ಸಾರಾಂಶ
ಬಸವಕಲ್ಯಾಣ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾಳಾದ ರಸ್ತೆಗಳನ್ನು ದುರುಸ್ತಿಗೊಳಿಸಲು ಶಾಸಕ ಸಲಗರ ಅವರಿಂದ ಗೋಕಾಕನಲ್ಲಿ ಸಚಿವ ಜಾರಕಿಹೊಳಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಮೂರು-ನಾಲ್ಕು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದ ಬಸವಕಲ್ಯಾಣ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಅತಿವೃಷ್ಠಿಯಿಂದ ಗ್ರಾಮೀಣ ರಸ್ತೆ ಕಿತ್ತು ಹೋಗಿದ್ದು ಸಂಪರ್ಕ ರಸ್ತೆ ಹಾಗೂ ಸೇತುವೆಗಳು ಹಾಳಾಗಿದ್ದು ಕೂಡಲೇ ದುರುಸ್ತಿಗೊಳಿಸಬೇಕೆಂದು ಲೋಕೋಪಯೋಗಿ ಇಲಾಖೆ ಸಚಿವರಲ್ಲಿ ಮನವಿ ಮಾಡಲಾಯಿತು.ಶಾಸಕ ಶರಣು ಸಲಗರ ಅವರು ಗೋಕಾಕನಲ್ಲಿ ಸಚಿವ ಸತೀಶ ಜಾರಕಿಹೋಳಿಗೆ ಮನವಿ ಸಲ್ಲಿಸಿ, ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ರೈತರಿಗೆ ಹೊಲಗಳಿಗೆ ತೆರಳಲು ತೊಂದರೆಯಾಗುತ್ತಿದೆ. ಇದರಿಂದ ಜನರಿಗೆ ಭಾರಿ ನಷ್ಟ ಉಂಟಾಗಿದೆ. ಆಗಿರುವ ನಷ್ಟದ ಬಗ್ಗೆ ಮನವರಿಕೆ ಮಾಡಿ ರಸ್ತೆ ಹಾಗೂ ಸೇತುವೆಗಳ ಮರು ನಿರ್ಮಾಣಕ್ಕಾಗಿ ಹೆಚ್ಚಿನ ಅನುದಾನ ನೀಡಬೇಕೆಂದು ಮನವಿ ಮಾಡಿಕೊಂಡರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಲೋಕೊಪಯೋಗಿ ಸಚಿವರು ಕೂಡಲೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಕರೆ ಮೂಲಕ ಮಾತನಾಡಿ, ಆದಷ್ಟು ಬೇಗ ಬಸವಕಲ್ಯಾಣ ತಾಲೂಕಿನಲ್ಲಿ ಅತಿವೃಷ್ಠಿ ಮಳೆಯಿಂದ ಅಟ್ಟೂರ ಹಾಗೂ ಕೋಹಿನೂರ ಕೆರೆಗಳು ಒಡೆದು ಈ ನೀರಿನ ರಬಸಕ್ಕೆ ಅನೇಕ ಸೇತುವೆ ಮತ್ತು ರಸ್ತೆಗಳು ಕೊಚ್ಚಿ ಹೋಗಿವೆ ಇವುಗಳೆಲ್ಲ ತಕ್ಷಣ ರಿಪೇರಿ ಮಾಡಿಸಿ ಸಂಪರ್ಕ ಕಲ್ಪಿಸಲು ತಾಲೂಕಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಸಚಿವರು ಭರವಸೆ ನೀಡಿದರು.ಈ ಸಂಧರ್ಭದಲ್ಲಿ ಸೂರ್ಯಕಾಂತ ಚಿಲ್ಲಾಬಟ್ಟೆ, ಸಿದ್ದು ಬಿರಾದಾರ, ಸಂಜು ಸಲಗರ ಮುಂತಾದವರು ಉಪಸ್ಥಿತರಿದ್ದರು.