ಕುಷ್ಟಗಿ-ಬೆಂಗಳೂರ ರೈಲು ಓಡಿಸಿ

| Published : Sep 03 2025, 01:01 AM IST

ಸಾರಾಂಶ

ಕುಷ್ಟಗಿ, ಯಲಬುರ್ಗಾ, ಕುಕನೂರು ತಾಲೂಕಿನ ಜನತೆ ವ್ಯಾಪಾರ-ವಹಿವಾಟು, ಶೈಕ್ಷಣಿಕ ಉದ್ದೇಶಕ್ಕೆ ಬೆಂಗಳೂರಿಗೆ ತೆರಳಲುವವರಿಗೆ ಅನುಕೂಲವಾಗಲು ಯಶವಂತಪುರ-ಹರಿಹರ-ಹೊಸಪೇಟೆ ರೈಲನ್ನು ಕುಷ್ಟಗಿ ವರೆಗೆ ಓಡಿಸುವಂತೆ ಕುಷ್ಟಗಿ ರೈಲು ಹೋರಾಟ ಸಮಿತಿ ಪದಾಧಿಕಾರಿಗಳು ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಕೊಪ್ಪಳದಲ್ಲಿ ಮನವಿ ಸಲ್ಲಿಸಿದರು.

ಕುಷ್ಟಗಿ:

ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಓಡಿಸಬೇಕೆಂದು ಕುಷ್ಟಗಿ ರೈಲು ಹೋರಾಟ ಸಮಿತಿ ಪದಾಧಿಕಾರಿಗಳು ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಕೊಪ್ಪಳದಲ್ಲಿ ಮನವಿ ಸಲ್ಲಿಸಿದರು.

ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ ಮಾತನಾಡಿ, ಕುಷ್ಟಗಿಯಿಂದ ಹುಬ್ಬಳ್ಳಿಗೆ ಬೆಳಗ್ಗೆ 6.45ಕ್ಕೆ ರೈಲು ಸಂಚರಿಸುತ್ತಿರುವುದರಿಂದ ತಾಲೂಕಿನ ನೂರಾರು ಹಳ್ಳಿಯ ಜನರಿಗೆ ಅನುಕೂಲವಾಗಿದೆ. ಇದರೊಂದಿಗೆ ಬೆಳಗ್ಗೆ 10ಕ್ಕೆ ಮತ್ತೊಂಡು ರೈಲು ಓಡಿಸಿದರೆ ಮತ್ತಷ್ಟು ಅನುಕೂಲವಾಗಲಿದೆ. ಇದರೊಂದಿಗೆ ಕುಷ್ಟಗಿ, ಯಲಬುರ್ಗಾ, ಕುಕನೂರು ತಾಲೂಕಿನ ಜನತೆ ವ್ಯಾಪಾರ-ವಹಿವಾಟು, ಶೈಕ್ಷಣಿಕ ಉದ್ದೇಶಕ್ಕೆ ಬೆಂಗಳೂರಿಗೆ ತೆರಳಲುವವರಿಗೆ ಅನುಕೂಲವಾಗಲು ಯಶವಂತಪುರ-ಹರಿಹರ-ಹೊಸಪೇಟೆ ರೈಲನ್ನು ಕುಷ್ಟಗಿ ವರೆಗೆ ಓಡಿಸಲು ಕ್ರಮವಹಿಸಬೇಕೆಂದು ಒತ್ತಾಯಿಸಿದರು.

ಸಂಸದರ ಭರವಸೆ:

ಮನವಿ ಸ್ವೀಕರಿಸಿದ ಸಂಸದ ಹಿಟ್ನಾಳ, ಕುಷ್ಟಗಿ-ಬೆಂಗಳೂರು ರೈಲು ಓಡಿಸುವ ಕುರಿತು ರೈಲ್ವೆ ಸಚಿವರಿಗೆ ಪತ್ರ ಬರೆಯಲಾಗುವುದು. ಕುಷ್ಟಗಿಯಿಂದ ಹುಬ್ಬಳ್ಳಿಗೆ ಮತ್ತೊಂದು ರೈಲು ಓಡಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದರು.

ಈ ವೇಳೆ ರೈಲ್ವೆ ಹೋರಾಟ ಸಮಿತಿ ಪ್ರಮುಖರಾದ ಬಾಬು ಘೋರ್ಪಡೆ, ಮಹಾಂತೇಶ ಮಂಗಳೂರು, ಪುರಸಭೆ ಸದಸ್ಯ ಜೆ.ಜೆ. ಆಚಾರ, ಆಶೀಫ್‌ ಡಾಲಾಯತ ಸೇರಿದಂತೆ ಅನೇಕರು ಇದ್ದರು.