್ತು ಆದರ್ಶಗಳನ್ನು ಅನುಷ್ಠಾನಗೊಳಿಸಿ, ಸದಸ್ಯರುಗಳಿಗೆ ಪ್ರಾಮಾಣಿಕ ಸೇವೆ ನೀಡುತ್ತಾ ಉತ್ತಮ ಪ್ರಗತಿ ಸಾಧಿಸುತ್ತಾ ಬಂದಿರುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಪ್ರತಿಷ್ಠಿತ ಸಹಕಾರ ಸಂಘವಾಗಿರುವ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವು 1912ರಲ್ಲಿ ಪ್ರಾರಂಭಗೊಂಡು ಸಹಕಾರ ತತ್ವದ ಮೂಲ ಉದ್ದೇಶಗಳನ್ನು ಮತ್ತು ಆದರ್ಶಗಳನ್ನು ಅನುಷ್ಠಾನಗೊಳಿಸಿ, ಸದಸ್ಯರುಗಳಿಗೆ ಪ್ರಾಮಾಣಿಕ ಸೇವೆ ನೀಡುತ್ತಾ ಉತ್ತಮ ಪ್ರಗತಿ ಸಾಧಿಸುತ್ತಾ ಬಂದಿರುತ್ತದೆ ಎಂದು ಎಚ್‌ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಎಂ.ಎಸ್. ಬಸವರಾಜು ತಿಳಿಸಿದರು.

ರಾಮನಾಥಪುರ ಸಂಘದ ಕಚೇರಿ ಆವರಣದಲ್ಲಿ ನಡೆದ ಸಂಘದ 2023- 24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಾಲ ಮರುಪಾವತಿ ಮಾಡಿ ಮತ್ತೆ ಪಡೆದುಕೊಳ್ಳುವಂತೆ ರೈತರಿಗೆ ಮನವಿ ಮಾಡಿದರು.

ಸುಬ್ರಹ್ಮಣ್ಯ ಸಹಕಾರ ಸಂಘದ ಅಧ್ಯಕ್ಷರು ಎಂ.ಎಚ್. ಚಿಕ್ಕೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತ ಮುಖಂಡರು ಮೈಲಾದಪುರ ಜವರೇಗೌಡರು, ಹರಳಳ್ಳಿ ಎಚ್.ಎಸ್ ತಮ್ಮೇಗೌಡ, ಗಂಗೂರು ಕುಮಾರಸ್ವಾಮಿ ಮುಂತಾದವರು ಮಾತನಾಡಿ ಟ್ರ್ಯಾಕ್ಟರ್ ಸವಕಳಿಯಿಂದ ಸಂಘ ಬಾರಿ ನಷ್ಟವಾಗುತ್ತಿದೆ. ಹರಾಜು ಮಾಡಿ ಮತ್ತು ಸಂಘದ ಕಟ್ಟಡದಲ್ಲಿರುವ ಅಂಗಡಿ ಮಳಿಗೆಗಳಿಗೆ ಬಾಡಿಗೆ ಜಾಸ್ತಿ ಮಾಡಿ ಸಂಘಕ್ಕೆ ಹೆಚ್ಚಿನ ಆದಾಯ ತರುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರು. ದೊಡ್ಡಯ್ಯ , ನಿರ್ದೇಶಕರಾದ ಶ್ರೀ ಜಿ.ಎಲ್ .ಜಗದೀಶ್ ಜಿ.ಸಿ. ಶಿವಣ್ಣ, ಕರಿಗೌಡ್ರು ಜಿ.ಕೆ. ಬಸವರಾಜೇಗೌಡ, ಬಸಪ್ಪ, ಮಂಜುನಾಥ, ಕುಮಾರ್, ಶ್ರೀಮತಿ ಲಕ್ಷ್ಮಮ್ಮ ಜಿ.ಎಸ್ ಭರತ್ ಎಂ ಎಸ್ ಬಸವರಾಜು, ಸಹಕಾರ ಸಂಘದ ಕಾರ್ಯ ನಿರ್ವಹಣಾಧಿಕಾರಿ ಜಿ.ಕೆ. ವೇಣುಗೋಪಾಲ್, ಸೋಮಶೇಖರ್‌, ಎಸ್.ಜಿ. ದರ್ಶನ್, ಅನುರಾಧ, ಚಲುವೇಗೌಡ, ಮೋಹನ್ ಮುಂತಾದವರು ಭಾಗವಹಿಸಿದ್ದರು.