ಗಡಿಪಾರಿಗೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ವರದಿ

| Published : Apr 08 2024, 01:03 AM IST

ಗಡಿಪಾರಿಗೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ವರದಿ
Share this Article
  • FB
  • TW
  • Linkdin
  • Email

ಸಾರಾಂಶ

ಜಾನುವಾರುಗಳ ಕಾಲುಗಳನ್ನು ಕತ್ತರಿಸಿ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ಗಡಿಪಾರು ಮಾಡುವಂತೆ ನೀಡಿದ್ದ ರೈತ ಸಂಘದ ದೂರಿನ ಹಿನ್ನೆಲೆ ಹನೂರು ಪೊಲೀಸ್‌ ಠಾಣೆ ವತಿಯಿಂದ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ.

ಹನೂರು: ಜಾನುವಾರುಗಳ ಕಾಲುಗಳನ್ನು ಕತ್ತರಿಸಿ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ಗಡಿಪಾರು ಮಾಡುವಂತೆ ನೀಡಿದ್ದ ರೈತ ಸಂಘದ ದೂರಿನ ಹಿನ್ನೆಲೆ ಹನೂರು ಪೊಲೀಸ್‌ ಠಾಣೆ ವತಿಯಿಂದ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ.

ಹನೂರು ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ರಿಹಾನ ಬೇಗಂ ಅವರು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಹಾಗೂ ರೈತ ಮುಖಂಡರಿಗೆ ಮಾಹಿತಿ ನೀಡಿದ್ದಾರೆ. ಗುಂಡಿಮಾಳ ಗ್ರಾಮದ ರೈತರ 16 ಜಾನುವಾರುಗಳ ಕಾಲು ಕತ್ತರಿಸಿ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ಒಡೆಯರ್ ಪಾಳ್ಯ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ರೈತ ಸಂಘಟನೆ ಒತ್ತಾಯಿಸಿ ಅನ್ಯ ಧರ್ಮೀಯ ವ್ಯಕ್ತಿಯನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಸಮುದಾಯದ ಮುಖಂಡ ಗೆಲೆಟ್ ಹನೂರು ತಾಲೂಕು ತಹಸೀಲ್ದಾರ್ ಗುರುಪ್ರಸಾದ್ ಅವರಿಗೆ ಲಿಖಿತವಾಗಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಹನೂರು ಪೋಲೀಸರಿಗೆ ಕ್ರಮ ಕೈಗೊಳ್ಳುವಂತೆ ನೀಡಿದ ವರದಿಯನ್ನು ಆಧರಿಸಿ ಹನೂರು ಪೊಲೀಸರು ಎಸ್ಪಿಗೆ ಜಾನುವಾರುಗಳ ಕಾಲು ಕತ್ತರಿಸಿರುವ ವ್ಯಕ್ತಿಯನ್ನು ಗಡಿಪಾರು ಮಾಡುವಂತೆ ಸಂಘಟನೆಯ ಒತ್ತಾಯದ ಮೇರೆಗೆ ಜಿಲ್ಲಾಧಿಕಾರಿಗಳಿಗೆ ಕಳಿಸಿಕೊಡಲು ವರದಿ ಸಲ್ಲಿಸಿದ್ದಾರೆ. ಇದೇ ವೇಳೆ ಹನೂರು ತಾಲೂಕು ಘಟಕ ಅಧ್ಯಕ್ಷ ಚಂಗಡಿ ಕರಿಯಪ್ಪ, ಚೆನ್ನೂರು ಶಾಂತಕುಮಾರ್, ಉಮೇಶ್, ಚಿಕ್ಕ ರಾಜು, ಶ್ರೀನಿವಾಸ್ ರಾಜು, ಎಂ ಟಿ ದೊಡ್ಡಿ ಗ್ರಾಮದ ಹಿರಿಯ ಮುಖಂಡ ವೀರೆಗೌಡ್ರು ಇನ್ನಿತರರು ಇದ್ದರು ರೈತ ಮುಖಂಡರು ಇದ್ದರು.