ಯಶವಂತಪುರ - ಮಂಗಳೂರು ರೈಲು ಸಂಚಾರ ಸೆಂಟ್ರಲ್‌ಗೆ ವಿಸ್ತರಣೆಗೆ ರೈಲ್ವೆ ಸಚಿವಗೆ ಮನವಿ

| N/A | Published : Apr 14 2025, 01:17 AM IST / Updated: Apr 14 2025, 12:46 PM IST

ಯಶವಂತಪುರ - ಮಂಗಳೂರು ರೈಲು ಸಂಚಾರ ಸೆಂಟ್ರಲ್‌ಗೆ ವಿಸ್ತರಣೆಗೆ ರೈಲ್ವೆ ಸಚಿವಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು- ಕಬಕ ಪುತ್ತೂರು ರೈಲು ಸಂಚಾರವನ್ನು ಸುಬ್ರಹ್ಮಣ್ಯಕ್ಕೆ ವಿಸ್ತರಣೆ ಮಾಡಿ ಚಾಲನೆ ನೀಡಿರುವ ಕಾರ್ಯಕ್ಕೆ ಕೇಂದ್ರದ ರೈಲ್ವೇ ಇಲಾಖೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿರುವ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ 

 ಮಂಗಳೂರು : ಮಂಗಳೂರು- ಕಬಕ ಪುತ್ತೂರು ರೈಲು ಸಂಚಾರವನ್ನು ಸುಬ್ರಹ್ಮಣ್ಯಕ್ಕೆ ವಿಸ್ತರಣೆ ಮಾಡಿ ಚಾಲನೆ ನೀಡಿರುವ ಕಾರ್ಯಕ್ಕೆ ಕೇಂದ್ರದ ರೈಲ್ವೇ ಇಲಾಖೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿರುವ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ, ಯಶವಂತಪುರ- ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ವಿಸ್ತರಿಸಲು ಮನವಿ ಸಲ್ಲಿಸಿದೆ. 

ರೈಲು ಸಂಖ್ಯೆ 16575/ 76 ಮತ್ತು 16539/ 40 ರೈಲನ್ನು ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಿಂದ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು. ಇದೇ ವೇಳೆ ರೈಲು ಸಂಖ್ಯೆ 12133/ 34 ಸಿಎಸ್‌ಟಿಎಂ ಮುಂಬೈ- ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನೂ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು ಎಂದು ಸಚಿವರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಿದ್ದಾರೆ.ಮಗಂಳೂರು ಸೆಂಟ್ರಲ್‌- ಮಡಗಾಂವ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರನ್ನು ಕೂಡಾ ಮುಂಬೈಗೆ ವಿಸ್ತರಿಸಬೇಕು.

 ಮಂಗಳೂರು ಕಾತ್ರಾ ನವಯುಗ ಎಕ್ಸ್‌ಪ್ರೆಸ್‌ ರೈಲನ್ನು ಪುನರ್‌ ಪರಿಚಯಿಸುವ ಜತೆಗೆ ಅದನ್ನು ಸುಬ್ರಹ್ಮಣ್ಯ- ಹಾಸನ- ಪುಣೆ- ಭೋಪಾಲ- ದೆಹಲಿ ಮಾರ್ಗವಾಗಿ ಸಂಚರಿಸಲು ಕ್ರಮ ವಹಿಸಬೇಕು. ಮಂಗಳೂರು ಸೆಂಟ್ರಲ್‌ ನಿಲ್ದಾಣವನ್ನು ವಿಶ್ವ ದರ್ಜೆ ನಿಲ್ದಾಣವಾಗಿ ಅಭಿವೃದ್ಧಿಪಡಿಸಬೇಕು. ಮಂಗಳೂರು ಸೆಂಟ್ರಲ್‌ ಮತ್ತು ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಗಳಲ್ಲಿ ಸೂಕ್ತ ಪ್ರಿ ಪೇಯ್ಡ್‌ ರಿಕ್ಷಾ ಕೌಂಟರ್‌ಗಳನ್ನು ಒದಗಿಸಬೇಕು ಎಂದು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯು ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿದೆ.