ರಸ್ತೆ ಸಮತಟ್ಟು ಮಾಡಲು ಮನವಿ

| Published : Mar 19 2024, 12:54 AM IST

ಸಾರಾಂಶ

ರಬಕವಿ-ಬನಹಟ್ಟಿ: ರಬಕವಿ - ಬನಹಟ್ಟಿ ಬೈಪಾಸ್‌ನ ಆಸಂಗಿ ಡೆಂಪೊ ಡೇರಿ ಪಕ್ಕದಲ್ಲಿರುವ ಏರು ಪ್ರದೇಶದ ರಸ್ತೆಯನ್ನು ಸಮತಟ್ಟು ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ಈ ರಸ್ತೆ ಮೂಲಕ ಮದನಮಟ್ಟಿ, ಹಳಿಂಗಳಿ ರಬಕವಿಯ ಸಾವಿರಾರು ರೈತರ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳು ಕಾರ್ಖಾನೆಗಳಿಗೆ ತೆರಳುತ್ತವೆ. ಎತ್ತರದ ರಸ್ತೆ ಆಗಿದ್ದರಿಂದ ಚಾಲಕರು ಹರಸಹಾಸ ಪಡಬೇಕು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ರಬಕವಿ - ಬನಹಟ್ಟಿ ಬೈಪಾಸ್‌ನ ಆಸಂಗಿ ಡೆಂಪೊ ಡೇರಿ ಪಕ್ಕದಲ್ಲಿರುವ ಏರು ಪ್ರದೇಶದ ರಸ್ತೆಯನ್ನು ಸಮತಟ್ಟು ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ಈ ರಸ್ತೆ ಮೂಲಕ ಮದನಮಟ್ಟಿ, ಹಳಿಂಗಳಿ ರಬಕವಿಯ ಸಾವಿರಾರು ರೈತರ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳು ಕಾರ್ಖಾನೆಗಳಿಗೆ ತೆರಳುತ್ತವೆ. ಎತ್ತರದ ರಸ್ತೆ ಆಗಿದ್ದರಿಂದ ಚಾಲಕರು ಹರಸಹಾಸ ಪಡಬೇಕು. ಒಂದುವೇಳೆ ಆಯತಪ್ಪಿದರೆ ವಾಹನ ಸಮೇತ ಕಂದಕಕ್ಕೆ ಬೀಳುವ ಸಾಧ್ಯತೆ ಇದೆ. ಪ್ರತಿ ವರ್ಷ ಕಬ್ಬಿನ ಹಂಗಾಮು ಮುಗಿಯುವುದರೊಳಗೆ ಐದಾರು ಟ್ರ್ಯಾಕ್ಟರಗಳು ಪಲ್ಟಿಯಾಗುತ್ತವೆ. ಆದ್ದರಿಂದ ಕೂಡಲೇ ಈ ರಸ್ತೆ ಸಮತಟ್ಟು ಮಾಡಬೇಕು ಎಂದು ರೈತ ಆದಿನಾಥ ಅರಳಿಟ್ಟಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.