ಗೋವಿಂದಪುರ ರಸ್ತೆ ದುರಸ್ತಿಗೆ ಸಾರ್ವಜನಿಕರಿಂದ ಮನವಿ

| Published : Jun 04 2024, 12:30 AM IST

ಗೋವಿಂದಪುರ ರಸ್ತೆ ದುರಸ್ತಿಗೆ ಸಾರ್ವಜನಿಕರಿಂದ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ ರಾಷ್ಟ್ರೀಯ ಹೆದ್ದಾರಿ ದಳವಾಯಿ ಕೆರೆಯ ಬಳಿಯ ಅಂಡರ್ ಪಾಸ್ ಜೋಡಿಗೋವಿಂದ ಪುರ ರಸ್ತೆ ಸ್ಥಳಕ್ಕೆ ಭೇಟಿ ನೀಡಿದ ಅಶೋಕ್ ಬಿಲ್ ಕಾನ್ ಮುಖ್ಯಸ್ಥರಾದ ರಾಜು ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ತರೀಕೆರೆ

ರಾಷ್ಟ್ರೀಯ ಹೆದ್ದಾರಿ 206 ಬೈಪಾಸ್‌ ರಸ್ತೆ ವ್ಯಾಪ್ತಿಯ ಅಂಡರ್‌ ಪಾಸ್‌ ದಳವಾಯಿ ಕೆರೆ ಬಳಿ ಇರುವ ಜೋಡಿ ಗೋವಿಂದಪುರ ರಸ್ತೆಯನ್ನು ದುರಸ್ತಿ ಮಾಡುವಂತೆ ಅಶೋಕ್‌ ಬಿಲ್‌ಕಾನ್‌ ಮುಖ್ಯಸ್ಥರಾದ ರಾಜು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಸಂದೀಪ್‌ ಅವರಿಗೆ ಸಾರ್ವಜನಿಕರು ಮನವಿ ಮಾಡಿದರು.

ಈ ವೇಳೆ ಡಿಸಿಸಿ ಬ್ಯಾಂಕ್‌ನ ಮಾಜಿ ಉಪಾಧ್ಯಕ್ಷ ಟಿ.ಎಲ್.ರಮೇಶ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ 2 ಕೋಟಿ ರು.ಗಳಲ್ಲಿ ಸೇತುವೆ ನಿರ್ಮಾಣ ಮಾಡಿದ್ದು, ಅಂಡರ್ ಪಾಸ್ ರಸ್ತೆಯ ಮೂಲಕ ಜೋಡಿ ಗೋವಿಂದಪುರ, ಇಂದಾವರ, ಅಮ್ಣಣ್ಣಿ ಕಾವಲು ಗ್ರಾಮಸ್ಥರು, ರೈತರು ಸಂಚಿರಿಸುವ ಪ್ರಮುಖ ರಸ್ತೆಯಾಗಿದ್ದು, ಮಳೆಗಾಲದಲ್ಲಿ ಕಾಲುವೆ ನೀರು ಶೇಕರಣೆಯಿಂದಾಗಿ ಎತ್ತಿನಗಾಡಿ, ಟ್ರ್ಯಾಕ್ಟರ್‌ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತುಂಬಾ ತೊದರೆಯಾಗುತ್ತಿದೆ. ಆದರಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾಲುವೆ ಹಾಗೂ ಕಾಂಕ್ರೀಟ್‌ ರಸ್ತೆ ನಿರ್ಮಿಸುವಂತೆ ಕೋರಿಕೊಂಡರು.

ಮ್ಯಾಮ್ ಕೋಸ್ ಹಿರಿಯ ನಿರ್ದೇಶಕ ಡಾ.ಆರ್.ದೇವಾನಂದ್ ಮಾತನಾಡಿ, ಮಳೆಗಾಲ ಪ್ರಾರಂಭವಾಗುತ್ತಿದ್ದು ಸೋನೆ ಮಳೆ ಹಿಡಿದರೆ ಜಮೀನು ತೋಟ ಹೊಲ ಗದ್ದೆಗಳಿಗೆ ರೈತಾಪಿ ಜನತೆ ಸಂಚರಿಸಲು ತೊಂದರೆಯಾಗುತ್ತದೆ, ಆದ್ದರಿಂದ ಅಂಡರ್ ಪಾಸ್ ರಸ್ತೆಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸೇತುವೆ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವಂತೆ ಮನವಿಮಾಡಿದರು.

ಈ ವೇಳೆ ಪುರಸಭೆ ಸದಸ್ಯ ಚೇತನ್, ಮುಖಂಡರಾದ ಟಿ.ಹೆಚ್.ಸತ್ಯನಾರಾಯಣ, ಟಿ.ಡಿ.ರವಿಕುಮಾರ್, ಮಾಜಿ ಪುರಸಭಾಧ್ಯಕ್ಷ ಆರ್.ಬಸವರಾಜ್, ನಾರಾಯಣ, ದೇವರಾಜ್, ಮಧು (ಕುರಿಯರ್) ಟಿ.ಸಿ.ಗಂಗಾಧರ, ಟಿ.ಜಿ.ಬಸವರಾಡು ಮತ್ತಿತರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅಶೋಕ್ ಬಿಲ್ ಕಾನ್ ಮುಖ್ಯಸ್ಥ ರಾಜು ಅವರನ್ನು ಸನ್ಮಾನಿಸಲಾಯಿತು.