ಸಾರಾಂಶ
Request to distribute eggs like milk packets
ಹೊಸದುರ್ಗ: ಪಿ ಎಂ ಪೋಷಣ್ ಅಭಿಯಾನದಡಿಯಲ್ಲಿ ಸರ್ಕಾರಿ ಕಿರಿಯ, ಹಿರಿಯ ಹಾಗೂ ಪ್ರೌಡಶಾಲೆಗಳಲ್ಲಿನ ಮಕ್ಕಳಿಗೆ ವಾರದ ಎಲ್ಲಾ ದಿನಗಳಲ್ಲೂ ಪೂರಕ ಪೌಷ್ಠಿಕ ಆಹಾರವಾಗಿ ನೀಡಲಾಗುತ್ತಿರುವ ಮೊಟ್ಟೆ ಬೆಲೆಯನ್ನು ಸರ್ಕಾರ 5 ರು.ಗೆ ನಿಗದಿ ಮಾಡಿದೆ. ಆದರೆ, ಮಾರುಕಟ್ಟೆಯಲ್ಲಿ ಅದರ ಬೆಲೆ 6-7 ರು. ಇದ್ದು ಇದರಿಂದ ಶಾಲಾ ಆಡಳಿತದ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ. ಇದನ್ನು ತಪ್ಪಿಸುವಂತೆ ಹಾಗೂ ರಾಗಿ ಮಾಲ್ಟ್ , ಹಾಲಿನ ಪ್ಯಾಕೆಟ್ ರೀತಿಯಲ್ಲಿ ಮೊಟ್ಟೆಯನ್ನು ವಿತರಿಸಲು ಏಜೆನ್ಸಿಯವರಿಗೆ ನೇಮಿಸುವ ಮೂಲಕ ಮುಖ್ಯ ಶಿಕ್ಷಕರು, ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುವಂತೆ ಶಾಸಕ ಬಿಜಿ ಗೋವಿಂದಪ್ಪ ಅವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ವೇಳೆ ಬಿಇಒ ಸಯ್ಯದ್ ಮೋಸೀನ್, ಅಧ್ಯಕ್ಷ ಮಂಜುನಾಥ್, ಕಾರ್ಯಾಧ್ಯಕ್ಷ ಯೋಗರಾಜ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಪ್ಪ ಸೇರಿದಂತೆ ಸಂಘದ ಪಧಾಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರುಗಳು ಹಾಜರಿದ್ದರು.
--( ಫೋಟೋ 20ಎಚ್‌ಎಸ್‌ಡಿ1)