ಸಾರಾಂಶ
ಮುದಗಲ್ ಪುರಸಭೆಯಲ್ಲಿ ಮುಖ್ಯಾಧಿಕಾರಿ ನಬೀ ಎಂ. ಕಂದಗಲ್ಲ ಹಾಗೂ ಉಪ ತಹಶೀಲ್ದಾರ್ ಕಾರ್ಯಾಲಯದಲ್ಲಿ ಉಪ ತಹಶೀಲ್ದಾರ್ ತುಳಜಾರಾಮ ಸಿಂಗ್ ಧ್ವಜಾರೋಹಣ ನೆರವೇರಿಸಿದರು.
ಕನ್ನಡಪ್ರಭವಾರ್ತೆ ಮುದಗಲ್
ಐತಿಹಾಸಿಕ ಮುದಗಲ್ ಪಟ್ಟಣದ ಪುರಸಭೆ, ನಾಡ ತಹಸೀಲ್ದಾರ ಮತ್ತು ಪೊಲೀಸ್ ಠಾಣೆ ಸೇರಿ ವಿವಿಧ ಶಾಲಾ ಕಾಲೇಜುಗಳಲ್ಲಿ, ಬ್ಯಾಂಕುಗಳಲ್ಲಿ ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಿಸಲಾಯಿತು.ಪಟ್ಟಣದಲ್ಲಿ ಪೊಲೀಸ್ ಠಾಣೆ ಮತ್ತು ಪುರಸಭೆ ಜಗಮಗಿಸುವ ದೀಪಾಲಂಕಾರದಿಂದ ಕಂಗೊಳಿಸಿದರೆ, ಶಾಲಾ ಕಾಲೇಜುಗಳಲ್ಲಿ ವಿವಿಧ ಬಗೆಯ ರಂಗೋಲಿ, ವೈಜ್ಞಾನಿಕ ಛಾಯಾ ಚಿತ್ರಗಳೊಂದಿಗೆ ಕಂಗೊಳಿಸಿದವು.
ಮುದಗಲ್ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ವೆಂಕಟೇಶ ಮಾಡಗೇರಿ ಪೊಲೀಸ್ ಸಿಬ್ಬಂದಿಯಿಂದ ಗೌರವ ವಂದನೆಯ ಮೂಲಕ ಧ್ವಜಾರೋಹಣ ನೆರವೇರಿಸಿದರು. ಪುರಸಭೆಯಲ್ಲಿ ಮುಖ್ಯಾಧಿಕಾರಿ ನಬಿ ಎಂ.ಕಂದಗಲ್ಲ, ಉಪ ತಹಶೀಲ್ದಾರ ಕಾರ್ಯಾಲಯದಲ್ಲಿ ಉಪ ತಹಶೀಲ್ದಾರ ತುಳಜಾರಾಮಸಿಂಗ್ ಪೊಲೀಸ್ ಸಿಬ್ಬಂದಿಯಿಂದ ಗೌರವ ವಂದನೆ ಮೂಲಕ ಧ್ವಜಾರೋಹಣ ನೆರವೇರಿಸಿದರು.ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ: ಚಂದ್ರಕಾಂತ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯ ಡಾ: ಸಿದ್ಧರಾಮಪ್ಪ ಪಾಟೀಲ, ಸರಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಎಸ್ಡಿಎಂಸಿ ಅದ್ಯಕ್ಷ ಸಿದ್ರಾಮಪ್ಪ ಛಲವಾದಿ, ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಎಸ್ಡಿಎಂಸಿ ಅದ್ಯಕ್ಷ ಪಾಲಾಕ್ಷಿರಾವ್ ದೇಶಪಾಂಡೆ, ಕೇಂದ್ರ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ದ್ಯಾಮಣ್ಣ ಕೊರವರ, ಕ್ರಿಸ್ತ ಜ್ಯೋತಿ ಫೌಡ ಶಾಲೆಯ ಮುಖ್ಯಸ್ಥರಾದ ಮಾರ್ಟಿನ್ ಸೆಲ್ಡನಾ, ಲಿಟಲ್ ಪ್ಲವರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥರಾದ ಫಾತೀಮಾ ಸೇರಿ ಉಳಿದ ಶಾಲಾ ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಧ್ವಜಾರೋಹಣದಲ್ಲಿ ಎಸ್.ಆರ್. ರಸೂಲ, ಪುರಸಭೆ ಮಾಜಿ ಅಧ್ಯಕ್ಷ ಅಶೋಕಗೌಡ ಪಾಟೀಲ, ಡಾ. ಅಯ್ಯಪ್ಪ ಬನ್ನಿಗೋಳ, ಅಮೀರಬೇಗ್ ಉಸ್ತಾದ, ಅಜಮೀರ ಬೆಳ್ಳಿಕಟ್, ರಜ್ಜಬಲಿ ಬೆಳ್ಳಿಕಟ್, ರಜ್ಜಬಲಿ ತಂಬಾಕ, ಚಂದ್ರಶೇಖರ ವಕೀಲರು, ಮಲ್ಲಪ್ಪ ಹೂಗಾರ, ನಾಗಪ್ಪ ಕುದುರಿ, ಹಸನ್, ಖದೀರ್ ಪಾನವಾಲೆ, ಚಂದಾವಲಿಸಾಬ, ಸೈಯ್ಯದ್, ಪುರಸಭೆ ಸದಸ್ಯರು, ಮುಖಂಡರು, ಪಟ್ಟಣದ ನಾಗರಿಕರು ಸೇರಿದಂತೆ ಮುಂತಾದವರಿದ್ದರು.