ಸಾರಾಂಶ
ನಿವೃತ್ತ ಸರ್ಕಾರಿ ನೌಕರರ ಸಂಘವು ಪಟ್ಟಣದಲ್ಲಿ ಕಳೆದ ೩೫ ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದು ೩೫೦ ಮಂದಿ ಸದಸ್ಯರನ್ನು ಒಳಗೊಂಡಿದೆ. ಸಂಘದ ಸದಸ್ಯತ್ವಕ್ಕೆ ೫೦೦ ರು.ನಿಗದಿಪಡಿಸಿದೆ. ಇದಕ್ಕಿಂತ ಕಡಿಮೆ ಸದಸ್ಯತ್ವ ಹಣ ಪಾವತಿಸಿರುವ ನೌಕರರ ಸದಸ್ಯತ್ವವನ್ನು ಅಮಾನತ್ತಿನಲ್ಲಿಡಲಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದಲ್ಲಿ ಸ್ಥಾಪಿತಗೊಂಡಿರುವ ನಿವೃತ್ತ ಸರ್ಕಾರಿ ನೌಕರರ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ನಾರಾಯಣಗೌಡ ಹೇಳಿದರು.ಪಟ್ಟಣದ ರಾಜ್ಯ ಸರ್ಕಾರಕ್ಕೆ ನಿವೃತ್ತ ನೌಕರರ ಸಂಘದ ಆವರಣದಲ್ಲಿ ನಡೆದ ನಿರ್ದೇಶಕರ ಸಭೆ ಹಾಗೂ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತ ಸರ್ಕಾರಿ ನೌಕರರ ಸಂಘವು ಪಟ್ಟಣದಲ್ಲಿ ಕಳೆದ ೩೫ ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದು ೩೫೦ ಮಂದಿ ಸದಸ್ಯರನ್ನು ಒಳಗೊಂಡಿದೆ. ಸಂಘದ ಸದಸ್ಯತ್ವಕ್ಕೆ ೫೦೦ ರು.ನಿಗದಿಪಡಿಸಿದೆ. ಇದಕ್ಕಿಂತ ಕಡಿಮೆ ಸದಸ್ಯತ್ವ ಹಣ ಪಾವತಿಸಿರುವ ನೌಕರರ ಸದಸ್ಯತ್ವವನ್ನು ಅಮಾನತ್ತಿನಲ್ಲಿಡಲಾಗಿದೆ. ಹಾಗಾಗಿ ಕಡಿಮೆ ಸದಸ್ಯತ್ವ ಹಣ ಪಾವತಿಸಿರುವ ಸದಸ್ಯರು ಕೂಡಲೇ ೫೦೦ ರು. ಪಾವತಿಸಿ ಸದಸ್ಯತ್ವಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ೨೦೨೫ನೇ ಸಾಲಿನ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಸಂಘದ ಕಾರ್ಯದರ್ಶಿ ನೀ.ಗಿರೀಗೌಡ, ಉಪಾಧ್ಯಕ್ಷರಾದ ಚಂದ್ರಶೇಖರಯ್ಯ, ಕೆ.ಕೆಂಪು, ಕಾರ್ಯದರ್ಶಿ ಎಂ.ಬೋರೇಗೌಡ, ಖಜಾಂಚಿ ಕೆ.ಜವರೇಗೌಡ, ಮುಖ್ಯ ಸಲಹೆಗಾರ ನಾರಾಯಣಗೌಡ, ಲೆಕ್ಕಪರಿಶೋಧಕ ಎಸ್.ಅಪ್ಪಾಜಿಗೌಡ, ಮಹಿಳಾ ಕಾರ್ಯದರ್ಶಿ ಶಿವಮ್ಮ, ಮುಖ್ಯಸಂಘಟನಾ ಕಾರ್ಯದರ್ಶಿ ವಿ.ವೆಂಕಟರಾಮೇಗೌಡ, ಜಿ.ಪ್ರಸನ್ನಕುಮಾರ್ ಸೇರಿದಂತೆ ಎಲ್ಲಾ ನಿರ್ದೇಶಕರು ಹಾಜರಿದ್ದರು.
ಬಗರ್ ಹುಕುಂ ಸಾಗುವಳಿ ಸಮಿತಿಗೆ ಪುನರ್ ರಚಿಸಿ ಸರ್ಕಾರ ಆದೇಶಕೆ.ಆರ್.ಪೇಟೆ:
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಗರ್ ಹುಕುಂ ಸಾಗುವಳಿ ಸಕ್ರಮಿಕರಣ ಸಮಿತಿ ಪುನರ್ ರಚಿಸಿ ರಾಜ್ಯ ಸರ್ಕಾರ ಮರು ಆದೇಶ ಹೊರಡಿಸಿದೆ.ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣಕ್ಕೆ ಸರ್ಕಾರ ಟಿಎಪಿಸಿಎಂ ಅಧ್ಯಕ್ಷ ಬಿ.ಎಲ್.ದೇವರಾಜು, ಅಕ್ಕಿಹೆಬ್ಬಾಳು ಹೋಬಳಿ ಗುಡುಗನಹಳ್ಳಿ ಕೋಮಲ ಕೋಂ ಜಿ.ಎ.ರಾಯಪ್ಪ ಮತ್ತು ದಲಿತ ಮುಖಂಡ ಬಸ್ತಿ ರಂಗಪ್ಪ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ತಾಲೂಕು ಬಗರ್ ಹುಕುಂ ಸಾಗುವಳಿ ಸಮಿತಿಗೆ ಮೇಲಿನ ಮೂವರು ಸದಸ್ಯರನ್ನು ಹೊಸದಾಗಿ ನೇಮಕ ಮಾಡಿದೆ. ಕಳೆದ ನವಂಬರ್‌ನಲ್ಲಿ ತಾಲೂಕಿನ ಮಡುವಿನಕೋಡಿ ಕಾಂತರಾಜು, ಮಾಕವಳ್ಳಿ ಪದ್ಮಾ ಮಂಜೇಗೌಡ ಹಾಗೂ ನಿವೃತ್ತ ಪ್ರಾಂಶುಪಾಲ ರಾಜಯ್ಯ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ನೂತನ ಆದೇಶವನ್ನು ರದ್ದುಪಡಿಸಿರುವ ರಾಜ್ಯ ಸರ್ಕಾರ ಈಗ ಮತ್ತೆ ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆ ಬಗರ್ ಹುಕುಂ ಸಾಗುವಳಿ ಸಮಿತಿ ಪುನರ್ ರಚಿಸಿ ಆದೇಶ ಹೊರಡಿಸಿದೆ.