ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಭಾರತದ ದೇಶವು ಸಾರ್ವಭೌಮತೆ, ಜಾತ್ಯತೀತತೆ ಮತ್ತು ಪ್ರಜಾಸತ್ತಾತ್ಮಕತೆಯ ಭದ್ರ ತಳಹದಿಗಳ ಮೇಲೆ ನಿರ್ಮಿತವಾದ ಬಲಿಷ್ಠ ಗಣರಾಜ್ಯವಾಗಿದೆ ಎಂದು ಕುರಿ ಮತ್ತು ಉಣ್ಣಿ ಮಹಾಮಂಡಳದ ಉಪಾಧ್ಯಕ್ಷ ಕಾಶಿನಾಥ ಹುಡೇದ ಹೇಳಿದರು.ಪಟ್ಟಣದ ರಾಮಕೃಷ್ಣ ಪರಮಹಂಸ ಶಿಕ್ಷಣ ಸಂಸ್ಥೆ ಸಿರಿಗನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಸಿದ್ದು ಹೂಗಾರ, ಹೊಳಬಸಪ್ಪ ಹೂಗಾರ, ಶಕುಂತಲಾ ಹೆಬ್ಬಳ್ಳಿಮಠ ಹಾಗೂ ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು.
ಎಪಿಎಂಸಿ:ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ನೂತನ ಅಧ್ಯಕ್ಷ ಸಂಗಪ್ಪ ಇಮ್ಮನ್ನವರ ನೇರವೇರಿಸಿದರು. ಉಪಾಧ್ಯಕ್ಷ ಭೀಮಶಿ ಮೆಟಗುಡ್ಡ, ಕಾರ್ಯದರ್ಶಿ ರವಿ ರಾಠೋಡ, ವ್ಯಾಪಾರಸ್ಥರಾದ ಲೋಕಣ್ಣ ಕತ್ತಿ, ಭೀಮಶಿ ಅವರಾದಿ, ಕೆ.ಎಲ್.ಅತ್ತಾರ, ಶಂಕರ ತೇಲಿ, ಕುತುಬುದ್ಧೀನ ಭಾಗವಾನ ಇತರರಿದ್ದರು.
ಪಪಂ ಕಾರ್ಯಾಲಯ:ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ಧ್ವಜಾರೋಹಣ ನೆರವೇರಿಸಿದರು. ಗೋವಿಂದ ಕೌಲಗಿ, ಮುತ್ತಪ್ಪ ಗಡ್ಡದವರ, ನಾಗರಾಜ ಜೀರಗಾಳ, ಆಕಾಶ ರಾಯಣ್ಣವರ, ವ್ಹಿ.ವ್ಹಿ.ಪಾಟೀಲ, ರಾಘು ಮುರಗೋಡ, ನಿಂಗಪ್ಪ ರೊಡ್ಡಪ್ಪನವರ, ವಿಠ್ಠಲ ಗಸ್ತಿ, ಮಲ್ಲಪ್ಪ ರೊಡ್ಡಪ್ಪನವರ, ಅಶೋಕ ಕಾಳಮ್ಮನವರ ಸಿಬ್ಬಂದಿ ಇದ್ದರು.
ನಾಡ ಕಾರ್ಯಾಲಯ:ಪಟ್ಟಣದ ನಾಡ ಕಾರ್ಯಾಲಯ ಆವರಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಉಪ ತಹಸೀಲ್ದಾರ್ ಬಿ.ಎಸ್.ರಂಗಣ್ಣವರ, ಕಂದಾಯ ನಿರೀಕ್ಷಕ ಸತೀಶ ಬೇವೂರ, ಪ್ರಕಾಶ ದರೆಕಾಣೆ, ಅರುಣ ಹೊಸಮನಿ, ನಾಡ ಕಚೇರಿ ಸಿಬ್ಬಂದಿ, ಗ್ರಾಮ ಸಹಾಯಕರು ಇದ್ದರು.
ಪ್ರಾಥಮಿಕ ಆರೋಗ್ಯ ಕೇಂದ್ರ:ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ಡಾ.ಸುನೀಲ ಬೆನ್ನೂರ ಧ್ವಜಾರೋಹಣ ನೆರವೇರಿಸಿದರು. ಡಾ.ವಿನಯ ಕುಲಕರ್ಣಿ, ಆರೋಗ್ಯ ರಕ್ಷಾ ಸಮೀತಿ ಸದಸ್ಯ ಕುತುಬುದ್ಧೀನ ಭಾಗವಾನ, ಆಶಾ ಅರಕೇರಿ, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.
