ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ವಿಶ್ವದಲ್ಲಿಯೇ ವಿವಿಧತೆಯಲ್ಲಿ ಏಕತೆಯಿರುವ ಏಕೈಕ ದೇಶ ನಮ್ಮದು, ಸ್ವಾತಂತ್ರ್ಯನಂತರ ಅತೀ ಉತ್ತಮ ಸಂವಿಧಾನವನ್ನು ಡಾ.ಬಾಬಾ ಸಾಹೇಬ್ ನಮಗೆ ನೀಡಿದ್ದಾರೆ. ಸಮಾಜದ ಕಟ್ಟಕಡೆ ಮನುಷ್ಯನಿಗೂ ತಲುಪುವ ಸಂವಿಧಾನ ನಮ್ಮದು, ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮದು ಎಂದು ಕೆಪಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಾಬು ವಾಲಿ ಹೇಳಿದರು.ನಗರದ ಕೆಪಿ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಧ್ಜಜಾರೋಹಣ ನೆರವೆರಿಸಿ ಮಾತನಾಡಿದ ಅವರು, 75ನೇ ಗಣರಾಜ್ಯೋತ್ಸವದಲ್ಲಿ ಎಲ್ಲಾ ಕವಾಯಿತುಗಳ ನೇತೃತ್ವವನ್ನು ಮಹಿಳೆಯರು ವಹಿಸಿದ್ದಾರೆ. ಪ್ರಧಾನಿ ಮೋದಿ ಅವರು ನಾರಿ ಶಕ್ತಿಗೆ ಹೆಚ್ಚು ಆದ್ಯತೆ ನೀಡಿತ್ತಿದ್ದಾರೆ. ಈ ಸಂಧರ್ಭದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು.
ಧ್ವಜಾರೋಹಣದಲ್ಲಿ ಸಂಸ್ಥೆ ಉಪಾಧ್ಯಕ್ಷ ಮಲ್ಲಯ್ಯ ಸ್ವಾಮಿ, ಸದಸ್ಯರಾದ ಚಂದ್ರಶೇಖರ ಪಾಟೀಲ, ಮುಖ್ಯಗುರು ವಿಜಯಕುಮಾರ ಪಾಟೀಲ ಯರನಳ್ಳಿ ಸೇರಿ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ನಡೆಸಿದ ಲೇಜಿಮ್ ಎಲ್ಲರ ಗಮನ ಸೆಳೆಯಿತು.ಪಶು ವಿವಿಯಲ್ಲಿ ಗಣರಾಜ್ಯೋತ್ಸವ:
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನಂದಿನಗರ ಆವರಣದಲ್ಲಿ 75ನೇ ಭಾರತೀಯ ಗಣರಾಜ್ಯೋತ್ಸವ ಆಚರಿಸಲಾಯಿತು.ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಧ್ವಜಾರೋಹಣ ನೆರವೇರಿಸಿ, ವಿಶ್ವವಿದ್ಯಾಲಯದ ಮುಖ್ಯ ಗುರಿ ಪಶುವೈದ್ಯಕೀಯ, ಹೈನುಗಾರಿಕೆ, ಮೀನುಗಾರಿಕೆ ಮತ್ತು ಸಂಬಂಧಿಸಿದ ಕ್ಷೇತ್ರಗಳಲ್ಲಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ನಾಯಕತ್ವ ಒದಗಿಸಿ, ಸಾಮಾಜಿಕ ಮತ್ತು ತಾಂತ್ರಕತೆಗನುಗುಣವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿದೆ ಎಂದರು.
