ಸಾರಾಂಶ
ಕನ್ನಡಪ್ರಭ ವಾರ್ತೆ ಚೇಳೂರುತಾಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ವೇಮನ ಜಯಂತಿ,ಅಂಬಿಗರ ಚೌಡಯ್ಯ ಹಾಗೂ ಜನವರಿ ೨೬ ರಂದು ನಡೆಯುವ ಗಣರಾಜ್ಯೋತ್ಸವ ಆಚರಿಸುವ ಸಲುವಾಗಿ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಕರೆಯಲಾದ ಪೂರ್ವಭಾವಿ ಸಭೆಗೆ ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿದ್ದರು.ಶುಕ್ರವಾರ ಕರೆದಿದ್ದ ಸಭೆಗೆ ಚೇಳೂರು ಪಿಡಿಒ,ಸಿ ಆರ್ ಪಿ,ಹೊರತುಪಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿ, ಜಿಲ್ಲಾ ಪಂಚಾಯಿತಿಯ ಎ.ಇ.ಇ , ಪೊಲೀಸ್ ಇಲಾಖೆ,ಶಿಕ್ಷಣ ಇಲಾಖೆ ಸೇರಿದಂತೆ ೨೦ ಕ್ಕೂ ಅನೇಕ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದರು.ಎಲ್ಲರ ಸಹಕಾರ ಅಗತ್ಯ
ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು, ಗೈರು ಹಾಜರಾಗಿರುವ ಇಲಾಖೆಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಶ್ರೀನಿವಾಸಲು ನಾಯ್ಡು ಮನವಿ ಮಾಡಿದರು.ತಾಲೂಕು ಕೇಂದ್ರವಾಗಿದ್ದರೂ ಚೇಳೂರು ನಲ್ಲಿ ಯಾವುದೇ ಇಲಾಖೆಗಳು ಪ್ರಾರಂಭವಾಗಿಲ್ಲ. ಹೀಗಾಗಿ ಹಿಂದಿನ ತಾಲೂಕು ಕೇಂದ್ರದಿಂದಲೇ ಇಲಾಖೆ ಅಧಿಕಾರಿಗಳು ಸಭೆಗೆ ಬರಬೇಕು. ಆದರೆ ಬಹುತೇಕ ಯಾವುದೇ ಇಲಾಖೆಯವರು ಸಭೆಗಳಿಗೆ ಸತತ ಗೈರಾಗಿ ನಿರ್ಲಕ್ಷ್ಯ ತೋರುತ್ತಿರುವುದು ಬೇಸರದ ಸಂಗತಿ.ಶಿಸ್ತು ಕ್ರಮಕ್ಕೆ ಶಿಫಾರಸುಅಧಿಕಾರಿಗಳು ಗೈರಾದರೆ ರಾಷ್ಟ್ರೀಯ ಹಬ್ಬಗಳ ಆಚರಣೆ ಮಾಡುವುದಾದರು ಹೇಗೆ ಎಂದು ಕಡ್ಡಿಲು ವೆಂಕಟರವಣಪ್ಪ,ಜೆ ಎನ್ ಜಲಾರಿ,ಕ.ರ.ವೆ.ಅದ್ಯಕ್ಷರು ಕೆಜಿ ವೆಂಕಟರವಣಪ್ಪ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಇನ್ನು ಮುಂದೆ ಕರೆಯುವ ಯಾವುದೇ ತಾಲೂಕು ಮಟ್ಟದ ಸಭೆಗೆ ಇಲಾಖೆಯವರು ಗೈರಾದರೆ ಮೇಲಧಿಕಾರಿಗಳಿಗೆ ಶಿಸ್ತು ಕ್ರಮ ಕೈಗೊಳ್ಳಲು ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ಗಣರಾಜ್ಯೋತ್ಸವ ದಿನದಂದು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಧ್ವಜವನ್ನು ಹಾರಿಸಬೇಕು,ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಎಲ್ಲರೂ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಬೇಕು.ಮಕ್ಕಳನ್ನು ಬಳಸಿಕೊಳ್ಳಬೇಡಿಪಟ್ಟಣದ ಮುಖ್ಯ ದ್ವಾರದಿಂದ( ಅರವಿಂದ ಶಾಲೆಯಿಂದ) ಪಥ ಸಂಚಲನದಲ್ಲಿ ಸಣ್ಣ ಮಕ್ಕಳನ್ನು ಬಳಸದೇ ಪಟ್ಟಣದಲ್ಲಿ ಇರುವ ಪ್ರತಿಯೊಂದು ಖಾಸಗಿ ಶಾಲೆ ಮಕ್ಕಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂ ಜಿ ವೃತ್ತದ ವರೆಗೂ ಕಾಲ್ನಡಿಗೆ ಜಾಥ ಕಾರ್ಯಕ್ರಮ ಮಾಡಿ ಸರ್ಕಾರಿ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ತಿರ್ಮಾನಿಸಲಾಯಿತು.ಪಿಡಿಓ ಕೆ ವೆಂಕಟಾಚಲಪತಿ,ಆರ್ ಐ ಈಶ್ವರ್,ಕ.ದ.ಸಂ.ಸ.ಜಿಲ್ಲಾ ಸಂಚಾಲಕರು ಕಡ್ಡಿಲು ವೆಂಕಟರವಣಪ್ಪ,ಕ.ರ.ವೆ ತಾಲೂಕು ಅದ್ಯಕ್ಷರು ಕೆಜಿ ವೆಂಕಟರವಣಪ್ಪ, ಜೆ ಎನ್ ಜಲಾರಿ,ಟೈಲರ್ ರಾಮಚಂದ್ರ,ವಕೀಲರು ಶ್ರೀನಿವಾಸ್, ಗ್ರಾಂ.ಪ ಉಪಾಧ್ಯಕ್ಷರು ಪೈಂಟರ್ ರಾಮು, ತಾಲೂಕು ಕಚೇರಿಯ ಸಿಬ್ಬಂದಿ ರ‍್ಗದವರು ಗ್ರಾಮ ಸಹಾಯಕರು ಶ್ರೀನಿವಾಸ್, ಅಪರೆಟರ್ ಜಗದೀಶ್,ನವೀನ್ ಕುಮಾರ್ ಹಾಜರಿದ್ದರು.