ಚುನಾವಣಾ ಕರ್ತವ್ಯದಿಂದ ಪಿಡಿಒ ವಿಮುಕ್ತಿಗೆ ಮನವಿ

| Published : Mar 30 2024, 12:45 AM IST

ಸಾರಾಂಶ

ತಾಲೂಕಿನ ಮೆಣಸೆ ಗ್ರಾಮಪಂಚಾಯಿತಿ ಪಿಡಿಒರವರನ್ನು ಚುನಾವಣಾ ಕರ್ತವ್ಯದಿಂದ ವಿಮುಕ್ತಿಗೊಳಿಸುವಂತೆ ಮೆಣಸೆ ಗ್ರಾಪಂ ಅಧ್ಯಕ್ಷರು, ಸದಸ್ಯರು ಕಚೇರಿಯಲ್ಲಿ ತಹಸಿಲ್ದಾರ್‌ಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನ ಮೆಣಸೆ ಗ್ರಾಮಪಂಚಾಯಿತಿ ಪಿಡಿಒರವರನ್ನು ಚುನಾವಣಾ ಕರ್ತವ್ಯದಿಂದ ವಿಮುಕ್ತಿಗೊಳಿಸುವಂತೆ ಮೆಣಸೆ ಗ್ರಾಪಂ ಅಧ್ಯಕ್ಷರು, ಸದಸ್ಯರು ಕಚೇರಿಯಲ್ಲಿ ತಹಸಿಲ್ದಾರ್‌ಗೆ ಮನವಿ ಸಲ್ಲಿಸಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಈ ಬಾರಿ ಬರನಿರ್ವಹಣೆ ಇತ್ಯಾದಿ ಗಂಬೀರ ವಿಚಾರಗಳಿರುವುದರಿಂದ ಗ್ರಾಮ ಪಂಚಾಯಿತಿ ಪಿಡಒ ಗಳನ್ನು ಚುನಾವಣೆ ಕರ್ತವ್ಯದಿಂದ ವಿಮುಕ್ತಿಗೊಳಿಸಬೇಕು ಎಂದಿದೆ. ಆದರೂ ಕೂಡ ಪಿಡಿಒಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಮೆಣಸೆ ಗ್ರಾಮಪಂಚಾಯಿತಿ ತಾಲೂಕಿನಲ್ಲಿ ದೊಡ್ಡ ಪಂಚಾಯಿತಿಯಾಗಿದ್ದು ಈಗಾಗಲೇ ಬಿಲ್‌ ಕಲೆಕ್ಟರ್, ಕಾರ್ಯದರ್ಶಿಯವರನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕಚೇರಿಯಲ್ಲಿ ಕೆಲಸ ಕಾರ್ಯಗಳು ನಡೆಯದೇ ಜನರಿಗೆ ತೊಂದರೆಯಾಗುತ್ತಿದೆ. ಬೇಸಿಗೆಯ ಬರ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತಿದೆ. ಅಲ್ಲದೇ ಇಲ್ಲಿನ ಪಿಡಿಒ ಮೆಣಸೆ ಹಾಗೂ ಅಡ್ಡಗದ್ದೆ ಎರಡು ಪಂಚಾಯಿತಿಗಳ ಕಾರ್ಯ ನಿರ್ವಹಿಸುತ್ತಿದ್ದು, ಇವರಿಗೆ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸುವುದರಿಂದ ಎರಡು ಪಂಚಾಯಿತಿಗಳಲ್ಲಿ ಕೆಲಸ ಕಾರ್ಯಗಳಿಗೆ ತೊಂದರೆ ಯಾಗುತ್ತಿದೆ. ಆದ್ದರಿಂದ ಕೂಡಲೇ ಚುನಾವಣೆ ಕರ್ತವ್ಯದಿಂದ ವಿಮುಕ್ತಿಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ, ಉಪಾಧ್ಯಕ್ಷೆ ಭಾಗ್ಯ, ಸದಸ್ಯರಾದ ತ್ರಿಮೂರ್ತಿ, ಅಜಿತ್‌, ಮಂಜುನಾಥ್‌ ಮತ್ತಿತರರು ಇದ್ದರು.

29 ಶ್ರೀ ಚಿತ್ರ 1-

ಶೃಂಗೇರಿ ತಾಲೂಕು ಕಚೇರಿಯಲ್ಲಿ ಮೆಣಸೆ ಗ್ರಾಪಂ ಸದಸ್ಯರು ಪಿಡಿಒರನ್ನು ಚುನಾವಣೆ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಿದರು.