ಸಾರಾಂಶ
ಗಾಣಾಳು ಸಮೀಪದ ಗ್ರಾಮದಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವನ್ನು ಹಿಡಿದು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಬಸವನ ಬೆಟ್ಟದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ನನ್ನ ಮೊಬೈಲ್ ನಂ. 8431500189 ಗೆ ತಿಳಿಸಿದರೆ ಹಾವುಗಳನ್ನು ಹಿಡಿದು ರಕ್ಷಣೆ ಮಾಡಲಾಗುವುದು.
ಕನ್ನಡಪ್ರಭ ವಾರ್ತೆ ಹಲಗೂರು
ಗಾಣಾಳು ಬೀರೋಟ ಸಮೀಪ ಬರುವ ಕದಲಯ್ಯನದೊಡ್ಡಿ ಗ್ರಾಮದ ಪ್ರಸಾದ್ ಎಂಬುವವರ ಮನೆ ಆವರಣದಲ್ಲಿ ಭಾನುವಾರ ಕಾಣಿಸಿಕೊಂಡ ಹೆಬ್ಬಾವವನ್ನು ಉರುಗ ತಜ್ಞ ಜಗದೀಶ್ ರಕ್ಷಿಸಿ ಬಸವನಬೆಟ್ಟದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.ಹೆಬ್ಬಾವು ಕಂಡ ತಕ್ಷಣ ಪ್ರಸಾದ್ ಮನೆಯವರು ತಕ್ಷಣ ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದ ಮೇರೆಗೆ ಅರಣ್ಯ ಇಲಾಖೆ ಅರಣ್ಯ ಗಸ್ತು ಪಾಲಕ ಶ್ರೇಯಸ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಉರುಗ ತಜ್ಞ ಜಗದೀಶ್ ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ದೊಡ್ಡಬಂಡೆ ಕೆಳಗೆ ಅವಿತು ಕುಳಿತಿದ್ದ 10 ಅಡಿ ಉದ್ದದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಆರ್‌ಎಫ್ ರವಿ ಬುರ್ಜಿ ಮಾರ್ಗದರ್ಶನದಲ್ಲಿ ಬಸವನ ಬೆಟ್ಟದ ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಉರುಗ ತಜ್ಞ ಜಗದೀಶ್ ಮಾತನಾಡಿ, ಹಲವು ವರ್ಷಗಳಿಂದ ಹಾವುಗಳನ್ನು ಹಿಡಿದು ರಕ್ಷಿಸುವ ಕೆಲಸ ಮಾಡುತ್ತಿದ್ದೇನೆ. ಹಲಗೂರು ವ್ಯಾಪ್ತಿ ಹಾವು ಕಂಡರೆ ನನಗೆ ವಿಷಯ ತಿಳಿಸುತ್ತಾರೆ. ನಾನು ತಕ್ಷಣ ಹೋಗಿ ಅದನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದೇನೆ ಎಂದರು.ಹಾವು ಹಿಡಿಯುವುದಕ್ಕೆ ನಾನು ಯಾವುದೇ ಸಂಭಾವನೆ ಪಡೆಯುವುದಿಲ್ಲ. ಇದುವರೆಗೂ ಸಾವಿರಾರು ಹಾವುಗಳನ್ನು ನೀಡಿದ್ದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದೇನೆ. ಯಾರೇ ಆದರೂ ಹಾವು ಕಂಡ ತಕ್ಷಣ ಅದನ್ನು ಸಾಯಿಸಬಾರದು. ನನಗೆ ವಿಷಯ ತಿಳಿಸಿದರೆ ತಕ್ಷಣ ಬಂದು ರಕ್ಷಿಸುತ್ತೇನೆ ಎಂದರು.
ಗಾಣಾಳು ಸಮೀಪದ ಗ್ರಾಮದಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವನ್ನು ಹಿಡಿದು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಬಸವನ ಬೆಟ್ಟದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ನನ್ನ ಮೊಬೈಲ್ ನಂ. 8431500189 ಗೆ ತಿಳಿಸಿದರೆ ಹಾವುಗಳನ್ನು ಹಿಡಿದು ರಕ್ಷಿಸುವುದಾಗಿ ಹೇಳಿದರು.ಈ ವೇಳೆ ಅರಣ್ಯ ಇಲಾಖೆಯ ಶ್ರೇಯಸ್ ಮತ್ತು ಸಿಬ್ಬಂದಿ, ಮಂಜುನಾಥ್, ಶಿವು, ನಾಗೇಂದ್ರ ಹಾಗೂ ಗ್ರಾಮಸ್ಥರು ಇದ್ದರು.