ಸಾರಾಂಶ
ಪಟ್ಟಣದ ಹೃದಯ ಭಾಗದ ಡಿ.ದೇವರಾಜ ಅರಸ್ ಕ್ರೀಡಾಂಗಣದಲ್ಲಿನ ಹೈಮಾಸ್ಟ್ ಲೈಟ್ ಉರಿಯದೆ ಕತ್ತಲಲ್ಲಿ ಮುಳುಗಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪಟ್ಟಣದ ಹೃದಯ ಭಾಗದ ಡಿ.ದೇವರಾಜ ಅರಸ್ ಕ್ರೀಡಾಂಗಣದಲ್ಲಿನ ಹೈಮಾಸ್ಟ್ ಲೈಟ್ ಉರಿಯದೆ ಕತ್ತಲಲ್ಲಿ ಮುಳುಗಿದೆ.ಕಳೆದ ತಿಂಗಳಿನಿಂದ ಹೈಮಾಸ್ಟ್ ಲೈಟ್ ದುರಸ್ತಿಗೆ ಪುರಸಭೆ ಮುಂದಾಗಿಲ್ಲದ ಕಾರಣ ಬೆಳಗಿನ ಜಾವ ಹಾಗೂ ಸಂಜೆಯ ಬಳಿಕ ವಾಯು ವಿಹಾರಿಗಳು ಕತ್ತಲೆಯಲ್ಲೆ ವಾಕಿಂಗ್ ಮಾಡುತ್ತಿದ್ದಾರೆ. ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದ ನೈರುತ್ಯ ದಿಕ್ಕಿನಲ್ಲಿ ಗರುಡ ಗಂಭದಂತೆ ಎಂಬತ್ತಡಿಯಷ್ಟು ಎತ್ತರದ ಹೈಮಾಸ್ಟ್ ಲೈಟ್‌ನ ಕಂಬ ನಿಂತಿದೆ. ಆದರೆ ಬೆಳಕು ಮಾತ್ರ ಇಲ್ಲ.
ಕ್ರೀಡಾಂಗಣದಲ್ಲಿ ಬೆಳಗ್ಗೆ, ಸಂಜೆ ವೇಳೆ ಮಹಿಳೆಯರು, ಮಕ್ಕಳು,ವೃದ್ಧರು ಸೇರಿದಂತೆ ನೂರಾರು ಮಂದಿ ಪುರುಷರು ವಾಕಿಂಗ್ ಮಾಡುತ್ತಾರೆ. ಜೊತೆಗೆ ಕ್ರೀಡಾಂಗಣದೊಳಗೆ ಅಲ್ಲಲ್ಲಿ ಹಲವಾರು ಆಟೋಪಗಳಲ್ಲಿ ಕ್ರೀಡಾಪಟುಗಳು ಇರುತ್ತಾರೆ.ಪುರಸಭೆ ಗಮನಕ್ಕಿಲ್ವ?:ಡಿ.ದೇವರಾಜ ಅರಸು ಕ್ರೀಡಾಂಗಣದ ಮೇಲ್ವಿಚಾರಕರೊಬ್ಬರು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಹೈಮಾಸ್ಟ್ ಲೈಟ್ ಉರಿಯುತ್ತಿಲ್ಲ, ಕೆಟ್ಟಿದ್ದರೆ ದುರಸ್ತಿ ಪಡಿಸಿ ಎಂದು ಹೇಳಿದ್ದಾರೆ. ಕ್ರೀಡಾಂಗಣಲ್ಲಿ ಉರಿಯದೆ ನಿಂತಿರುವ ಹೈಮಾಸ್ಟ್ ಲೈಟ್‌ನ ದುರಸ್ತಿ ಪಡಿಸಿ. ಸಾರ್ವಜನಿಕರು ಹಾಗೂ ವಾಯು ವಿಹಾರಿಗಳಿಗೆ ವಾಕಿಂಗ್ ಮಾಡಲು ಪುರಸಭೆ ಇನ್ನಾದರೂ ಕ್ರಮ ವಹಿಸುವುದೇ ಎಂದು ಹೆಸರೇಳಲಿಚ್ಚಿಸಿದ ಮಹಿಳೆಯೊಬ್ಬರು ಕನ್ನಡಪ್ರಭದೊಂದಿಗೆ ಹೇಳಿಕೊಂಡರು.ಡಿ.ದೇವರಾಜ ಅರಸು ಕ್ರೀಡಾಂಗಣದ ಹೈಮಾಸ್ಟ್ ಲೈಟ್‌ನ ಕೇಬಲ್ ಖಾಸಗಿ ನಿವೇಶನದಲ್ಲಿದೆ. ನಿವೇಶನದಾರರು ಮನೆ ಕಟ್ಟಬೇಕು, ಕೇಬಲ್ ಬದಲಿಸಿ ಎಂದ ಕಾರಣ ಹೈಮಾಸ್ಟ್ ಲೈಟ್ ಉರಿಯುತ್ತಿಲ್ಲ. ಕೇಬಲ್ ಬದಲಿಸಲು ಕ್ರಮ ವಹಿಸುವಂತೆ ಪುರಸಭೆಗೆ ಸೂಚಿಸುವೆ.-ಕಿರಣ್ ಗೌಡ, ಪುರಸಭೆ ಸದಸ್ಯ, ಗುಂಡ್ಲುಪೇಟೆ
ಡಿ.ದೇವರಾಜ ಅರಸು ಕ್ರೀಡಾಂಗಣ ಗುಂಡ್ಲುಪೇಟೆಗೆ ಭೂಷಣ. ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಕಾಲದಲ್ಲಿ ನಿರ್ಮಾಣವಾಗಿದೆ. ವಾಯು ವಿಹಾರದ ತಾಣವಾಗಿದೆ. ಹೈಮಾಸ್ಟ್ ಲೈಟ್ ಬೆಳಕು ನೀಡುತ್ತಿಲ್ಲ. ಪುರಸಭೆ ಕೂಡಲೇ ಗಮನಹರಿಸಲಿ.-ಬಿ.ಎಂ.ಮಂಜಪ್ಪ, ಶಿವಪುರ ನಿವಾಸಿ