ಶಂಭುಲಿಂಗ ಮಠ:ಪಟ್ಟಣದ ಶಂಭುಲಿಂಗ ಮಠದ ಆವರಣದಲ್ಲಿ ಮಠದ ಆಡಳಿತ ಮಂಡಳಿ, ಹಿರಿಯ ನಾಗರಿಕರ ಸೇವಾ ಸಂಘ, ಸರ್ಕಾರಿ ಅರೆ ಸರ್ಕಾರಿ ನಿವೃತ್ತ ಸಂಘ ಆಶ್ರಯದಲ್ಲಿ ನಿವೃತ್ತ ಹಿರಿಯ ಶಿಕ್ಷಕ ಡಿ.ಎಂ.ತುಬಾಕಿ ಧ್ವಜಾರೋಹಣ ನೆರವೇರಿಸಿದರು. ಬಸನಗೌಡ ಪಾಟೀಲ, ಬಸವರಾಜ ಉದಪುಡಿ, ಸದಾಶಿವ ಹಗ್ಗದ, ಮಹೇಶ ಮಳಲಿ, ಹಣಮಂತಗೌಡ ಪಾಟೀಲ, ನಿಶಿ ಚಂದ್ರಕಾಂತ ರಂಗಣ್ಣವರ ಇದ್ದರು.
ಜನಶಕ್ತಿ ಸೌಹಾರ್ದ ಬ್ಯಾಂಕ್:ಪಟ್ಟಣದ ಜನಶಕ್ತಿ ಸೌಹಾರ್ದ ಪತ್ತಿನ ಸಹಕಾರಿಯಲ್ಲಿ ಪಿಕೆಪಿಎಸ್ ಸದಸ್ಯ ಚನ್ನಯ್ಯ ಗಣಾಚಾರಿ ಧ್ವಜಾರೋಹಣ ನೇರವೇರಿಸಿದರು. ಹಸನ ಅಳ್ಳಿಗಿಡದ, ಮೈಬೂಬ ದಪ್ಪೇದಾರ, ನಿರ್ದೇಶಕರಾದ ವಿಜಯಾ ಚಿನಗುಂಡಿ, ಮಂಗಳಾ ಸೋಮಾಪುರ, ಜಾನವ್ಹಿ ಬಬಲಾದಿ, ಕಾರ್ಯನಿರ್ವಾಹಕ ಮಹಾಂತೇಶ ಕುಳ್ಳೊಳ್ಳಿ, ಸಿಬ್ಬಂದಿ ವರ್ಗ ಇದ್ದರು.
ಬಸವೇಶ್ವರ ವೃತ್ತ:ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಟ್ಯಾಕ್ಸಿ ಚಾಲಕರು ಮತ್ತು ಮಾಲಕರ ಸಂಘದಿಂದ ಪಿಎಸ್‌ಐ ಕಾಡಪ್ಪ ಜಕ್ಕನ್ನವರ ಧ್ವಜಾರೊಹಣ ನೇರವೇರಿಸಿದರು. ಭೀಮಶಿ ನಾವಲಗಿ, ರವಿ ಸೀಮಿಕೇರಿ, ಯಲ್ಲಪ್ಪ ಬೆಣಗಿ, ನಿಂಗಪ್ಪ, ದುರ್ಗಪ್ಪ ಗಸ್ತಿ, ಶ್ರೀನಿವಾಸ ತಳವಾರ, ಅರುಣ ಮುದಕವಿ, ವಿನಾಯಕ ಉದಪುಡಿ, ರವಿ ಭೋವಿ, ಕುಮಾರ ಲಮಾಣಿ, ಮಂಜು ಗಣಾಚಾರಿ, ಪ್ರಕಾಶ ಕಾಂಬಳೆ ಇದ್ದರು.
ವಿದ್ಯಾಚೇತನ ಶಿಕ್ಷಣ ಸಂಸ್ಥೆ:ಪಟ್ಟಣದ ವಿದ್ಯಾಚೇತನ ಶಿಕ್ಷಣ ಸಂಸ್ಥೆಯಲ್ಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ಅಜೇತ ಪನ್ನಾಳೆ ಧ್ವಜಾರೋಹಣ ನೇರವೇರಿಸಿದರು. ಈ ವೇಳೆ ನ್ಯಾಯವಾದಿ ಹಣಮಂತ ಪೂಜಾರ, ಪತ್ರಕರ್ತ ಹಸನಡೋಂಗ್ರಿ ಮಹಾಲಿಂಗಪೂರ, ಪೀರಸಾಬ ನಧಾಪ, ಆಯೀಷ ರಾಮದುರ್ಗ ಮೈಬೂಬ ರಾಮದುರ್ಗ, ಮುಗು ವಿವೇಕ ಮರಾಠಿ ಹಾಗೂ ಸಿಬ್ಬಂದಿ ವರ್ಗ ಇದ್ದರು.