ತುರ್ವಿಹಾಳದಲ್ಲಿ ಗಣರಾಜ್ಯೋತ್ಸವ ಆಚರಣೆ

| Published : Jan 27 2024, 01:19 AM IST

ಸಾರಾಂಶ

ತುರ್ವಿಹಾಳ ಪಟ್ಟಣ ಪಂಚಾಯ್ತಿಯಲ್ಲಿ 75 ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಕನ್ನಡಪ್ರಭವಾರ್ತೆ ತುರ್ವಿಹಾಳ

ಇಲ್ಲಿನ ಪಪಂ ಹಾಗೂ ವಿವಿಧ ಶಾಲಾ ಕಾಲೇಜುಗಳಲ್ಲಿ 75ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಪಪಂನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಾಧಿಕಾರಿ ಪ್ರಸನ್ನ ಎ.ಕಲ್ಯಾಣ ಶೆಟ್ಟಿ, 1950ರ ಜನವರಿ 26ರಂದು ಭಾರತೀಯ ಸಂವಿಧಾನವನ್ನು ಔಪಚಾರಿಕವಾಗಿ ಅಂಗೀಕರಿಸಲಾಯಿತು. ಹೀಗಾಗಿ ಅಂದಿನಿಂದ ಜ.26ನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ನಂತರ ಜ್ಞಾನಗಂಗೋತ್ರಿ ಪೂರ್ವ-ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪರಿಶ್ರಮ ಕೋಚಿಂಗ್ ಸೆಂಟರ್ ತುರ್ವಿಹಾಳನಲ್ಲಿ ಶರಣಪ್ಪ ಹೊಸಗೌಡರ ಮಾತನಾಡಿದರು.

ಭಾರತವು ಸಮಾಜವಾದ ತತ್ವ. ಪ್ರಜಾಪ್ರಭುತ್ವ, ಗಣರಾಜ್ಯದ ಮತ್ತು ಜಾತ್ಯತೀತ ತತ್ವದ ಸಾರ್ವಭೌಮತ್ವನ್ನು ಆಳವಡಿಸಿ ಕೊಂಡಿದ್ದು, ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಅನೇಕ ಭಾಷೆಗಳನ್ನು ಮಾತನಾಡುವ ಜನ ಹಾಗೂ ವಿವಿಧ ಸಂಸ್ಕೃತಿ ಹಿನ್ನೆಲೆಯನ್ನು ಹೊಂದಿರುವುದು ವೈಶಿಷ್ಟಮಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಲ್ಲನಗೌಡ ದೇವರಮನಿ, ಶಾಮಿದ್ ಸಾಬ್ ಜೌದ್ರಿ, ಮೌಲಪ್ಪಯ್ಯ ಗುತ್ತೇದಾರ, ಉಮರ್ ಸಾಬ್, ಶೇಷಗಿರರಾವ್ ಕುಲಕರ್ಣಿ, ಬಾಪುಗೌಡ ದೇವರಮನಿ ಅಬುತರಾಬ್ ಖಾಜಿ, ಸಿರಾಜ್ ಪಾಷಾ ದಳಪತಿ, ಮಹಾಂತೇಶ ಸಜ್ಜನ, ರಾಮಣ್ಣ ಉಪ್ಪಾರ್, ಸೋಮನಾಥ ಮಟ್ಟೂರ, ಪಟ್ಟಣ ಪಂಚಾಯಿತಿ ಸದಸ್ಯರು, ಉರಿನ ಮುಖಂಡರು, ಯುವಕರು ಇದ್ದರು.