ಲಕ್ಕುಂಡಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ

| Published : Jan 28 2024, 01:21 AM IST

ಸಾರಾಂಶ

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿನ ವಿವಿಧ ಶಾಲೆ, ಕಾಲೇಜ್, ಸಂಘ ಸಂಸ್ಥೆಗಳಲ್ಲಿ 75ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿನ ವಿವಿಧ ಶಾಲೆ, ಕಾಲೇಜ್, ಸಂಘ ಸಂಸ್ಥೆಗಳಲ್ಲಿ 75ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಗ್ರಾಪಂ ಅಧ್ಯಕ್ಷ ಕೆ.ಎಸ್.ಪೂಜಾರ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಪ್ರಾಥಮಿಕ, ಪ್ರೌಢಶಾಲೆ ಹಾಗೂ 14 ಅಂಗನವಾಡಿ ಕೇಂದ್ರಗಳಿಗೆ ವಿಶೇಷವಾಗಿ ಸಂವಿಧಾನ ಪುಸ್ತಕ, ಸಂವಿಧಾನ ಪೀಠಿಕೆಯ ಪೋಟೋ ಮತ್ತು ಆಲ್.ಇನ್.ಒನ್ ಪುಸ್ತಕವನ್ನು ಕಾಣಿಕೆಯಾಗಿ ನೀಡಲಾಯಿತು. ಮಕ್ಕಳು ಸಂವಿಧಾನ ಪೀಠಿಕೆಯನ್ನು ಓದಿ ಪ್ರಮಾಣ ಮಾಡಲಾಯಿತು. ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಪಿಡಿಒ ರಾಜಕುಮಾರ ಭಜಂತ್ರಿ, ಗ್ರಾಪಂ ಸದಸ್ಯರು ಹಾಜರಿದ್ದರು. ಬಾಲಕಿಯರ ಸರಕಾರಿ ಪ್ರೌಢಶಾಲೆಯ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಮಲ್ಲಪ್ಪ ದಂಡಿನ ನೆರವೇರಿಸಿದರು. ಮುಖ್ಯೋಪಾಧ್ಯಾಯ ವೈ.ಎಸ್. ತೆಕ್ಕಲಕೋಟ ಸೇರಿದಂತೆ ಗ್ರಾ. ಪಂ. ಸದಸ್ಯರು ಹಾಜರಿದ್ದರು. ಎಂ.ಕೆ.ಬಿ.ಎಸ್.ಶಾಲೆಯ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷೆ ನಾಗಮ್ಮ ಹಾಲಿನವರ ನೆರವೇರಿಸಿದರರು. ಗ್ರಾ.ಪಂ. ಅಧ್ಯಕ್ಷ ಕೆ.ಎಸ್.ಪೂಜಾರ, ಪ್ರಧಾನ ಗುರು ಸುರೇಶ ಹುಬ್ಬಳ್ಳಿ ಇತರರು ಇದ್ದರು.ಕೆ.ಜಿ.ಎಸ್. ಶಾಲೆಯ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ ಖಂಡು ನೆರವೇರಿಸಿದರು. ಮುಖ್ಯೋಪಾಧ್ಯಾಯ ಎಸ್.ಎಸ್. ಕಂಬಳಿ ಇತರರು ಹಾಜರಿದ್ದರು. ಎಲ್.ಪಿ.ಎಸ್.ಶಾಲೆಯ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಮರಿಯಪ್ಪ ವಡ್ಡರ ನೆರವೇರಿಸಿದರು. ಪ್ರಧಾನ ಗುರುಮಾತೆ ಎಸ್.ಜಿ. ಕಂಠಿ ಇತರರು ಇದ್ದರು.

ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಧ್ವಜಾರೋಹಣವನ್ನು ಸ್ಥಾನಿಕ ಕಮಿಟಿಯ ಕಾರ್ಯದರ್ಶಿ ರಾಮಣ್ಣ ಅಂಬಕ್ಕಿ ನೆರವೇರಿಸಿದರು. ಮುಖ್ಯೋಪಾಧ್ಯಾಯ ಎಂ.ಎಸ್. ಬೇಲೇರಿ, ಶಿಕ್ಷಕ ವೃಂದ ಹಾಜರಿದ್ದರು. ಮಾರುತಿ ನಗರದ ಡಿ.ಪಿ.ಇ.ಪಿ ಹಿರಿಯ ಪ್ರಾಥಮಿಕ ಶಾಲೆಯ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಾಂತೇಶ ಗುರಿಕಾರ ನೆರವೇರಿಸಿದರು. ಮುಖ್ಯೊಪಾಧ್ಯಾಯ ಕೆ.ಬಿ.ಕೊಣ್ಣೂರು. ಗ್ರಾ. ಪಂ. ಸದಸ್ಯರು ಇತರರು ಹಾಜರಿದ್ದರು. ಸರಕಾರಿ ಪ್ರಾಥಮಿಕ ಉರ್ದು ಶಾಲೆಯ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಮ್ಮದರಫೀಕ ಹುಬ್ಬಳ್ಳಿ ನೆರವೇರಿಸಿದರು. ಪ್ರಧಾನ ಗುರುಮಾತೆ ಆಪ್ರಿನಾಬಾನು ನರೆಗಲ್ ಇತರರು ಹಾಜರಿದ್ದರು. ಜನತಾ ವಿದ್ಯಾವರ್ಧಕ ಸಂಸ್ಥೆಯ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಈಶ್ವರಪ್ಪ ಕುಂಬಾರ ನೆರವೇರಿಸಿದರು. ಪಿ.ಯು. ಕಾಲೇಜ್‌ನ ಪ್ರಾಚಾರ್ಯ ಬಿ.ವಿ.ಪಾಟೀಲ, ಪ್ರೌಢಶಾಲೆಯ ಹಿರಿಯ ಶಿಕ್ಷಕ ಎ.ಎನ್. ಪೂಜಾರ ಇತರರು ಇದ್ದರು. ರಾಣಿ ಕಿತ್ತೂರ ಚನ್ನಮ್ಮ ವಸತಿ ಶಾಲೆಯ ಧ್ವಜಾರೋಹಣವನ್ನು ಪ್ರಾಚಾರ್ಯ ರವಿ ಉದ್ದಣ್ಣವರ ನೆರವೇರಿಸಿದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಂ 2 ರ ಧ್ವಜಾರೋಹಣವನ್ನು ರುದ್ರಪ್ಪ ಮುಸ್ಕಿನಭಾವಿ ನೆರವೇರಿಸಿದರು. ಉಪಾಧ್ಯಕ್ಷ ರುದ್ರಪ್ಪ ವಡ್ಡರ, ನಿರ್ದೆಶಕ ಗವಿಶಿದ್ದಪ್ಪ ರೇವಡಿ, ಕಲ್ಲಪ್ಪ ಬೆಟಗೇರಿ, ಮಲ್ಲನಗೌಡ ಪಾಟೀಲ, ಶಂಕ್ರಪ್ಪ ಕುಂಬಾರ, ಅಂದಾನಯ್ಯ ಪತ್ರಿಮಠ, ಅನ್ನಪೂರ್ಣ ಹಡಗಲಿ, ನೀಲವ್ವ ರವದಿ, ಸಕ್ರಪ್ಪ ರಾಮತಾಳ, ಮಂಜುನಾಥ ಕರಿಯಲ್ಲಪ್ಪನವರ, ಬಸವರಾಜ ವಸ್ತ್ರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಬೆಣಕಲ್ಲ, ಕಿರಣ ಬಡಿಗೇರ ಎಸ್ ಮಂಜುನಾಥ ಹಾಜರಿದ್ದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಂ 3 ರ ಧ್ವಜಾರೋಹಣವನ್ನು ಹಿರಿಯ ನಿರ್ದೆಶಕ ರಾಚಪ್ಪ ನಾಲ್ವಡದ, ಚಂದ್ರಗೌಡ ಪಾಟೀಲ ನೆರವೇರಿಸಿದರು. ಸಂಘದ ಅಧ್ಯಕ್ಷ ಕಳಕೇಶ ಟೆಂಗಿನಕಾಯಿ, ಉಪಾಧ್ಯಕ್ಷ ಅಂಕಲೆಪ್ಪ ಬಾಳಿಕಟ್ಟಿ. ಮುಖ್ಯ ಕಾರ್ಯನಿವಾಹಕ ಅಧಿಕಾರಿ ಷಣ್ಮುಖಪ್ಪ ಮದ್ನೂರು ಸೇರಿದಂತೆ ಸರ್ವ ನಿರ್ದೇಶಕರು ಹಾಜರಿದ್ದರು. ತಾಡಪತ್ರಿ ಮುಸ್ಲಿಂ ಜಮಾತ್‌ದ ಧ್ವಜಾರೋಹಣವನ್ನು ಮರ್ದಾನಸಾಬ ದೊಡ್ಡಮನಿ ನೆರವೇರಿಸಿದರು. ಜಮಾತದ ಸರ್ವ ಹಿರಿಯರು ಪಾಲ್ಗೊಂಡಿದ್ದರು.