ಜಾತಿ ಗಣತಿಯಲ್ಲಿ ಒಕ್ಕಲಿಗ ಎಂದೇ ನಮೂದಿಸಲು ಮನವಿ

| Published : Sep 17 2025, 01:05 AM IST

ಸಾರಾಂಶ

ಮಾಗಡಿ: ಸೆ.22ರಿಂದ 15ರವರೆಗೆ ನಡೆಯುವ ಜಾತಿ ಜನಗಣತಿಯಲ್ಲಿ ಒಕ್ಕಲಿಗ ಜನಾಂಗದ ಕುಟುಂಬಸ್ಥರು ಒಕ್ಕಲಿಗ ಎಂದೇ ನಮೂದಿಸುವ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಒಕ್ಕಲಿಗ ಜನಸಂಖ್ಯೆ ಇದೆ ಎಂಬುದನ್ನು ಸಾಬೀತುಪಡಿಸಬೇಕಿದೆ ಎಂದು ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಹಾಗೂ ಬಮುಲ್ ನಿರ್ದೇಶಕ ಎಚ್.ಎನ್.ಅಶೋಕ್ ಮನವಿ ಮಾಡಿದರು.

ಮಾಗಡಿ: ಸೆ.22ರಿಂದ 15ರವರೆಗೆ ನಡೆಯುವ ಜಾತಿ ಜನಗಣತಿಯಲ್ಲಿ ಒಕ್ಕಲಿಗ ಜನಾಂಗದ ಕುಟುಂಬಸ್ಥರು ಒಕ್ಕಲಿಗ ಎಂದೇ ನಮೂದಿಸುವ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಒಕ್ಕಲಿಗ ಜನಸಂಖ್ಯೆ ಇದೆ ಎಂಬುದನ್ನು ಸಾಬೀತುಪಡಿಸಬೇಕಿದೆ ಎಂದು ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಹಾಗೂ ಬಮುಲ್ ನಿರ್ದೇಶಕ ಎಚ್.ಎನ್.ಅಶೋಕ್ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ರಾಜ್ಯದಲ್ಲಿ ಅಂದಾಜು ಪ್ರಕಾರ ಒಂದು ಕೋಟಿಗೂ ಹೆಚ್ಚು ಒಕ್ಕಲಿಗ ಜನಾಂಗ ಇದೆ. ನಮ್ಮ ಜನಾಂಗದ ಮಕ್ಕಳಿಗೆ ಸರ್ಕಾರಿ ಸೌಲಭ್ಯಗಳು ಸಿಗುವ ನಿಟ್ಟಿನಲ್ಲಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಜನಗಣತಿ ನಡೆಸುತ್ತಿದ್ದು ಸಮುದಾಯದ ನಂಜಾವದೂತ ಸ್ವಾಮೀಜಿ, ಆದಿಚುಂಚನಗಿರಿ ಮಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳ ಕರೆ ಮೇರೆಗೆ ಒಕ್ಕಲಿಗ ಎಂದೇ ನಮೂದಿಸಬೇಕು. ಒಕ್ಕಲಿಗ ಜನಾಂಗದಲ್ಲಿ 126 ಒಳಪಂಗಡಗಳಿದ್ದು ಯಾವುದೇ ಒಳಪಂಗಡಕ್ಕೂ ನಾವು ಈ ಸಮಯದಲ್ಲಿ ಹೆಚ್ಚು ಪ್ರಾಮುಖ್ಯತೆ ಕೊಡದೆ ಜನಗಣತಿ ಫಾರಂನ ಜಾತಿ-ಉಪಜಾತಿ ಎರಡು ವಿಭಾಗದಲ್ಲೂ ಒಕ್ಕಲಿಗ ಎಂದೇ ನಮೂದಿಸುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಬೇಕು. 126 ಒಳಪಂಗಡಗಳುಒಕ್ಕಲಿಗ ಎಂದೇ ನಾವು ಬರೆಸಿದರೆ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಅನುಕೂಲವಾಗುತ್ತದೆ ಎಂದರು.

ರಾಜ್ಯ ಒಕ್ಕಲಿಗ ಸಂಘದ ಎಲ್ಲಾ ನಿರ್ದೇಶಕರು ಆಯಾ ಭಾಗದ ತಾಲೂಕುಗಳಲ್ಲಿ ಸಮುದಾಯದ‌ ಮುಖಂಡರ ಸಭೆ ಕರೆದು ಮನವರಿಕೆ ಮಾಡಿಕೊಡಲಾಗುತ್ತಿದೆ. ಯಾರು ಉಪಪಂಗಡ ಹೆಸರನ್ನು ಜನಗಣತಿಯಲ್ಲಿ ಬಳಸದೆ ಎರಡು ಕಡೆಯೂ ಒಕ್ಕಲಿಗ ಎಂದೇ ಬಳಸಬೇಕಿದೆ ಎಂದು ತಿಳಿಸಿದರು.

ಇದೇ ವೇಳೆ ಒಕ್ಕಲಿಗ ಸಂಘದ ತಾಲೂಕು ಅಧ್ಯಕ್ಷ ರಾಮಕೃಷ್ಣಯ್ಯ, ಉಪಾಧ್ಯಕ್ಷ ರಮೇಶ್ ನಿರ್ದೇಶಕರಾದ ಮಂಜುನಾಥ್, ನರಸಿಂಹಮೂರ್ತಿ, ಈರಯ್ಯ ಜಯರಾಂ, ಲಕ್ಷ್ಮಣ್ ಮುಖಂಡರಾದ ನರಸಿಂಹಮೂರ್ತಿ, ಜೆ.ಪಿ.ಚಂದ್ರೇಗೌಡ, ವೆಂಕಟೇಶ್, ಚಕ್ರಬಾವಿ ರವೀಂದ್ರ, ಡಿ.ಸಿ.ಶಿವಣ್ಣ, ಪೂಜಾರಿಪಾಳ್ಯ ಕೃಷ್ಣಮೂರ್ತಿ, ಕಸ್ತೂರಿ ಕಿರಣ್, ರೂಪೇಶ್, ಕಾಂತರಾಜು, ತಗೀಕುಪ್ಪೆ ರಾಮು, ಮೂರ್ತಿ, ಸೀಗೇಕುಪ್ಪೆ‌ ಶಿವಣ್ಣ, ಲೋಕೇಶ್, ಆಗ್ರೋ ಪುರುಷೋತ್ತಮ್ ಸೇರಿದಂತೆ ಒಕ್ಕಲಿಗ ಸಂಘದ ಮುಖಂಡರು ಭಾಗವಹಿಸಿದ್ದರು.