ವಿಶ್ವವಿದ್ಯಾಲಯವು ಉತ್ತಮ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಗುರುತಿಸಿ ಸನ್ಮಾನಿಸಿದೆ ಎಂದು ತಿಳಿಸಿದರು. ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕ್ರಿಕೆಟ್ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ನಾಗಮಾರಪಳ್ಳಿ ಆಸ್ಪತ್ರೆಯಲ್ಲಿ ಧ್ವಜಾರೋಹಣ:
ನಗರದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿ ಶುಕ್ರವಾರ ಸಂಭ್ರಮದೊಂದಿಗೆ ಗಣರಾಜ್ಯೋತ್ಸವ ನಡೆಯಿತು. ಅಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಧ್ವಜಾರೋಹಣ ನೆರವೇರಿಸಿದರು. ಸಂವಿಧಾನ ಜಾರಿಗೆ ಬಂದ ಶುಭ ಘಳಿಗೆ ಪ್ರತಿಯೊಬ್ಬರು ಸಂಭ್ರಮಿಸಬೇಕು. ಸಂವಿಧಾನ ಈ ದೇಶದ ಆತ್ಮ. ದೇಶಕ್ಕೆ ಅದ್ಭುತ ಸಂವಿಧಾನ ನೀಡಿದ ಶ್ರೇಯಸ್ಸು ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಆಸ್ಪತ್ರೆ ನಿರ್ದೇಶಕ, ಯುವ ಮುಖಂಡ ತರುಣ್ ಸೂರ್ಯಕಾಂತ ನಾಗಮಾರಪಳ್ಳಿ, ಡಾ. ವೈಜನಾಥ ತೂಗಾವೆ, ಸಿಇಒ ಕೃಷ್ಣಾರೆಡ್ಡಿ, ರಾಮಶೆಟ್ಟಿ ಬಿರಾದಾರ್, ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.ಬೀದರ್ ತಾಪಂನಲ್ಲಿ ಎಸಿ ಧ್ವಜಾರೋಹಣ:
ನಗರದ ತಾಪಂ ಕಚೇರಿ ಆವರಣದಲ್ಲಿ ಸಹಾಯಕ ಆಯುಕ್ತ ಲವೀಶ್ ಓರ್ಡಿಯಾ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು ಹಾಗೂ ತ್ರಿವರ್ಣ ಧ್ವಜ ಗೌರವ ವಂದನೆ ಸಲ್ಲಿಸಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಾಟೀಲ್, ಪಂಚಾಯಿತಿ ರಾಜ್ ವಿಭಾಗದ ಸಹಾಯಕ ನಿರ್ದೇಶಕ ಸಂಜಯಕುಮಾರ, ತಾಪಂ ವ್ಯವಸ್ಥಾಪಕ ಮುನಫ್ ಪಟೇಲ್, ಜಗನ್ನಾಥ್ ಸತ್ಯಜೀತ ನೀಡೋದಿಕರ, ಶ್ರೀನಿವಾಸ ಟಿ, ಯೋಗಿನಿ ಲದ್ದೆ, ಪ್ರಣಿತಾ, ಅರ್ಚನಾ ಪಾಟೀಲ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಗಣರಾಜ್ಯೋತ್ಸವ:
ಇಲ್ಲಿನ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಶುಕ್ರವಾರ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನ್ಪೂರೆ ಅವರು ಮಹಾತ್ಮಾ ಗಾಂಧೀಜಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಭಾಷಣ, ನೃತ್ಯ, ಗಾಯನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗ್ಲೋಬಲ್ ಸೈನಿಕ ಅಕಾಡೆಮಿ ವಿದ್ಯಾರ್ಥಿಗಳಿಂದ ಅತ್ಯದ್ಬುತ ಪಥಸಂಚಲನ ನಡೆಯಿತು. ಇದರಲ್ಲಿ ಶಾಲಾ ಎನ್‌ಸಿಸಿ ಕ್ಯಾಡೆಟ್ಸ್ ಮತ್ತು ಇತರೆ ವಿದ್ಯಾರ್ಥಿಗಳು ಸೇರಿ 250 ಮಕ್ಕಳು ಪಾಲ್ಗೊಂಡಿದ್ದರು.
ಶಾಲಾ ನಿರ್ದೇಶಕರಾದ ಕಮಲ ಕಿಶೋರ್ ಅಟ್ಟಲ್, ಡಾ.ಶರಣ್ ಬುಳ್ಳಾ ಮುಖ್ಯ ಶಿಕ್ಷಕಿ ಜ್ಯೋತಿ ರಾಗ, ಸುಬೇದಾರ್ ಮಡೆಪ್ಪ, ಪಿಆರ್‌ಒ ಕಾರಂಜಿ ಸ್ವಾಮಿ, ಪಾಲಕರು, ಶಿಕ್ಷಕರು ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಜಗತ್ತಿನ ಅತೀ ದೊಡ್ಡ ಲಿಖಿತ ಸಂವಿಧಾನ ನಮ್ಮದು:
ಭಾರತ ಸಂವಿಧಾನವು ಅತೀ ದೊಡ್ಡ ಲಿಖಿತ ಸಂವಿಧಾನವಾಗಿದ್ದು, ನಮ್ಮ ಸಂವಿಧಾನವು ಹಸ್ತಾಕ್ಷರದಲ್ಲಿ ರಚಿಸಿದ ವಿಶ್ವದ ಮೊದಲ ಸಂವಿಧಾನವಾಗಿದೆ. ಸಂವಿಧಾನಕ್ಕೆ ಒಂದು ವಿಶಾಲವಾದ ರೂಪು ಕೊಟ್ಟು, ರಚಿಸಿದವರಲ್ಲಿ ಅಂಬೇಡ್ಕರ್ ಪಾತ್ರ ಹಿರಿದಾಗಿದೆ. ಅದಕ್ಕೆ ಅವರನ್ನು ಸಂವಿಧಾನ ಪಿತಾಮಹ ಎಂದು ಕರೆಯುತ್ತಾರೆ ಎಂದು ಬಸವಕಲ್ಯಾಣ ಎಜ್ಯುಕೇಶನಲ್ ಟ್ರಸ್ಟ್ ಇಂಜಿನೀಯರಿಂಗ್ ಕಾಲೇಜಿನ ಅಧ್ಯಕ್ಷ ದೀಲಿಪಕುಮಾರ ಎಸ್. ತಾಳಂಪಳ್ಳಿ ನುಡಿದರು.ಸಂಸ್ಥೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಮ್ಮ ಸಂವಿಧಾನ ರಕ್ಷಣೆ ನಮ್ಮೆಲರ ಹೊಣೆ ಎಂದು ತಿಳಿಸಿ ಸರ್ವರಿಗೂ ಶುಭಾಶಯ ಕೋರಿದರು.
