ಸಾರಾಂಶ
ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರಗೆ ಸಿಂಗಲ್ ಫೇಸ್ ವಿದ್ಯುತ್ ನೀಡುವಂತೆ ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರಗೆ ತೋಟದ ವಸತಿಯ ರೈತರು ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಐಗಳಿ
ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರಗೆ ಸಿಂಗಲ್ ಫೇಸ್ ವಿದ್ಯುತ್ ನೀಡುವಂತೆ ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರಗೆ ತೋಟದ ವಸತಿಯ ರೈತರು ಮನವಿ ಸಲ್ಲಿಸಿದರು. ನಿತ್ಯ 10 ಗಂಟೆಗೆ ವಿದ್ಯುತ್ ಸರಬರಾಜು ನಿಲ್ಲಿಸಲಾಗುತ್ತಿದ್ದು, ಬಿಸಿಲಿನ ತಾಪಕ್ಕೆ ವಯೋವೃದ್ದರು ಸಣ್ಣ ಮಕ್ಕಳು ತೀವ್ರ ಸಂಕಷ್ಟಕ್ಕೆ ಸಿಲುತ್ತಾರೆ. ಅವರನ್ನು ದೇವರೆ ಕಾಪಾಡಬೇಕು. ರಾತ್ರಿ 10 ಗಂಟೆಯಿಂದ ಸಿಂಗಲ್ ಫೇಸ್ ವಿದ್ಯುತ್ ಕೊಟ್ಟರೆ ಶೆಕೆಯಿಂದ ಪಾರಾಗಬಹುದು ಎಂದು ಅಧಿಕಾರಿಗಳಿಗೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ರೈತ ಮುಖಂಡ ಶಿವಾನಂದ ಸಿಂಧೂರ ಮಾತನಾಡಿ, ತೋಟದ ವಸತಿಯಲ್ಲಿ ಕುಡಿಯಲು ನೀರಿಲ್ಲ, ಕೊಳವೆ ಬಾವಿ ಹಾಗೂ ತೆರೆದ ಬಾವಿ ಪಂಪ್‌ಸೆಟ್‌ಗಳು ಬಂದ್ ಆಗಿವೆ. ವಿದ್ಯುತ್ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹ ಕೂಡ ಇದ್ದು, ಎಲ್ಲ ತೋಟದ ವಸತಿ(ಗಾರ್ಡನ್) ಪ್ರದೇಶಗಳಿಗೆ ರಾತ್ರಿ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದರು. ಈ ಕಾರ್ಯ ಕೇವಲ 2 ದಿನಗಳಲ್ಲಿ ಬೇಡಿಕೆ ಪ್ರಾರಂಭ ಆಗದೆ ಹೋದಲ್ಲಿ ಹೆಸ್ಕಾಂ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.