ಚಂದ್ರಂಪಳ್ಳಿ ಜಲಾಶಯದಿಂದ ನೀರು ಹರಿಸಲು ಮನವಿ

| Published : Mar 24 2024, 01:31 AM IST

ಸಾರಾಂಶ

ಚಂದ್ರಂಪಳ್ಳಿ ಜಲಾಶಯದಿಂದ ಬಲದಂಡೆ ಮತ್ತು ಎಡದಂಡೆ ಮುಖ್ಯಕಾಲುವೆಗೆ ನೀರು ಹರಿಸಲು ಅಚ್ಚುಕಟ್ಟು ಪ್ರದೇಶದ ರೈತರು ಚಂದ್ರಂಪಳ್ಳಿ ಜಲಾಶಯ ಹತ್ತಿರ ಶನಿವಾರ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನಲ್ಲಿ ಮಳೆ ಅಭಾವದಿಂದಾಗಿ ಭೀಕರ ಬರಗಾಲ ಇರುವುದರಿಂದ ದನಕರುಗಳಿಗೆ, ಪ್ರಾಣಿಪಕ್ಷಿಗಳಿಗೆ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಚಂದ್ರಂಪಳ್ಳಿ ಜಲಾಶಯದಿಂದ ಬಲದಂಡೆ ಮತ್ತು ಎಡದಂಡೆ ಮುಖ್ಯಕಾಲುವೆಗೆ ನೀರು ಹರಿಸಲು ಅಚ್ಚುಕಟ್ಟು ಪ್ರದೇಶದ ರೈತರು ಚಂದ್ರಂಪಳ್ಳಿ ಜಲಾಶಯ ಹತ್ತಿರ ಶನಿವಾರ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.

ಬೇಸಿಗೆ ದಿನ ಆಗಿರುವುದರಿಂದ ಗ್ರಾಮಗಳಲ್ಲಿನ ಬೋರ್‌ವೆಲ್‌ಗಳಲ್ಲಿ ನೀರು ಬರುತ್ತಿಲ್ಲ ಬಾವಿಗಳಲ್ಲಿ ನೀರು ಬತ್ತಿ ಹೋಗುತ್ತಿವೆ. ದನಕರುಗಳಿಗೆ ನೀರು ಹಾಕುವುದು ತುಂಬಾ ಕಷ್ಟಕರವಾಗಿದೆ ಎಂದು ಗ್ರಾಮಸ್ಥರು ತಹಸೀಲ್ದಾರವರಿಗೆ ಎಂದು ಅಳಲು ತೋಡಿಕೊಂಡರು.

ಚಂದ್ರಂಪಳ್ಳಿ ಜಲಾಶಯದ ಮುಖ್ಯಕಾಲುವೆಗೆ ನೀರು ಹರಿದು ಬಿಟ್ಟರೆ ದನಕರುಗಳಿಗೆ ಮತ್ತು ಪಕ್ಷಿಗಳಿಗೆ ನೀರು ಕುಡಿಯಲು ಅನುಕೂಲವಾಗಲಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಅನೇಕ ಸಲ ಕಂದಾಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ರೈತರು ಹೇಳಿದರು.

ತಹಸೀಲ್ದಾರ ವೆಂಕಟೇಶ ದುಗ್ಗನ ಮಾತನಾಡಿ, ದನಕರುಗಳಿಗೆ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರು ಹರಿದು ಬಿಡುವಂತೆ ರೈತರ ಬೇಡಿಕೆಯಂತೆ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆಯಲಾಗುವುದು ಎಂದು ಹೇಳಿದರು.

ಜಿಪಂ ಎಇಇ ರಾಹುಲ ಕಾಂಬಳೆ, ರೈತರಾದ ಶರಣಬಸಪ್ಪ ಮಮಶೆಟ್ಟಿ, ಬಕ್ಕಪ್ಪ ಕೊಳ್ಳುರ, ಭೀಮರೆಡ್ಡಿ, ಶಿವಕುಮಾರ ಪೋಚಾಲಿ, ಕಂದಾಯ ನಿರಿಕ್ಷಕ ರವಿಕುಮಾರ ಪಾಟೀಲ ಇನ್ನಿತರಿದ್ದರು.