ಪ್ರಾಚಾರ್ಯ ಡಾ. ಅಶೋಕ ಕುಮಾರ ವಣಗೆರಿ, ಆರ್.ಎಸ್. ಪಾಟೀಲ ಹಾಗೂ ಮನೋಜಕುಮಾರ ಕೆರಳ್ಳಿ, ಇಂಜಿನೀಯರಿಂಗ್ ಕಾಲೇಜಿನ ಉಪಪ್ರಾಚಾರ್ಯ ಡಾ.ಅರುಣಕುಮಾರ ಎಲಾಲ, ಬಸವಕಲ್ಯಾಣ ಪಾಲಿಟೇಕ್ನಿಕ್ ಕಾಲೇಜಿನ ಪ್ರಾಚಾರ್ಯ ನೀಲಕಂಠ ಕೋಡ್ಲೆ ಸೇರಿ ಸಂಸ್ಥೆ ಇನ್ನಿತರ ಸಿಬ್ಬಂದಿ ಇದ್ದರು.ವಾಣಿಜ್ಯ, ಕೈಗಾರಿಕಾ ಸಂಸ್ಥೆಯಲ್ಲಿ ಧ್ವಜಾರೋಹಣ:
ನಗರದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಶುಕ್ರವಾರ ಸಂಸ್ಥೆ ಕಾರ್ಯದರ್ಶಿ ಡಾ.ವೀರೇಂದ್ರ ಶಾಸ್ತ್ರಿ ನೆರವೇರಿಸಿದರು. ಜಂಟಿ ಕಾರ್ಯದರ್ಶಿ ರಾಜಶೆಖರ ಮಿಟಕಾರಿ, ಆಡಳಿತ ಮಂಡಳಿ ಸದಸ್ಯ ವೀರಕುಮಾರ ಮಜಗೆ, ಆಡಳಿತಾಧಿಕಾರಿ ಪ್ರೊ. ಬಸವರಾಜ ಸ್ವಾಮಿ ಹೆಡಗಾಪೂರಕರ ಹಾಜರಿದ್ದರು.ರಾಜೀವ ಗಾಂಧಿ ಯುವಕ ಸಂಘ:
ರಾಜೀವ ಗಾಂಧಿ ಯುವಕ ಸಂಘದಿಂದ ನಗರದ ಲೇಬರ್ ಕಾಲೋನಿಯ ರಾಜೀವ ಗಾಂಧಿ ವೃತ್ತದ ಹತ್ತಿರ ಸಂಘದ ಸಂಸ್ಥಾಪಕರಾದ ಶ್ರೀಧರ ಬಾಂಗಲೆ ಧ್ವಜಾರೋಹಣ ಮಾಡುವುದರ ಮೂಲಕ 75ನೇ ಗಣರಾಜ್ಯೋತ್ಸವ ಆಚರಿಸಿದರು. ಈ ವೇಳೆ ಬಡಾವಣೆ ಹಿರಿಯರಾದ ಕಂಟೆಪ್ಪಾ, ಮಾರುತಿ, ಮೋಹನ, ಸಂತೋಷ, ರಾಜಕುಮಾರ, ರಮೇಶ, ಶಂಕರ, ಶ್ರೀಮಂತ, ಶ್ರೀಶಾಂತ, ಸಾಮುವೇಲ್, ಫಿಲಿಪ್, ಬಸವರಾಜ, ಸುರೇಶಕುಮಾರ ಹಾಗೂ ಸಂಘದ ಪದಾಧಿಕಾರಿಗಳಾದ ಡಿಸೋಜ್, ಶಲಹಾನ್, ಸಂಜು, ಭೀಮಣ್ಣಾ, ಮೇಶಕ್, ಶಿವರಾಜ, ಅನೀಲ ಹಾಗೂ ಇನ್ನಿತರರು ಇದ್ದರು.