ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆಗೆ ಅವಕಾಶ ನೀಡುವಂತೆ ಮನವಿ

| Published : Sep 05 2025, 01:00 AM IST

ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆಗೆ ಅವಕಾಶ ನೀಡುವಂತೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಡಿಜೆ ಬಳಕೆಗೆ ಯಾವುದೇ ನಿರ್ಬಂಧನೆ ವಿಧಿಸಲಾಗಿಲ್ಲ. ಆದರೆ ಕೇವಲ ಹಾವೇರಿ ಜಿಲ್ಲೆಯಲ್ಲಿ ಮಾತ್ರ ಡಿಜೆ ಬಳಕೆಗೆ ಕಾನೂನು ನಿಭಂಧನೆಗಳನ್ನು ಹೇರಲಾಗಿದೆ.

ಹಾನಗಲ್ಲ: ತಾಲೂಕಿನಾದ್ಯಂತ ನೂರಾರು ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಕೈಗೊಳ್ಳಲಾಗಿದ್ದು, ಪ್ರತಿವರ್ಷದಂತೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಜೃಂಭಣೆಯಿಂದ ವಿಸರ್ಜನೆ ಕೈಗೊಳ್ಳಲಾಗುತ್ತದೆ. ವಿಸರ್ಜನೆ ಸಂದರ್ಭದಲ್ಲಿ ಡಿಜೆ ಬಳಕೆಗೆ ಅವಕಾಶ ನೀಡಬೆಕೆಂದು ಆಗ್ರಹಿಸಿ ಹಾನಗಲ್ಲ ತಾಲೂಕು ಗಜಾನನ ಯುವಕ ಮಂಡಳಗಳ ಒಕ್ಕೂಟ ತಾಲೂಕು ಆಡಳಿತಕ್ಕೆ ಗುರುವಾರ ಮನವಿ ಸಲ್ಲಿಸಿದೆ.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಡಿಜೆ ಬಳಕೆಗೆ ಯಾವುದೇ ನಿರ್ಬಂಧನೆ ವಿಧಿಸಲಾಗಿಲ್ಲ. ಆದರೆ ಕೇವಲ ಹಾವೇರಿ ಜಿಲ್ಲೆಯಲ್ಲಿ ಮಾತ್ರ ಡಿಜೆ ಬಳಕೆಗೆ ಕಾನೂನು ನಿಭಂಧನೆಗಳನ್ನು ಹೇರಲಾಗಿದೆ. ಧಾರವಾಡ, ಕೊಪ್ಪಳ, ಕಾರವಾರ ಮುಂತಾದ ಜಿಲ್ಲೆಗಳಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಡಿಜೆ ಹಚ್ಚುವ ಮೂಲಕ ಕಾನೂನಿನ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಹಬ್ಬವನ್ನು ಆಚರಿಸುತ್ತಿದ್ದಾರೆ.

ಸರ್ಕಾರ ಮತ್ತು ಜಿಲ್ಲಾಡಳಿತ ಜಿಲ್ಲೆಗಳಿಗೊಂದು ಪ್ರತ್ಯೇಕ ನೀತಿಯನ್ನು ತಾಳುತ್ತಿರುವುದು ಸರಿಯಾದ ಕ್ರಮವಲ್ಲ. ಹಾನಗಲ್ಲ ತಾಲೂಕಿನ ಹಿಂದೂ ಸಮಾಜದವರು ಮತ್ತು ವಿವಿಧ ಗಣೇಶೋತ್ಸವ ಸಮಿತಿಗಳು ಈಗಾಗಲೇ ಸಭೆ ನಡೆಸಿ, ಡಿಜೆ ಬಳಕೆಗೆ ಜಿಲ್ಲಾಡಳಿತ ಪರವಾನಗಿ ನೀಡಬೇಕು ಎಂದು ಆಗ್ರಹಿಸಿದೆ. ಪರವಾನಗಿ ನೀಡದಿದ್ದರೆ ಗಣೇಶ ವಿಸರ್ಜನೆಯನ್ನು ಕೈಗೊಳ್ಳುವುದಿಲ್ಲ ಎಂಬ ನಿರ್ಧಾರವನ್ನು ಪ್ರಕಟಿಸಿದೆ ಎಂದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ನ ಪ್ರಮುಖರಾದ ಹರೀಶ ಹಾನಗಲ್ಲ, ರವಿಚಂದ್ರ ಪುರೋಹಿತ, ವಿವಿಧ ಸಮಿತಿಗಳ ಪ್ರಮುಖರಾದ ಸಚಿನ್ ರಾಮಣ್ಣನವರ, ಪವನ ಜಾಬಿನ್, ಬಸವರಾಜ ಮಟ್ಟಿಮನಿ, ಬಸವರಾಜ ಹಾದಿಮನಿ, ಹರೀಶ ತಳವಾರ, ಸಂಜು ಬಾರ್ಕಿ, ಕುಮಾರಸ್ವಾಮಿ ಹಿರೇಮಠ, ಮಣಿಕಂಠ ಹರ‍್ನಹಳ್ಳಿ, ಸಚಿನ ಓಲೇಕಾರ, ಅರವಿಂದ ಮಹಾಂತಿನಮಠ, ಸಂದೀಪ ಹೊಸಳ್ಳಿ, ಸಂತೋಷ ಗಾಣಿಗೇರ, ಜಿ.ಎಸ್. ಹತ್ತಿ, ವೀರೇಶ ಶಂಕಿನಮಠ, ನಂದೀಶ ಹಿರೂರ, ವಿಶ್ವನಾಥ ಕಮಾಟಿ, ಸೂರಜ್ ರೇವಡಿಗಾರ, ರಾಮು ಯಳ್ಳೂರ, ನಾಗರಾಜ ಹೆಬ್ಬಾರ, ಪ್ರಕಾಶ ಕಲಾಲ, ರಾಜು ಡಂಬಳ, ಲಿಖಿತ ಇತರರು ಪಾಲ್ಗೊಂಡಿದ್ದರು.